ಹರೆಯದ ಹುಡ್ಗೀರ ಖೆಡ್ಡಾ ; ಪಿಯುಸಿ ರಾಣಿಯರಿಗೆ ಸಖತ್ ಡಿಮ್ಯಾಂಡ್, ಹುಕ್ಕಾ ಬಾರ್, ವಿಡಿಯೋ ಬ್ಲಾಕ್ಮೇಲ್, ವೇಶ್ಯಾವಾಟಿಕೆ ಟ್ರಾಪ್! ಮಹಿಳೆಯರೇ ಪಿಂಪ್, ಮತ್ತೆ ಏಳು ಜನ ಅರೆಸ್ಟ್ !

10-02-22 11:40 am       Mangalore Correspondent   ಕ್ರೈಂ

ಕಾಲೇಜು ಕಲಿಯಲು ಹೋಗುವ ಪಿಯುಸಿ ವಿದ್ಯಾರ್ಥಿನಿಯರನ್ನೇ ವೇಶ್ಯಾವಾಟಿಕೆಗೆ ಬಳಸಿಕೊಳ್ಳುವ ಹೀನ ದಂಧೆ ಮಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಮಂಗಳೂರು, ಫೆ.9 : ಕಾಲೇಜು ಕಲಿಯಲು ಹೋಗುವ ಪಿಯುಸಿ ವಿದ್ಯಾರ್ಥಿನಿಯರನ್ನೇ ವೇಶ್ಯಾವಾಟಿಕೆಗೆ ಬಳಸಿಕೊಳ್ಳುವ ಹೀನ ದಂಧೆ ಮಂಗಳೂರಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆದರೆ, ವೇಶ್ಯಾವಾಟಿಕೆ ಅಷ್ಟೇ ಅಲ್ಲ, ಅಪ್ರಾಪ್ತ ಯುವತಿಯರನ್ನು ಲೈಂಗಿಕವಾಗಿ ಬಳಸ್ಕೊಂಡು ಅವರದೇ ವಿಡಿಯೋ ಮಾಡಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದ ವಿಚಾರವೂ ತನಿಖೆಯಲ್ಲಿ ಬಯಲಾಗಿದೆ. ಹದಿಹರೆಯದ ವಯಸ್ಸಲ್ಲಿ ಬೇಲಿ ಹಾರುವ ಯುವತಿಯರನ್ನೇ ಗಾಳ ಹಾಕಿ ದಂಧೆಗೆ ನೂಕುತ್ತಿದ್ದರು. ಇದರ ಹಿಂದೆ ವ್ಯವಸ್ಥಿತ ಜಾಲವೇ ಅಡಗಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಸಿಸಿಬಿ ಪೊಲೀಸರು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧಿಸಿ ಮತ್ತೆ ಏಳು ಮಂದಿಯನ್ನು ಬಂಧಿಸಿದ್ದು, ಅದರಲ್ಲಿ ಐದು ಮಂದಿ ಪುರುಷರು, ಇಬ್ಬರು ಮಹಿಳೆಯರಿದ್ದಾರೆ. ಸಂದೀಪ್ ಹೊಸಬೆಟ್ಟು(33), ಸಿಪ್ರಿಯಾನ್ ಅಂಡ್ರಾದೆ ಕೈಕಂಬ(40), ಮಹಮ್ಮದ್ ಶರೀಫ್ (46), ಉಮ್ಮರ್ ಕುನ್ನಿ (43), ಮಹಮ್ಮದ್ ಹನೀಫ್ (43), ರಹಮತ್ ತಲಪಾಡಿ(46), ಸನಾ ಅಲಿಯಾಸ್ ಅಸ್ಮಾ(24) ಬಂಧಿತರು. ಫೆ.7ರಂದು ಅತ್ತಾವರದ ನಂದಿಗುಡ್ಡದ ರಿಯಾನ್ ರೆಸಿಡೆನ್ಸಿ ಎಂಬ ಅಪಾರ್ಟ್ಮೆಂಟಿನ ಮನೆಯೊಂದಕ್ಕೆ ದಾಳಿ ನಡೆಸಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದು, ಒಬ್ಬ ಮಹಿಳೆಯನ್ನು ರಕ್ಷಣೆ ಮಾಡಿದ್ದರು.

ಶಮೀನಾ (41) ಎಂಬಾಕೆ ಮನೆಯನ್ನು ನಡೆಸುತ್ತಿದ್ದು, ಆಕೆಯ ಗಂಡ ಎನ್ನಲಾದ ಅಬುಬಕ್ಕರ್ ಸಿದ್ದಿಕ್(42) ಉಪ್ಪಳ ಮತ್ತು ಇನ್ನೊಬ್ಬ ಮಹಿಳೆ ಐಸಮ್ಮ ಎಂಬವರನ್ನು ಬಂಧಿಸಲಾಗಿತ್ತು. ದಾಳಿ ವೇಳೆ ಮನೆಯಲ್ಲಿದ್ದ ಮೊಹಮ್ಮದ್ ಶರೀಫ್ ಎಂಬ ವ್ಯಕ್ತಿಯನ್ನೂ ಬಂಧಿಸಲಾಗಿತ್ತು. ಇವರ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿಗಳು ತಿಳಿದುಬಂದಿದ್ದು, ಅದರಂತೆ ಪೊಲೀಸರ ಕಾರ್ಯಾಚರಣೆ ಮುಂದುವರಿದಿತ್ತು. ದಾಳಿ ಸಂದರ್ಭದಲ್ಲಿ ಉಪ್ಪಳದ ಹಿಂದು ಮಹಿಳೆಯೊಬ್ಬರು ಅಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಈಗ ಬಂಧಿತ ಹತ್ತು ಮಂದಿಯ ವಿರುದ್ಧವೂ ಪೋಕ್ಸೋ ಕೇಸು ದಾಖಲಿಸಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ !

ಒಂದು ತಿಂಗಳ ಹಿಂದೆ ಮಂಗಳೂರಿನ ಚೈಲ್ಡ್ ಲೈನ್ ಸೆಂಟರಿಗೆ ಈ ಬಗ್ಗೆ ಮಾಹಿತಿ ಬಂದಿತ್ತು. ಪಿಯುಸಿ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸ್ಕೊಂಡು ಶೋಷಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯಡಿ ಅಲ್ಲಿನ ಸಿಬಂದಿ ವಿವಿಧ ಕಾಲೇಜುಗಳಿಗೆ ತೆರಳಿ ಪರಿಶೀಲನೆಯಲ್ಲಿ ತೊಡಗಿದ್ದರು. ಆದರೆ, ಇಂಥ ಮಾಹಿತಿಯನ್ನು ಕಾಲೇಜಿನಲ್ಲಿ ಹೇಳುವ ಹಾಗಿಲ್ಲ. ಪತ್ತೆ ಮಾಡುವುದು ಹೇಗೆಂದು ಚಿಂತಿಸಿದ ಚೈಲ್ಡ್ ಲೈನ್ ಕೇಂದ್ರದ ರೆನ್ನಿ ಡಿಸೋಜ, ತಮ್ಮ ಸಿಬಂದಿಯ ಮೂಲಕ ವಿವಿಧ ರೀತಿಯಲ್ಲಿ ಮಾಹಿತಿ ಸಂಗ್ರಹಿಸ ತೊಡಗಿದ್ದರು. ಮಂಗಳೂರಿನ ಒಂದು ಸರಕಾರಿ ಕಾಲೇಜು ಮತ್ತು ಮೂರು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಈ ಬಗ್ಗೆ ಮಾಹಿತಿ ಕಲೆಹಾಕಿದ್ದು, ದೀರ್ಘ ಕಾಲ ರಜೆ ಹಾಕುವ ವಿದ್ಯಾರ್ಥಿನಿಯರನ್ನು ಪತ್ತೆ ಮಾಡಿದ್ದರು.

ದೀರ್ಘ ರಜೆಗೆ ಕಾರಣವೇನು ಎಂಬ ಬಗ್ಗೆ ಪರಿಶೀಲನೆಯಲ್ಲಿ ತೊಡಗಿದಾಗ, ಮನೆಯವರಿಗೆ ತಮ್ಮ ಮಕ್ಕಳು ಕಾಲೇಜಿಗೆ ಬಂಕ್ ಹೊಡೆಯುವುದು ಗೊತ್ತೇ ಇರಲಿಲ್ಲ. ಈ ಬಗ್ಗೆ ಕಾಲೇಜಿನಲ್ಲಿ ಕೇಳಿದರೆ, ಅವರಿಗೂ ರಜೆಯ ಬಗ್ಗೆ ಮಾಹಿತಿ ಇರಲಿಲ್ಲ. ಯುವತಿಯರು ಸರದಿಯಂತೆ ವಾರದಲ್ಲಿ ನಿರ್ದಿಷ್ಟ ದಿನಗಳಲ್ಲಿ ಕಾಲೇಜಿಗೆ ರಜೆ ಹಾಕುತ್ತಿದ್ದವರೂ ಇದ್ದರು. ಈ ಪೈಕಿ 15 ಮಂದಿಯನ್ನು ಪತ್ತೆ ಮಾಡಿ, ವ್ಯಕ್ತಿಗತವಾಗಿ ಚೀಟಿ ಕೊಟ್ಟು ಮಾಹಿತಿ ಸಂಗ್ರಹಿಸಿದಾಗ ಕೆಲವು ವಿಚಾರಗಳು ಹೊರಬಂದಿದ್ದವು. ತಮ್ಮನ್ನು ಕೆಲವರು ಶೋಷಣೆ ಮಾಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಆರು ಮಂದಿ ಖಚಿತ ಸುಳಿವನ್ನು ನೀಡಿದ್ದರು. ಆದರೆ ಈ ಬಗ್ಗೆ ಪೊಲೀಸ್ ದೂರು ಕೊಡಲು ಮುಂದೆ ಬಂದಿರಲಿಲ್ಲ.

ಈ ಬಗ್ಗೆ ಚೈಲ್ಡ್ ಲೈನ್ ಸಿಬಂದಿ ಮಂಗಳೂರು ನಗರ ಪೊಲೀಸ್ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ಮಾಹಿತಿ ನೀಡಿ ಸೂಕ್ತ ಕಾರ್ಯಾಚರಣೆಗೆ ಮನವಿ ಮಾಡಿದ್ದರು. ಕೂಡಲೇ ಎಚ್ಚೆತ್ತ ಡಿಸಿಪಿ, ಅತ್ತಾವರದ ಅಪಾರ್ಟ್ಮೆಂಟಿಗೆ ದಾಳಿ ನಡೆಸಿದ್ದು, ಅಲ್ಲಿ ರೆಡ್ ಹ್ಯಾಂಡ್ ಆಗಿ ನಾಲ್ವರು ಸಿಕ್ಕಿಬಿದ್ದಿದ್ದರು. ಬಂಧಿತರ ಮೊಬೈಲ್ ತಪಾಸಣೆ ನಡೆಸಿದಾಗ, ಜಾಲದ ಒಟ್ಟು ಹೂರಣ ಬಯಲಾಗಿತ್ತು. ಹುಡುಗಿಯರ ನೆಟ್ವರ್ಕ್ ಮೊಬೈಲಿನಲ್ಲೇ ನಡೆಯುತ್ತಿದ್ದುದರಿಂದ ಎಲ್ಲವೂ ಪೊಲೀಸರ ಕೈಸೇರಿತ್ತು.

ಹುಡ್ಗೀರ ಟ್ರಾಪ್ ಮಾಡುತ್ತಿದ್ದ ಹುಕ್ಕಾ ಬಾರ್

ಮಂಗಳೂರಿನ ಪ್ರಮುಖ ಜಾಗವೊಂದರಲ್ಲಿ ಹುಕ್ಕಾ ಬಾರ್ ಒಂದಿದ್ದು, ಅಲ್ಲಿಗೆ ಅಪ್ರಾಪ್ತರು ತೆರಳುವಂತಿಲ್ಲ ಎಂಬ ನಿಯಮ ಇದೆ. ಕಾನೂನು ವ್ಯಾಪ್ತಿಯಡಿ ಪರ್ಮಿಶನ್ ಪಡೆದು ಹುಕ್ಕಾ ಬಾರ್ ನಡೆಯುತ್ತಿದ್ದರೂ ಅಲ್ಲಿ ನಿರ್ದಿಷ್ಟ ಫ್ಲೇವರ್ ಬಿಟ್ಟು ಬೇರೆಯದನ್ನು ಸಪ್ಲೈ ಮಾಡುವಂತಿಲ್ಲ. ಆದರೆ ಅಲ್ಲಿಗೆ ಕಾಲೇಜಿನ ಪಿಯುಸಿ ಹುಡುಗಿಯರು ತಮ್ಮ ಸಮವಸ್ತ್ರದಲ್ಲಿಯೇ ಹೋಗುತ್ತಿರುವುದು ಕಂಡುಬಂದಿದೆ. ತಮ್ಮ ಬಾಯ್ ಫ್ರೆಂಡ್ ಗಳ ಜೊತೆಗೆ ಹುಕ್ಕಾ ಬಾರ್ ಗೆ ಬರುತ್ತಿದ್ದ ಹದಿಹರೆಯದ ಹುಡುಗಿಯರನ್ನು ಅಲ್ಲಿ ಅಮಲೇರುತ್ತಿದ್ದಂತೆ ನೇರವಾಗಿ ಅತ್ತಾವರದ ಫ್ಲಾಟಿಗೆ ಕರೆತರುತ್ತಿದ್ದರು ಅನ್ನುವ ಮಾಹಿತಿಗಳಿವೆ. ಹುಡುಗಿಯರನ್ನು ಅತ್ತಾವರದ ಲಾಡ್ಜ್ ಕಂ ಮನೆಗೆ ಕರೆತರುವಲ್ಲಿ ಹುಕ್ಕಾ ಬಾರ್ ಗೆ ಬರುತ್ತಿದ್ದ ಗಿರಾಕಿಗಳ ಕೈವಾಡವೂ ಇದೆ.

ಹುಕ್ಕಾ ಬಾರಿಗೂ ಇದಕ್ಕೂ ಸಂಬಂಧ ಇಲ್ಲ ಎಂದರೂ, ಅಲ್ಲಿಂದಲೇ ಈ ರೀತಿಯ ಟ್ರಾಪ್ ಆಗ್ತಿತ್ತು ಅನ್ನೋದನ್ನು ಪತ್ತೆ ಮಾಡಲಾಗಿದೆ. ಆದರೆ, ಹೀಗೆ ಒಮ್ಮೆ ಆ ಮನೆಗೆ ಎಂಟ್ರಿ ಕೊಡುತ್ತಿದ್ದ ಯುವತಿಯರನ್ನು ಆಬಳಿಕ ಅಲ್ಲಿನ ಸಿಸಿಟಿವಿ ಮತ್ತು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ಬ್ಲಾಕ್ಮೇಲ್ ಮಾಡಲಾಗುತ್ತಿತ್ತು. ಸರದಿಯಂತೆ, ಹೊಸ ಹೊಸ ಹುಡ್ಗಿಯರನ್ನು ಅಲ್ಲಿಗೆ ಕರೆತರಲಾಗುತ್ತಿತ್ತು. ಅಪ್ರಾಪ್ತರನ್ನು ಅನುಭವಿಸುವುದಕ್ಕೆಂದೇ ನಿರ್ದಿಷ್ಟ ವರ್ಗದ ಯುವಕರು ಗ್ರಾಹಕರಾಗಿ ಬರುತ್ತಿದ್ದರು. ಪಿಯುಸಿ, ಡಿಗ್ರಿ ಓದುವ ಹುಡುಗಿಯರು ಅಲ್ಲಿ ಖಾಯಂ ವೇಶ್ಯೆಯರಾಗಿದ್ದರು. ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ಮಾಡಿ, ನಿರ್ದಿಷ್ಟ ದಿನಗಳಂದು ಕರೆದಾಗ ಬರಬೇಕೆಂದು ಷರತ್ತು ವಿಧಿಸಲಾಗುತ್ತಿತ್ತು.

ಹೇಳಿದ ಸಮಯಕ್ಕೆ ಬರದೇ ಇದ್ದರೆ, ವಿಡಿಯೋವನ್ನು ಜಾಲತಾಣದಲ್ಲಿ ಬಿಟ್ಟು ಮರ್ಯಾದೆ ತೆಗೆಯುತ್ತೇವೆಂದು ಬೆದರಿಸುತ್ತಿದ್ದರು. ಮನೆಯವರಿಗೆ ತಿಳಿಯುತ್ತದೆ, ಮಾನ ಹೋಗುತ್ತದೆ ಎಂದು ಅಂಜಿಕೊಂಡು ಯುವತಿಯರು ಕಾಲೇಜಿಗೆ ಚಕ್ಕರ್ ಹೊಡೆದು ಅಲ್ಲಿಗೆ ತೆರಳುತ್ತಿದ್ದರು. ಹೀಗಾಗಿ ಒಮ್ಮೆ ಖೆಡ್ಡಾಕ್ಕೆ ಬಿದ್ದವರು ಅಲ್ಲಿ ಸರದಿಯಂತೆ ಹೋಗಬೇಕಾಗಿತ್ತು. ಅಷ್ಟೇ ಅಲ್ಲ, ಇದಕ್ಕಾಗಿ ಸೂಕ್ತ ರೀತಿಯ ಸಂಭಾವನೆಯನ್ನೂ ಕೊಡುತ್ತಿದ್ದರು. ಉಪ್ಪಳದ ಮಹಿಳೆಯೊಬ್ಬರನ್ನು ಪರಿಚಯದ ಮುಸ್ಲಿಂ ಮಹಿಳೆ, ಮಂಗಳೂರಿನಲ್ಲಿ ಕೆಲಸ ತೆಗೆಸಿಕೊಡುತ್ತೇನೆಂದು ಹೇಳಿ ಕರೆಸಿಕೊಂಡಿದ್ದರು. ಆನಂತರ, ಅತ್ತಾವರಕ್ಕೆ ಕರೆತಂದು ತಮ್ಮ ದಾಳಕ್ಕೆ ಬೀಳಿಸಿದ್ದರು. ಆ ಮಹಿಳೆಯನ್ನು ದಾಳಿ ನಡೆದ ಒಂದೇ ದಿನ ನಾಲ್ಕು ಪುರುಷರು ಬಳಸಿಕೊಂಡಿದ್ದರು ಅನ್ನುವುದು ಅಲ್ಲಿನ ದಂಧೆಗೆ ಕನ್ನಡಿ ಹಿಡಿಯುತ್ತದೆ.

ಪೊಲೀಸ್ ದಾಳಿ ವೇಳೆ ಕೊಠಡಿಯಲ್ಲಿ ಅಮಲು ಪದಾರ್ಥದ ಪೌಡರ್, ನಾಲ್ಕು ಮೂಲೆಯಲ್ಲಿ ಇಡಲಾಗಿದ್ದ ಕ್ಯಾಮರಾ, ಕಾಂಡೋಮ್ ಪ್ಯಾಕೆಟ್ ಗಳು ಪತ್ತೆಯಾಗಿದ್ದವು. ಪೊಲೀಸರ ಒತ್ತಾಯದ ಮೇರೆಗೆ 17 ವರ್ಷದ ಪಿಯುಸಿ ಹುಡುಗಿಯೊಬ್ಬಳು ಮಹಿಳಾ ಠಾಣೆಗೆ ದೂರು ನೀಡಿದ್ದು, ಅದರಂತೆ ಕಾರ್ಯಾಚರಣೆ ನಡೆಸಲಾಗಿತ್ತು. ಸದ್ಯಕ್ಕೆ ಬಂಧಿತರಲ್ಲಿ ಮೂವರು ಮಹಿಳೆಯರು ಈ ಜಾಲದಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಆದರೆ, ಈ ಜಾಲ ಅತ್ತಾವರದ ಮನೆಯಲ್ಲಿ ಮಾತ್ರವಲ್ಲ. ಲಾಡ್ಜ್ ಕೇಂದ್ರೀಕರಿಸಿಯೂ ನಡೆಯುತ್ತಿತ್ತು. ಧರ್ಮದ ಲೇಪ ಇಲ್ಲದೆ ಹುಡುಗ- ಹುಡುಗಿಯರು ಸೇರುತ್ತಿದ್ದರು. ಹರೆಯದ ಯುವತಿಯರಿಗೆ ಡಿಮ್ಯಾಂಡ್ ಹೆಚ್ಚಿದ್ದುದರಿಂದ ಇದಕ್ಕೆ ಪೇಮೆಂಟ್ ಕೂಡ ಸಖತ್ತಾಗಿಯೇ ಇರುತ್ತಿತ್ತು. ಆದರೆ ಈ ಜಾಲದಲ್ಲಿ ಈಗ ಪತ್ತೆಯಾಗಿರುವುದು ಒಂದು ಸ್ಯಾಂಪಲ್ ಅಷ್ಟೇ.

ಕಾಲೇಜಿಗೆ ತೆರಳುವ ಯುವತಿಯರಿಗೆ ಗಾಳ ; ಆಮಿಷವೊಡ್ಡಿ ಅಪಾರ್ಟ್ಮೆಂಟಿನಲ್ಲಿ ವೇಶ್ಯಾವಾಟಿಕೆ ದಂಧೆ, ದಂಪತಿ ಸೇರಿ ಮೂವರ ಸೆರೆ

Seven more have been arrested in connection to case where minor girls and women were forced into prostitution with false entrapments and by blackmail in SMR Liana Apartments near Nandigudda of Attavar in the city. The total arrests made in the case have risen to 10,” informed police commissioner N Shashi Kumar in a press meet on Wednesday February 9. This is an organized prostitution racket. Among the 10 arrested, 7 accused were operating in a gang while three are clients who sexually assaulted the minor. The minor came in contact with one of the accused who was previously arrested. The accused developed contact with the minor by giving her gifts and money taking her into confidence.