ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಲಾಂಚ್‌! 32MP ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ವಿಶೇಷ!

25-05-23 06:50 pm       Source: Gizbot   ಡಿಜಿಟಲ್ ಟೆಕ್

ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಮೊಬೈಲ್‌ ವಲಯದಲ್ಲಿ ಟ್ರೆಂಡ್‌ ಸೆಟ್ಟರ್‌ ಅಂತಾನೇ ಹೆಸರುವಾಸಿ. ಪ್ರತಿ ಭಾರಿಯು ನ್ಯೂ ಡಿಸೈನ್‌ನಲ್ಲಿ ಎಂಟ್ರಿ ನೀಡುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲವಿರಲಿದೆ.

ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಮೊಬೈಲ್‌ ವಲಯದಲ್ಲಿ ಟ್ರೆಂಡ್‌ ಸೆಟ್ಟರ್‌ ಅಂತಾನೇ ಹೆಸರುವಾಸಿ. ಪ್ರತಿ ಭಾರಿಯು ನ್ಯೂ ಡಿಸೈನ್‌ನಲ್ಲಿ ಎಂಟ್ರಿ ನೀಡುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲವಿರಲಿದೆ. ಇದೀಗ ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಎಂಟ್ರಿ ನೀಡಿದ್ದು, ಹೊಸ ಸಂಚಲನ ಕ್ರಿಯೆಟ್‌ ಮಾಡಿದೆ.

ಹೌದು, ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಟೆಕ್‌ ಮಾರುಕಟ್ಟೆಯಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ ಸಿಸ್ಟಂನಿಂದಾಗಿ ಇಡೀ ಮೊಬೈಲ್‌ ಮಾರುಕಟ್ಟೆಯನ್ನೇ ದಂಗಾಗುವಂತೆ ಮಾಡಿದೆ. ಇದರ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ ಇದೀಗ ಟ್ರೆಂಡ್‌ ಸೃಷ್ಟಿಸಿದೆ. ಹಾಗಾದ್ರೆ ಶಿಯೋಮಿ Civi 3 ಸ್ಮಾರ್ಟ್‌ಫೋನ್‌ ಡಿಸೈನ್‌ ಹಾಗೂ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Xiaomi Civi 3 With 32-Megapixel Dual Front Camera Launched|ಶಿಯೋಮಿ Civi 3  ಸ್ಮಾರ್ಟ್‌ಫೋನ್‌ ಲಾಂಚ್‌! 32MP ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ವಿಶೇಷ! - Kannada Gizbot

ಶಿಯೋಮಿ Civi 3 ಡಿಸ್‌ಪ್ಲೇ ರಚನೆ: ಶಿಯೋಮಿ Civi 3 ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 240Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ 1500 ಗರಿಷ್ಟ ಬ್ರೈಟ್‌ನೆಸ್‌ ಅನ್ನು ನೀಡಲಿದ್ದು, ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಶಿಯೋಮಿ Civi 3 ಪ್ರೊಸೆಸರ್‌ ಯಾವುದು: ಶಿಯೋಮಿ Civi 3 ಸ್ಮಾರ್ಟ್‌ಫೋನ್ 4nm ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 5G SoC ಪ್ರೊಸೆಸರ್‌ ಹೊಂದಿದೆ. ಇದಕ್ಕೆ ಪುರಕವಾಗಿ ಮಾಲಿ-G610 GPU ಸಪೋರ್ಟ್‌ ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

Xiaomi Civi 3 launch date, refreshed rear design revealed, here's what to  expect - Pricebaba.com Daily

ಶಿಯೋಮಿ Civi 3 ಕ್ಯಾಮೆರಾ ಸೆಟ್‌ಅಪ್‌: ಈ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX800 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರಲ್ಲಿ 32 ಮೆಗಾಪಿಕ್ಸೆಲ್ ಆಟೋಫೋಕಸ್ ಲೆನ್ಸ್‌ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಕ್ಯಾಮೆರಾವನ್ನು ನೀಡಲಾಗಿದೆ.

ಶಿಯೋಮಿ Civi 3 ಬ್ಯಾಟರಿ ಬ್ಯಾಕ್‌ಅಪ್‌: ಶಿಯೋಮಿ Civi 3 ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್‌, NFC, Wi-Fi 6, ಬ್ಲೂಟೂತ್ v5.3 ಮತ್ತು GPS ಸಂಪರ್ಕವನ್ನು ಬೆಂಬಲಿಸಲಿದೆ. ಇದಲ್ಲದೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

New Xiaomi CIVI 3: an inexpensive beast with dual front cameras and 16 GB  of RAM - Crast.net

ಶಿಯೋಮಿ Civi 3 ಬೆಲೆ ಮತ್ತು ಲಭ್ಯತೆ: ಪ್ರಸ್ತುತ ಚೀನಾದಲ್ಲಿ ಈ ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 12GB + 256GB ಆಯ್ಕೆಯು CNY 2,499 (ಅಂದಾಜು 29,300ರೂ)ಬೆಲೆ ಹೊಂದಿದೆ. ಇದರ 12GB + 512GB ಆಯ್ಕೆಯು CNY 2,699 (ಅಂದಾಜು 31,600ರೂ)ಬೆಲೆ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಅಡ್ವೆಂಚರ್ ಗೋಲ್ಡ್, ಕೊಕೊನಟ್ ಗ್ರೇ, ಮಿಂಟ್ ಗ್ರೀನ್ ಮತ್ತು ರೋಸ್ ಪರ್ಪಲ್ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಭಾರತಕ್ಕೆ ಎಂಟ್ರಿ ನೀಡುವ ಕುರಿತು ಯಾವುದೇ ಸುದ್ದಿ ಲಭ್ಯವಿಲ್ಲ.

xiaomi civi 3 with 32 megapixel dual front camera launched.