ಭಾರತದಲ್ಲಿ ಏಸರ್‌ ಗೂಗಲ್‌ ಟಿವಿ ಸರಣಿ ಬಿಡುಗಡೆ! ಅಬ್ಬಾ ಏನೆಲ್ಲಾ ಆಯ್ಕೆಗಳು!

01-06-23 11:17 pm       Source: Gizbot   ಡಿಜಿಟಲ್ ಟೆಕ್

ಭಾರತದ ಸ್ಮಾರ್ಟ್‌ಟಿವಿ ವಲಯದಲ್ಲಿ ಏಸರ್‌(Acer) ಕಂಪೆನಿಯ ಟಿವಿಗಳಿಗೆ ಭಾರಿ ಬೇಡಿಕೆಯಿದೆ. ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಏಸರ್‌ ಕಂಪೆನಿ ಸೈ ಎನಿಸಿಕೊಂಡಿದೆ.

ಭಾರತದ ಸ್ಮಾರ್ಟ್‌ಟಿವಿ ವಲಯದಲ್ಲಿ ಏಸರ್‌(Acer) ಕಂಪೆನಿಯ ಟಿವಿಗಳಿಗೆ ಭಾರಿ ಬೇಡಿಕೆಯಿದೆ. ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಏಸರ್‌ ಕಂಪೆನಿ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ O, V, I, G, H, ಮತ್ತು W ಸರಣಿಗಳಲ್ಲಿ ಹಲವು ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ವಿವಿಧ ಸರಣಿಯ ಸ್ಮಾರ್ಟ್‌ಟಿವಿಗಳ ಮೂಲಕ ಭಾರಿ ಸಂಚಲನ ಮೂಡಿಸಿದೆ.

ಹೌದು, ಏಸರ್‌ ಕಂಪೆನಿ O, V, I, G, H, ಮತ್ತು W ಸರಣಿಯಲ್ಲಿ ಆಕರ್ಷಕ ಸ್ಮಾರ್ಟ್‌ಟಿವಿಗಳನ್ನು ಅನಾವರಣಗೊಳಿಸಿದೆ. ಇದರಲ್ಲಿ ಒಂದಕ್ಕಿಂತ ಒಂದು ಸರಣಿಯ ಟಿವಿಗಳು ಗಮನಸೆಳೆಯುತ್ತಿವೆ. ಹಾಗಾದ್ರೆ O, V, I, G, H, ಮತ್ತು W ಸರಣಿಯ ಟಿವಿಗಳ ವಿಶೇಷತೆ ಏನು? ಇವುಗಳ ಬೆಲೆ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Acer Smart TVs: Acer launches Google TV-based smart TVs, including OLEDs  and QLEDs: Details

ಏಸರ್‌ O ಸರಣಿ ಟಿವಿಗಳು: ಏಸರ್‌ ಗೂಗಲ್‌ ಸ್ಮಾರ್ಟ್‌ಟಿವಿಗಳಲ್ಲಿ O ಸರಣಿಯು ವಿಶೇಷವಾಗಿದೆ. ಈ ಸರಣಿಯಲ್ಲಿ 55-ಇಂಚಿನ ಮತ್ತು 65-ಇಂಚಿನ ಆಯ್ಕೆಗಳ ಸ್ಮಾರ್ಟ್‌ಟಿವಿ ಬರಲಿವೆ. ಈ ಎರಡೂ ಮಾದರಿಗಳು OLED ಪ್ಯಾನೆಲ್ ಅನ್ನು ಹೊಂದಿದ್ದು, 60 ವ್ಯಾಟ್ ಸ್ಪೀಕರ್ ಸಿಸ್ಟಮ್‌ ಅನ್ನು ಒಳಗೊಂಡಿವೆ.

ಏಸರ್‌ V ಸರಣಿ ಟಿವಿಗಳು: ಈ ಸರಣಿಯ ಟಿವಿಗಳು QLED ಸ್ಕ್ರೀನ್‌ ಹೊಂದಿವೆ. ಇನ್ನು ಏಸರ್‌ V ಸರಣಿ 43 ಇಂಚಿನ, 50 ಇಂಚಿನ ಮತ್ತು 55 ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಬಜೆಟ್ ಅನ್ನು ವಿಸ್ತರಿಸದೆ QLED ಟಿವಿಯನ್ನು ಬಯಸುವವರಿಗೆ ಈ ಸ್ಮಾರ್ಟ್‌ಟಿವಿಗಳು ಬೆಸ್ಟ್‌ ಎಂದು ಏಸರ್‌ ಸಂಸ್ಥೆ ಹೇಳಿಕೊಂಡಿದೆ.

From 32-Inch To 75-Inch Screens: Acer's Google Smart TVs Offer A Range Of  Options -

ಏಸರ್‌ I ಮತ್ತು G ಸರಣಿ: ಏಸರ್ ಕಂಪೆನಿ ಈ ಸರಣಿಯಲ್ಲಿ 32-ಇಂಚಿನ ಮತ್ತು 40 ಇಂಚಿನ ಟಿವಿಗಳನ್ನು ಪರಿಚಯಿಸಿದೆ. ಇವುಗಳು MEMC, Dolby Atmos, Dolby Vision, UHD ಅಪ್‌ಸ್ಕೇಲಿಂಗ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಜೊತೆಗೆ 16GB ಆನ್‌ಬೋರ್ಡ್ ಮೆಮೊರಿಯೊಂದಿಗೆ ಬರುತ್ತವೆ. ಇದರಲ್ಲಿ ನಿಮ್ಮ ನೆಚ್ಚಿನ ಅಪ್ಲಿಕೇಶನ್‌ಗಳನ್ನು ಸ್ಟೋರೇಜ್‌ ಮಾಡಬಹುದಾಗಿದೆ.

ಏಸರ್‌ H ಸರಣಿ: ಈ ಸರಣಿಯ ವಿಶೇಷತೆ ಎಂದರೆ 76 ವ್ಯಾಟ್ ಸ್ಪೀಕರ್ ಸಿಸ್ಟಮ್ ಅನ್ನು ಸ್ಮಾರ್ಟ್‌ಟಿವಿಗಳಲ್ಲಿ ಕಾಣಬಹುದು. ಜೊತೆಗೆ, ಸಿಸ್ಟಂನಲ್ಲಿ ಬಾಸ್ ಮತ್ತು ಟ್ರಿಬಲ್ ಅನ್ನು ಸುಧಾರಿಸಲಾಗಿದೆ ಎಂದು ಏಸರ್ ಹೇಳಿದೆ. ಏಸರ್‌ W ಸರಣಿ: ಈ ಸರಣಿಯು QLED ಟಿವಿಗಳ ಪ್ರೀಮಿಯಂ ಶ್ರೇಣಿಯಾಗಿದ್ದು, ಎಲ್ಲಾ ಟಿವಿಗಳು ಕೂಡ ಹಗೂಗಲ್‌ ಟಿವಿಯಲ್ಲಿ ಕಾರ್ಯನಿರ್ವಹಿಸಲಿವೆ.

Acer Launches a New Range of Google Televisions in India - Smartprix

ಇನ್ನು ಏಸರ್‌ ಅನಾವರಣಗೊಳಿಸಿರುವ ಗೂಗಲ್‌ ಟಿವಿ ಶ್ರೇಣಿಯು OLED ಮತ್ತು QLED ಡಿಸ್ಪ್ಲೇಗಳನ್ನು ಹೊಂದಿವೆ. ಈ ಸ್ಮಾರ್ಟ್‌ಟಿವಿಗಳು ಡ್ಯುಯಲ್-ಬ್ಯಾಂಡ್ Wi-Fi ಮತ್ತು 2-ವೇ ಬ್ಲೂಟೂತ್ 5.0, ಹಾಗೆಯೇ HDMI 2.1 ಪೋರ್ಟ್‌ಗಳು ಮತ್ತು USB 3.0 ಮತ್ತು ಎಲ್ಲಾ ಆರು ಸರಣಿಗಳಲ್ಲಿ ಎಲ್ಲಾ UHD ಮಾದರಿಗಳಲ್ಲಿ ಡಾಲ್ಬಿ ಅಟ್ಮಾಸ್ ಅನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ ಏಸರ್‌ ಕಂಪೆನಿಯು ಈ ಸರಣಿ ಸ್ಮಾರ್ಟ್‌ಟಿವಿಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್‌ಟಿವಿಗಳಲ್ಲಿ ಏಸರ್ I ಸರಣಿಯು ಜೂನ್ 6 ರಿಂದ ಮಾರಾಟಕ್ಕೆ ಬರಲಿದೆ ಎಂದು ಹೇಳಲಾಗಿದೆ. ಮಾರಾಟದ ದಿನಾಂಕದಂದು ಇವುಗಳ ಬೆಲೆ ವಿವರ ಬಹಿರಂಗವಾಗಲಿದೆ. ಜೊತೆಗೆ ಇನ್ನುಳಿದ ಸರಣಿ ಟಿವಿಗಳ ಬೆಲೆಯು ಕೂಡ ಮಾರಾಟದ ದಿನದಂದು ಬಹಿರಂಗವಾಗಲಿದೆ ಎಂದು ಏಸರ್‌ ಕಂಪೆನಿ ಹೇಳಿದೆ. ಇವುಗಳ ಕಲರ್‌ ಆಯ್ಕೆಯ ಮಾಹಿತಿ ಲಭ್ಯವಿಲ್ಲ.

Acer launches google smart tvs in india here are features.