ಬೋಟ್‌ನಿಂದ ಹೊಸ ವಾಚ್‌ ಅನಾವರಣ.. ಬೆಲೆ ಕೇವಲ 1,599ರೂ. ಮಾತ್ರ

22-08-23 07:31 pm       Source: Gizbot Kannada   ಡಿಜಿಟಲ್ ಟೆಕ್

ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪೆನಿಯ ಡಿವೈಸ್‌ಗಳು ಕೂಡ ಸಾಕಷ್ಟು ಟ್ರೆಂಡ್‌ ಸೃಷ್ಟಿಸಿವೆ. ಇವುಗಳ ವಿನ್ಯಾಸ ಹಾಗೂ ಸ್ಟೈಲಿಶ್‌ ಲುಕ್‌ಗೆ ಯುವಜನತೆ ಫಿದಾ ಆಗಿದ್ದಾರೆ.

ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪೆನಿಯ ಡಿವೈಸ್‌ಗಳು ಕೂಡ ಸಾಕಷ್ಟು ಟ್ರೆಂಡ್‌ ಸೃಷ್ಟಿಸಿವೆ. ಇವುಗಳ ವಿನ್ಯಾಸ ಹಾಗೂ ಸ್ಟೈಲಿಶ್‌ ಲುಕ್‌ಗೆ ಯುವಜನತೆ ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಬೋಟ್‌ ಕಂಪೆನಿ ಕೂಡ ನವೀನ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸದಾಗಿ ಬೋಟ್ ವೇವ್ ನಿಯೋ ಪ್ಲಸ್ ವಾಚ್‌ ಪರಿಚಯಿಸಿದೆ.

ಹೌದು, ಬೋಟ್ ವೇವ್ ನಿಯೋ ಪ್ಲಸ್ ಸ್ಮಾರ್ಟ್‌ವಾಚ್‌ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್‌ 700ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಇನ್ನು ವಾಚ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್‌ಗಳಿಗೆ ಬೆಂಬಲವನ್ನು ಸಹ ಕಲ್ಪಿಸಲಾಗಿದೆ. ಸ್ಮಾರ್ಟ್‌ವಾಚ್‌ನಲ್ಲಿ ಹೃದಯ ಬಡಿತ, SpO2 ಲೆವೆಲ್‌ ಟ್ರ್ಯಾಕಿಂಗ್‌ ಅನ್ನು ಕೂಡ ನೀಡಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ ಅಳವಡಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

boAt Wave Neo Plus with 1.96″ display, Bluetooth Calling launched

ಬೋಟ್ ವೇವ್ ನಿಯೋ ಪ್ಲಸ್ ಫೀಚರ್ಸ್‌ ಹೇಗಿದೆ?

ಬೋಟ್ ವೇವ್ ನಿಯೋ ಪ್ಲಸ್ ಸ್ಮಾರ್ಟ್‌ವಾಚ್‌ 1.96 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಜೊತೆಗೆ ಸ್ಮಾರ್ಟ್‌ವಾಚ್‌ನಲ್ಲಿ ಕಸ್ಟ್‌ಮೈಸ್‌ ವಾಚ್‌ಫೇಸ್‌ಗಳನ್ನು ಸಹ ಆಯ್ಕೆ ಮಾಡಬಹುದಾಗಿದೆ. ಇದು ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ. ಇದರಿಂದ ಸ್ಮಾರ್ಟ್‌ಫೋನ್‌ ಕರೆಗಳನ್ನು ಸ್ಮಾರ್ಟ್‌ವಾಚ್‌ ಮೂಲಕವೇ ಸ್ವೀಕರಿಸುವುದಕ್ಕೆ ಸಾದ್ಯವಾಗಲಿದೆ.

ಇನ್ನು ಸ್ಮಾರ್ಟ್‌ವಾಚ್‌ ಕ್ರೆಸ್ಟ್ ಪ್ಲಸ್ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅನುಕೂಲಕರ ವಾಯ್ಸ್‌ ಕಮಾಂಡ್‌ಗಳಿಗಾಗಿ AI ವಾಯ್ಸ್‌ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ ವಾಚ್‌ನಲ್ಲಿ ಸುಲಭ ಪ್ರವೇಶಕ್ಕಾಗಿ ಕ್ವಿಕ್ ಡಯಲ್ ಪ್ಯಾಡ್‌ನಲ್ಲಿ 10 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡಬಹುದಾಗಿದೆ. ಇದು ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 700 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ IP67 ರೇಟಿಂಗ್‌ ವ್ಯವಸ್ಥೆಯನ್ನು ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡಲಿದೆ.

boAt Wave Neo Plus smartwatch launched in India: price, features,  availability

ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಹೆಲ್ತ್‌ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ. ಇದರಲ್ಲಿ ಹೃದಯ ಬಡಿತ, SpO2 ಲೆವೆಲ್‌, ಸ್ಲಿಪ್‌ ಟ್ರ್ಯಾಕ್‌ ಅನ್ನು ಮೇಲ್ವಿಚಾರಣೆ ಮಾಡಲಿದೆ. ಇದು ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್‌, ವೆದರ್‌ ಅಪ್ಡೇಟ್‌, ಅಲಾರಮ್‌ಗಳು, ಟೈಮರ್‌ಗಳು, ಸ್ಟಾಪ್‌ವಾಚ್ ಮತ್ತು ಫೈಂಡ್ ಮೈ ಫೋನ್ ನಂತಹ ಫೀಚರ್ಸ್‌ಗಳನ್ನು ಸಹ ಹೊಂದಿದೆ. ಸ್ಮಾರ್ಟ್‌ವಾಚ್‌ 260mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬಾಳಿಕೆ ಬರಲಿದೆ.

ಬೆಲೆ ಮತ್ತು ಲಭ್ಯತೆ

ಬೋಟ್ ವೇವ್ ನಿಯೋ ಪ್ಲಸ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,599ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಬೋಟ್ ವೇವ್ ನಿಯೋ ಪ್ಲಸ್ ಸ್ಮಾರ್ಟ್ ವಾಚ್ ಸೇಜ್ ಗ್ರೀನ್, ಮಾರಿಗೋಲ್ಡ್ ಬ್ಲೂ, ಚೆರ್ರಿ ಬ್ಲಾಸಮ್ ಮತ್ತು ಆಕ್ಟಿವ್ ಬ್ಲ್ಯಾಕ್ ಸೇರಿದಂತೆ ಹಲವಾರು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದನ್ನು ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ಬೋಟ್ ವೆಬ್‌ಸೈಟ್‌ನಿಂದ ಖರೀದಿಸಬಹುದಾಗಿದೆ.

boAt Wave Neo Plus: Ultimate Features At Just ₹1599

ಇದಲ್ಲದೆ ಬೋಟ್‌ ಕಂಪೆನಿ ಇತ್ತೀಚಿಗೆ ಬೋಟ್‌ ಅಲ್ಟಿಮಾ ಕಾಲ್ ಸ್ಮಾರ್ಟ್‌ವಾಚ್ 1.83 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕೂಡ ಬ್ಲೂಟೂತ್ ಕರೆಗೆ ಬೆಂಬಲವನ್ನು ನೀಡಲಿದೆ. ಜೊತೆಗೆ 10 ಕಾಂಟ್ಯಾಕ್ಟ್‌ಗಳನ್ನು ಸೇವ್ ಮಾಡಿಕೊಳ್ಳುವ ಆಯ್ಕೆ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಡಯಲ್ ಪ್ಯಾಡ್ ಮತ್ತು ಕಾಂಟ್ಯಾಕ್ಟ್‌ ಸ್ಟೋರೇಜ್‌ ಆಯ್ಕೆಗಳು ಈ ವಾಚ್‌ನ ಪ್ರತಿಸ್ಪರ್ಧಿಗಳಿಗಿಂತ ದೊಡ್ಡ ಪ್ರಯೋಜನವಾಗಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ಗುಲಾಬಿ, ನೀಲಿ ಮತ್ತು ಬೆಳ್ಳಿ ಅಂತಹ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Boat Wave Neo Plus Smartwatch Launched in India.