ಬೋಟ್‌ ಸಂಸ್ಥೆಯ ಈ ಸ್ಮಾರ್ಟ್‌ವಾಚ್‌ಗೆ ಈಗ 79% ಡಿಸ್ಕೌಂಟ್‌!..ಆಫರ್ ಬೆಲೆ ಎಷ್ಟು?

31-05-23 08:15 pm       Source: Gizbot   ಡಿಜಿಟಲ್ ಟೆಕ್

ಭಾರತೀಯ ಮಾರುಕಟ್ಟೆಯಲ್ಲಿ ಬೋಟ್ ಸಂಸ್ಥೆಯು ಪ್ರಮುಖ ಟೆಕ್ ಕಂಪನಿಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಮುಖ್ಯವಾಗಿ ಬೋಟ್ ಸಂಸ್ಥೆಯು ಆಡಿಯೋ ಉತ್ಪನ್ನಗಳು ಹಾಗೂ ಸ್ಮಾರ್ಟ್‌ವಾಚ್ ಡಿವೈಸ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆದಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಬೋಟ್ ಸಂಸ್ಥೆಯು ಪ್ರಮುಖ ಟೆಕ್ ಕಂಪನಿಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಮುಖ್ಯವಾಗಿ ಬೋಟ್ ಸಂಸ್ಥೆಯು ಆಡಿಯೋ ಉತ್ಪನ್ನಗಳು ಹಾಗೂ ಸ್ಮಾರ್ಟ್‌ವಾಚ್ ಡಿವೈಸ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆದಿವೆ. ಆ ಪೈಕಿ ಬೋಟ್‌ ಇತ್ತೀಚಿಗೆ ಬಿಡುಗಡೆ ಮಾಡಿರುವ ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್‌ವಾಚ್‌ ಈಗ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ.

ಹೌದು, ಬೋಟ್‌ ಕಂಪೆನಿ ಹೊಸ 'ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಸ್ಮಾರ್ಟ್‌ವಾಚ್‌' ಅಧಿಕೃತ ಬೋಟ್ (boAt) ವೆಬ್‌ಸೈಟ್‌ನಲ್ಲಿ 79% ನಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಕೊಡುಗೆಯಿಂದಾಗಿ 7,990ರೂ. ಪ್ರೈಸ್‌ ಟ್ಯಾಗ್‌ ಹೊಂದಿರುವ ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಸ್ಮಾರ್ಟ್‌ವಾಚ್‌ 1,699ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

New Smartwatch launch: బ్లూటూత్ కాలింగ్‍తో బోట్ వేవ్ ఫ్లెక్స్ కనెక్ట్  స్మార్ట్‌వాచ్ లాంచ్.. తక్కువ ధరకే!-boat wave flex connect smartwatch  launched check price specifications details

ಅಂದಹಾಗೆ ಈ ಸ್ಮಾರ್ಟ್‌ವಾಚ್‌ ಬ್ಲಡ್‌ ಆಕ್ಸಿಜನ್‌ ಟ್ರ್ಯಾಕರ್‌, IP68 ರೇಟಿಂಗ್, ಬ್ಲೂಟೂತ್ ಕಾಲಿಂಗ್‌ ಮತ್ತು 10 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನುಳಿದಂತೆ ಬೋಟ್‌ ವೇವ್‌ ಫ್ಲೆಕ್ಸ್‌ ಕನೆಕ್ಟ್‌ ಸ್ಮಾರ್ಟ್‌ವಾಚ್‌ ಇತರೆ ಯಾವೆಲ್ಲಾ ಫೀಚರ್ಸ್‌ ಅನ್ನು ಒಳಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ಪ್ರಮುಖ ಫೀಚರ್ಸ್‌ : ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್‌ವಾಚ್‌ 1.83 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 550 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ 2.5D ಕರ್ವ್‌ನೊಂದಿಗೆ ಗರಿಗರಿಯಾದ ಚಿತ್ರದ ಗುಣಮಟ್ಟವನ್ನು ಹೊಂದಿದೆ.

boAt Wave Flex Connect Smartwatch Is Here; Check out the Details! | Beebom

ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರಿಗೆ ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ನಿಯಂತ್ರಿಸಲಿದೆ. ಜೊತೆಗೆ ಸ್ಮಾರ್ಟ್‌ವಾಚ್‌ನಲ್ಲಿ 10 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡಲು ಅನುಮತಿಸಲಿದೆ. ಈ ಸ್ಮಾರ್ಟ್ ವಾಚ್ ಮೈಕ್ರೊಫೋನ್ ಮತ್ತು ಸ್ಪೀಕರ್‌ನೊಂದಿಗೆ ಬರಲಿದೆ.

ಹಾಗೆಯೇ ಈ ವಾಚ್‌ ಬ್ಲೂಟೂತ್, ಬ್ಲೂಟೂತ್ ಕರೆ ಮಾಡುವಿಕೆ, IP68 ಧೂಳು ನಿರೋಧಕ ಹಾಗೂ ವಾಟರ್ ರೆಸಿಸ್ಟೆಂಟ್ ಸೌಲಭ್ಯ, ಹೃದಯ ಬಡಿತ ಮಾನಿಟರ್ ಸೇರಿದಂತೆ SpO2 (ರಕ್ತ ಆಮ್ಲಜನಕ) ಮಾನಿಟರ್ ಸಹ ಮಾಡುವ ಸೌಲಭ್ಯ ಪಡೆದಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಬಳಕೆದಾರರ ಸ್ಲೀಪ್ ಮಾನಿಟರ್, ಕ್ಯಾಲೋರಿ ಎಣಿಕೆ, ಸ್ಟೆಪ್‌ ಕೌಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಔಟ್‌ಡೋರ್ ಆಕ್ಟಿವಿಟಿಗಳಿಗೂ ಇದು ಪೂರಕವಾಗಿದೆ.

boat wave flex connect smartwatch launched at price rs 1499 check details -  Tech news hindi - ₹1500 से कम में बड़े डिस्प्ले और कॉलिंग वाली सस्ती  स्मार्टवॉच, मिलेगी 10 दिन की बैटरी लाइफ

ಬ್ಯಾಟರಿ ಹಾಗೂ ಇತರೆ : ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್‌ವಾಚ್‌ ಸ್ಲಿಪಿಂಗ್‌ ಮತ್ತು ಬ್ಲಡ್‌ ಆಕ್ಸಿಜನ್‌ ಮಾನಿಟರ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್‌ವಾಚ್‌ 100 ಕ್ಲೌಡ್ ವಾಚ್ ಫೇಸ್‌ಗಳನ್ನು ಹೊಂದಿದ್ದು, ವಾಟರ್‌ ಪ್ರೂಫ್‌ಗಾಗಿ IP68 ರೇಟಿಂಗ್‌ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್ ವಾಚ್ 240m Ah ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದನ್ನು ಕೇವಲ 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಬೆಲೆ ಮತ್ತು ಕಲರ್ ಆಯ್ಕೆ : ಭಾರತದಲ್ಲಿ ಬೋಟ್ ವೇವ್ ಫ್ಲೆಕ್ಸ್ ಕನೆಕ್ಟ್ ಸ್ಮಾರ್ಟ್ ವಾಚ್ ಸದ್ಯ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಅಧಿಕೃತ ಬೋಟ್ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ವಾಚ್‌ 1,699ರೂ. ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಸ್ಮಾರ್ಟ್‌ವಾಚ್‌ ಆಕ್ಟಿವ್‌ ಬ್ಲಾಕ್‌, ಚೆರ್ರಿ ಬ್ಲಾಸಮ್ ಮತ್ತು ಡೀಪ್ ಬ್ಲೂ ಬಣ್ಣದ ರೂಪಾಂತರಗಳಲ್ಲಿ ಲಭ್ಯ.

boat wave flex connect smartwatch available at best offer price.