ಮೊಟೊರೊಲಾ ಎಡ್ಜ್ 40 ಲಾಂಚ್‌: ಮಾರುಕಟ್ಟೆಯಲ್ಲಿ ಸಂಚಲನ ಆರಂಭ!

23-05-23 09:03 pm       HK News Desk   ಡಿಜಿಟಲ್ ಟೆಕ್

ಮೊಟೊರೊಲಾ ಈಗಾಗಲೇ ಸಾಕಷ್ಟು ಸುಧಾರಿತ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ.

ಮೊಟೊರೊಲಾ ಈಗಾಗಲೇ ಸಾಕಷ್ಟು ಸುಧಾರಿತ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಮೊಟೊರೊಲಾ ಎಡ್ಜ್ 40 ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್ ಕರ್ವ್ಡ್ ಡಿಸ್‌ಪ್ಲೇ ಹಾಗೂ ವಾಯರ್‌ಲೆಸ್‌ ಚಾರ್ಜಿಂಗ್‌ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ಹೌದು, ಮೊಟೊರೊಲಾ ಇಂದು ಮೊಟೊರೊಲಾ ಎಡ್ಜ್ 40 (Motorola Edge 40) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಈ ಫೋನ್ OIS ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಪಡೆದುಕೊಂಡಿದೆ. ಜೊತೆಗೆ ಮೀಡಿಯಾಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಬಲ ಹೊಂದಿದೆ. ಹಾಗಿದ್ರೆ, ಬನ್ನಿ ಭಾರತದಲ್ಲಿ ಲಾಂಚ್ ಆಗುವ ಮುನ್ನವೇ ಭಾರೀ ಸಂಚಲನ ಉಂಟು ಮಾಡಿದ್ದ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ.

Motorola Edge 40 With MediaTek Dimensity 8020 SoC Launched in India: Price,  Specifications | Technology News

ಮೊಟೊರೊಲಾ ಎಡ್ಜ್ 40 ಡಿಸ್‌ಪ್ಲೇ ವಿವರ: ಈ ಫೋನ್ 6.5 ಇಂಚಿನ ಫುಲ್ ಹೆಚ್‌ಡಿ ಸಾಮರ್ಥ್ಯದ ಕರ್ವ್ಡ್ ಡಿಸ್‌ಪ್ಲೇ ಇದಾಗಿದ್ದು, 2400 x 1080 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 144Hz ನ ರಿಫ್ರೆಶ್ ರೇಟ್‌ ಹಾಗೂ 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ನೀಡಲಿದ್ದು, ಈ ಡಿಸ್‌ಪ್ಲೇ ಯನ್ನು ಸ್ಯಾಂಡ್‌ಬ್ಲಾಸ್ಟೆಡ್ ಅಲ್ಯೂಮಿನಿಯಂ ಬೆಜೆಲ್‌ಗಳಿಂದ ರೂಪಿಸಲಾಗಿದೆ. ಹಾಗೆಯೇ ಈ ಕರ್ವ್ಡ್ 3D ಗ್ಲಾಸ್ ಆಂಟಿಫಿಂಗರ್‌ಪ್ರಿಂಟ್ ಲೇಪನದೊಂದಿಗೆ ಕಾಣಿಸಿಕೊಂಡಿದೆ.

ಮೊಟೊರೊಲಾ ಎಡ್ಜ್ 40 ಪ್ರೊಸೆಸರ್‌ ಮಾಹಿತಿ: ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 5G SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ. ಇದರೊಂದಿಗೆ ಎರಡು ವರ್ಷಗಳ ಓಎಸ್ ನವೀಕರಣ ಮತ್ತು ಮೂರು ವರ್ಷಗಳ ಭದ್ರತಾ ನವೀಕರಣ ಸಹ ಲಭ್ಯ ಇದೆ. ಇನ್ನು 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ.

Motorola Edge 40 with 50MP camera launched in India at Rs 29,999 - The  Economic Times

ಮೊಟೊರೊಲಾ ಎಡ್ಜ್ 40 ಕ್ಯಾಮೆರಾ ರಚನೆ: ಈ ಹೊಸ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಮುಖ ಸೆನ್ಸರ್ ಮತ್ತು 13 ಮೆಗಾಪಿಕ್ಸೆಲ್ ಮ್ಯಾಕ್ರೋ ಅಲ್ಟ್ರಾವೈಡ್ ಲೆನ್ಸ್‌ ಅನ್ನು ಪಡೆದುಕೊಂಡಿದೆ. ಜೊತೆಗೆ ಎರಡು ಎಲ್ಇಡಿ ಫ್ಲ್ಯಾಶ್‌ ಲೈಟ್‌ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಆಕರ್ಷಕವಾಗಿದೆ.

ಮೊಟೊರೊಲಾ ಎಡ್ಜ್ 40 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಮೊಟೊರೊಲಾ ಎಡ್ಜ್ 40 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವಾಯರ್‌ಲೆಸ್‌ ಚಾರ್ಜಿಂಗ್ ಬೆಂಬಲದೊಂದಿಗೆ 4,400mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇನ್ನುಳಿದಂತೆ ಈ ಫೋನ್ ವೈ-ಫೈ 6, ಬ್ಲೂಟೂತ್ ಆವೃತ್ತಿ v5.2 ಮತ್ತು ಜಿಪಿಎಸ್ ಕನೆಕ್ಟಿವಿಟಿ ಬೆಂಬಲಿಸಲಿದ್ದು, ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ.

Motorola Edge 40 Price in India, Sale Date Accidentally Revealed Ahead of  May 23 Launch | Technology News

ಹಾಗೆಯೇ ಸೆಕ್ಯೂರಿಟಿ ವಿಷಯದಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿರುವ ಈ ಫೋನ್‌ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಅದರಲ್ಲೂ IP68 ರೇಟಿಂಗ್ ನೀಡುವ ವಿಭಾಗದಲ್ಲಿ ಇದು ಅತ್ಯಂತ ತೆಳುವಾದ ಫೋನ್ ಎಂದು ಮೊಟೊರೊಲಾ ತಿಳಿಸಿದೆ. ಇದರೊಂದಿಗೆ ಡ್ಯುಯಲ್-ಸಿಮ್-ಬೆಂಬಲ, ಇ-ಸಿಮ್‌ ಬೆಂಬಲದ ಆಯ್ಕೆ ಸಹ ಇದೆ.

ಮೊಟೊರೊಲಾ ಎಡ್ಜ್ 40 ಬೆಲೆ ಹಾಗೂ ಲಭ್ಯತೆ: 40 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನ ಸಿಂಗಲ್‌ ವೇರಿಯಂಟ್‌ಗೆ 29,999ರೂ.ಗಳನ್ನು ನಿಗದಿ ಮಾಡಲಾಗಿದೆ. ಜೊತೆಗೆ ರೆಸೆಡಾ ಗ್ರೀನ್, ಎಕ್ಲಿಪ್ಸ್ ಬ್ಲ್ಯಾಕ್ ಲೆದರ್ ಫಿನಿಶ್‌, ಲೂನಾರ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಈ ಫೋನ್‌ ಕಾಣಿಸಿಕೊಂಡಿದೆ. ಇದನ್ನು ನೀವು ಫ್ಲಿಪ್‌ಕಾರ್ಟ್‌ ಹಾಗೂ ಮೊಟೊರೊಲಾದ ಅಧಿಕೃತ ಸೈಟ್‌ ಮೂಲಕ ಮೇ 30 ರಿಂದ ಖರೀದಿ ಮಾಡಬಹುದಾಗಿದೆ.

ಈ ಫೋನ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಮುಂಗಡ-ಕೋರಿಕೆಗೂ ಲಭ್ಯವಿದ್ದು, ಇದರೊಂದಿಗೆ ಮಾರಾಟದಲ್ಲಿ ಗ್ರಾಹಕರಿಗೆ 3,100 ಮೌಲ್ಯದ ಪ್ರಯೋಜನಗಳನ್ನು ನೀಡಲು ಮೊಟೊರೊಲಾ ಜಿಯೋ ಜೊತೆ ಪಾಲುದಾರಿಕೆ ಹೊಂದಿದೆ. ಇದು 1,000 ಮೌಲ್ಯದ 100GB ಹೆಚ್ಚುವರಿ 5G ಡೇಟಾ ಜೊತೆಗೆ 1,050 ಮೌಲ್ಯದ ಅಜಿಯೋ, ಇಕ್ಸಿಗೋ ಮತ್ತು ಇಟಿ ಪ್ರೈಮ್‌ನ ಕೊಡುಗೆಯನ್ನೂ ಸಹ ನೀಡುತ್ತದೆ.

motorola edge 40 with mediatek dimensity 8020 soc curved display launched.