ಬ್ರೇಕಿಂಗ್ ನ್ಯೂಸ್
26-05-23 07:48 pm Source: Gizbot ಡಿಜಿಟಲ್ ಟೆಕ್
ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟ್ಯಾಬ್‌ಗಳಿಗೂ ಕೂಡ ಹೆಚ್ಚಿನ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ವಿವಿಧ ಬೆಲೆ ಮಾದರಿಗಳಲ್ಲಿ ಟ್ಯಾಬ್ಲೆಟ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದೀಗ ಲೆನೊವೊ ಕಂಪೆನಿ ಕೂಡ ಹೊಸ ಟ್ಯಾಬ್ M9 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೌದು, ಲೆನೊವೊ ಕಂಪೆನಿ ಭಾರತದಲ್ಲಿ ಹೊಸ ಲೆನೊವೊ ಟ್ಯಾಬ್ M9 ಬಿಡುಗಡೆ ಮಾಡಿದೆ. ಇದು ಜೂನ್ 1 ರಿಂದ ಮಾರಾಟಕ್ಕೆ ಬರಲಿದ್ದು, 12,999ರೂ. ಆರಂಭಿಕ ಬೆಲೆಯಲ್ಲಿ ಸೇಲ್ ಆಗಲಿದೆ. ಇನ್ನು ಈ ಸ್ಮಾರ್ಟ್ ಟ್ಯಾಬ್ಲೆಟ್ ಮೀಡಿಯಾ ಟೆಕ್ ಹೆಲಿಯೊ G80 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಲೆನೊವೊ ಟ್ಯಾಬ್ M9 ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಲೆನೊವೊ ಟ್ಯಾಬ್ M9 ಫೀಚರ್ಸ್ ವಿವರ: ಲೆನೊವೊ ಟ್ಯಾಬ್ M9 9 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 1,340 x 800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇನ್ನು ಡಿಸ್‌ಪ್ಲೇ 78.1% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಟ್ಯಾಬ್ ಹಿಂಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿದೆ.
ಲೆನೊವೊ ಟ್ಯಾಬ್ M9 ಮೀಡಿಯಾ ಟೆಕ್ ಹೆಲಿಯೊ G80 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದು ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಿದೆ ಎಂದು ಹೇಳಲಾಗಿದೆ.
ಲೆನೊವೊ ಟ್ಯಾಬ್ M9 ಹಿಂಭಾಗದಲ್ಲಿ ಆಟೋಫೋಕಸ್ ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಆದರೆ ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ಲೆನೊವೊ ಟ್ಯಾಬ್ M9 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ಅನ್ನು ಮಾತ್ರ ಬೆಂಬಲಿಸುತ್ತದೆ. ಇದು ಬ್ಲೂಟೂತ್ 5.1, ಫೇಸ್ ಅನ್‌ಲಾಕ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.
ಲೆನೊವೊ ಟ್ಯಾಬ್ M9 ಭಾರತದಲ್ಲಿ ಟ್ಯಾಬ್ 12,999ರೂ. ಆರಂಭಿಕ ಬೆಲೆಯನ್ನು ಹೊಂದಿದೆ. ಇದು 3GB+32GB ಆಯ್ಕೆಯ ಜೊತೆಗೆ LTE ಸಕ್ರಿಯಗೊಳಿಸಿದ ಮತ್ತು WiFi ಓನ್ಲಿ ಎರಡು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ ಎಂದು ವರದಿಯಾಗಿದೆ. ಇನ್ನು ಈ ಟ್ಯಾಬ್ ಫ್ರಾಸ್ಟ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಬರಲಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಜೂನ್ 1ರಿಂದ ಮಾರಾಟಕ್ಕೆ ಬರಲಿದೆ.
ಇನ್ನು ಲೆನೊವೊ ಕಂಪೆನಿಯ ಇತ್ತೀಚಿನ ಸುದ್ದಿಗಳನ್ನು ಗಮನಿಸುವುದಾದರೆ ಲೆನೊವೊ ಕಂಪೆನಿ ಭಾರತದಲ್ಲಿ ಕೆಲ ತಿಂಗಳ ಹಿಂದೆ ಹೊಸ ಲೆನೊವೊ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್ ಪರಿಚಯಿಸಿದೆ. ಈ ಲ್ಯಾಪ್‌ಟಾಪ್ ವೀಡಿಯೊ ವೀಕ್ಷಣೆ ಮತ್ತು ಗೇಮಿಂಗ್‌ನಲ್ಲಿ ಅತ್ಯುತ್ತಮ ಅನುಭವ ನೀಡಲಿದೆ. ಜೊತೆಗೆ ಈ ಲ್ಯಾಪ್‌ಟಾಪ್ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್ ಬೆಂಬಲಿಸಲಿದ್ದು, ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ.
ಲೆನೊವೊ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್ 15 ಇಂಚಿನ ಫುಲ್ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ವೀಡಿಯೋ ವೀಕ್ಷಣೆ ಮತ್ತು ಗೇಮಿಂಗ್‌ನಲ್ಲಿ ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ AMD Ryzen 3 7320U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, AMD Radeon 610M ಗ್ರಾಫಿಕ್ಸ್ ಕಾರ್ಡ್ ಹೊಂದಿದೆ.
lenovo tab m9 budget tablet with 9 inch display launched in india.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:56 pm
HK News Desk
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm