ಸುರತ್ಕಲ್ ಟೋಲ್ ಅಕ್ರಮ ; ಹೋರಾಟದ ವೇದಿಕೆಗೆ ನುಗ್ಗಿದ ಮಂಗಳಮುಖಿಯರು ! ಪೊಲೀಸರ ಮುಂದೆಯೇ ಹಲ್ಲೆ ಯತ್ನ, ಪ್ಯಾಂಟ್, ಶರ್ಟ್ ಬಿಚ್ಚಿ ಅಶ್ಲೀಲ ರಂಪಾಟ ! 

16-02-22 11:17 am       Mangalore Correspondent   ಕ್ರೈಂ

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ನೇತೃತ್ವದಲ್ಲಿ ನಡೆಯುತ್ತಿರುವ ಟೋಲ್ ಗೇಟ್ ವಿರೋಧಿ ಹೋರಾಟದ ವೇದಿಕೆಗೆ ಮಂಗಳವಾರ ರಾತ್ರಿ ಮಂಗಳಮುಖಿಯರು ನುಗ್ಗಿದ್ದು ಅಶ್ಲೀಲವಾಗಿ ನಡೆದುಕೊಂಡಿದ್ದಲ್ಲದೆ, ಆಸಿಫ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. 

ಮಂಗಳೂರು, ಫೆ.16 : ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ನೇತೃತ್ವದಲ್ಲಿ ನಡೆಯುತ್ತಿರುವ ಟೋಲ್ ಗೇಟ್ ವಿರೋಧಿ ಹೋರಾಟದ ವೇದಿಕೆಗೆ ಮಂಗಳವಾರ ರಾತ್ರಿ ಮಂಗಳಮುಖಿಯರು ನುಗ್ಗಿದ್ದು ಅಶ್ಲೀಲವಾಗಿ ನಡೆದುಕೊಂಡಿದ್ದಲ್ಲದೆ, ಆಸಿಫ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. 

ಏಳೆಂಟು ಮಂದಿಯಿದ್ದ ಮಂಗಳಮುಖಿಯರು ತಮ್ಮ ಶರ್ಟ್, ಪ್ಯಾಂಟ್ ಬಿಚ್ಚಿ ತೋರಿಸಿ ಅವಾಚ್ಯ ಮತ್ತು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಆಸಿಫ್ ಫೇಸ್ಬುಕ್ ಲೈವ್ ಮಾಡುತ್ತಿದ್ದಾರೆಂದು ತಿಳಿದು, ನಮ್ಮದನ್ನೂ ತೋರಿಸು ಎಂದು ಪ್ಯಾಂಟ್ ಬಿಚ್ಚಿದ್ದಾರೆ‌. ಅವಾಚ್ಯವಾಗಿ ನಿಂದಿಸಿ, ಹಣ ಕೊಡುವಂತೆ ಪೀಡಿಸಿದ್ದಾರೆ. ಅಲ್ಲಿದ್ದ ಪೊಲೀಸ್ ಪೇದೆ ಅಸಹಾಯಕನಾಗಿ ಅವರನ್ನು ಮನವೊಲಿಸಲು ಯತ್ನಿಸಿದರೂ, ಮಂಗಳಮುಖಿಯರು ನಿರ್ಲಕ್ಷ್ಯ ಮಾಡಿದ್ದಾರೆ. 

ಆಸಿಫ್ ಫೇಸ್ಬುಕ್ ಲೈವ್ ಮಾಡಿದ ಬಳಿಕ ಅವರ ಪರವಾಗಿ ಸ್ಥಳೀಯರು ಜಮಾಯಿಸಿದ್ದು ಆನಂತರ ವೇದಿಕೆ ಬಿಟ್ಟು ಕದಲಿದ್ದಾರೆ. ಟೋಲ್ ಗೇಟ್ ನಡೆಸುವ ಮಂದಿಯೇ ಮಂಗಳಮುಖಿಯರನ್ನು ಅಲ್ಲಿಗೆ ಕಳಿಸಿ, ರಂಪಾಟ ನಡೆಸುವಂತೆ ಮಾಡಿದ್ದಾರೆ. ಆಮೂಲಕ ಟೋಲ್ ಗೇಟ್ ವಿರೋಧಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ ಎಂದು ಆಸಿಫ್ ಆರೋಪಿಸಿದ್ದಾರೆ. ‌ಅಲ್ಲಿಗೆ ಬಂದಿದ್ದ ಮಂಗಳಮುಖಿಯರು ಕುಡಿದ ಮತ್ತಿನಲ್ಲಿದ್ದರು.‌ ಈ ರೀತಿ ವರ್ತಿಸಿದ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಸಿಫ್ ಆಗ್ರಹಿಸಿದ್ದಾರೆ. 

ಕಳೆದ ಹತ್ತು ದಿನಗಳಿಂದ ಸುರತ್ಕಲ್ ಟೋಲ್ ಗೇಟ್ ಬಳಿ ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿ ಆಸಿಫ್ ಪ್ರತಿಭಟನೆ ನಡೆಸುತ್ತಿದ್ದು ಟೋಲ್ ಗೇಟ್ ಬಂದ್ ಮಾಡಿಯೇ ತೀರುತ್ತೇವೆಂದು ಸ್ಥಳೀಯರು ಆಸಿಫ್ ಜೊತೆಗೆ ನಿಂತಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದು ಕಳೆದ ಎರಡು ವರ್ಷಗಳಿಂದ ನಿಲ್ಲಿಸುತ್ತೇವೆ ಎಂದು ಹೇಳುತ್ತಲೇ ಮುಂದುವರಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕೃಪೆಯಿಂದ ಈ ಟೋಲ್ ಗೇಟ್ ನಡೆಯುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

Asif Apatbandhava, a social worker, has been holding protest in unique form near the tollgate at Surathkal for the last some days, demanding the removal of the tollgate which he claims is illegal. A few transgenders reportedly tried to attack him past midnight on Tuesday February 15. Initially, at about 12.30 am, two transgenders came to him. A little while later, a gang of transgenders came there.