ವಿಶ್ವದ ಮೊದಲ ಡ್ಯುಯಲ್ UHD ಡಿಸ್‌ಪ್ಲೇ ಪರಿಚಯಿಸಿದ ಸ್ಯಾಮ್‌ಸಂಗ್‌.. ಏನಿದರ ವಿಶೇಷತೆ ?

24-08-23 09:37 pm       Source: Gizbot Kannada   ಡಿಜಿಟಲ್ ಟೆಕ್

ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಆಕರ್ಷಕ ಗೇಮಿಂಗ್‌ ಮಾನಿಟರ್‌ಗಳಿಗೂ ಕೂಡ ಪ್ರಖ್ಯಾತಿ ಪಡೆದಿದೆ. ಅದರಲ್ಲೂ ಒಡಿಸ್ಸಿ ಸರಣಿಯ ಗೇಮಿಂಗ್‌ ಮಾನಿಟರ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಆಕರ್ಷಕ ಗೇಮಿಂಗ್‌ ಮಾನಿಟರ್‌ಗಳಿಗೂ ಕೂಡ ಪ್ರಖ್ಯಾತಿ ಪಡೆದಿದೆ. ಅದರಲ್ಲೂ ಒಡಿಸ್ಸಿ ಸರಣಿಯ ಗೇಮಿಂಗ್‌ ಮಾನಿಟರ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದೀಗ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಸ್ಯಾಮ್‌ಸಂಗ್‌ ಒಡಿಸ್ಸಿ ನಿಯೋ G9 (Samsung Odyssey Neo G9) ಗೇಮಿಂಗ್‌ ಮಾನಿಟರ್‌ ಪರಿಚಯಿಸಿದೆ.

ಹೌದು, Samsung Odyssey Neo G9 ಗೇಮಿಂಗ್‌ ಮಾನಿಟರ್‌ ಅನ್ನು ಅನಾವರಣಗೊಳಿಸಿದೆ. ಇದು ಎರಡು 4K ಡಿಸ್‌ಪ್ಲೇಗಳನ್ನು ಹೊಂದುವುದಕ್ಕೆ ಸಮಾನವಾಗಿದೆ ಎಂದು ಸ್ಯಾಮ್‌ಸಂಗ್‌ ಹೇಳಿದೆ. ಹಾಗಾದ್ರೆ Samsung Odyssey Neo G9 ಗೇಮಿಂಗ್‌ ಮಾನಿಟರ್‌ ಫೀಚರ್ಸ್‌ ವಿಶೇಷತೆ ಏನು? ಇದರ ಬೆಲೆ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Samsung Odyssey Neo G9 Monitor Launched In India; Featuring World's First  Dual UHD Display for a Ground-Breaking Visual Experience: Price,  Specifications

Samsung Odyssey Neo G9 ಫೀಚರ್ಸ್‌ ಹೇಗಿದೆ? Samsung Odyssey Neo G9 ಮೊದಲ ಡ್ಯುಯಲ್ UHD ಕರ್ವ್ಡ್ ಗೇಮಿಂಗ್ ಮಾನಿಟರ್ ಎನಿಸಿಕೊಂಡಿದೆ. ಈ ಮಾನಿಟರ್‌ 1,000R ವಕ್ರತೆಯೊಂದಿಗೆ 7,680 x 2,160 ಪಿಕ್ಸೆಲ್‌ VA- ಮಾದರಿಯ LCD ಪ್ಯಾನೆಲ್ ಅನ್ನು ಒಳಗೊಂಡಿದೆ. ಅಂದರೆ ಈ ಗೇಮಿಂಗ್‌ ಮಾನಿಟರ್‌ ಡಿಸ್‌ಪ್ಲೇ 32:9 ರಚನೆಯ ಅನುಪಾತವನ್ನು ಹೊಂದಿದೆ. ಅಂದರೆ 32 ಇಂಚಿನ ಎರಡು ಪ್ಯಾನೆಲ್‌ಗಳನ್ನು ಅಕ್ಕಪಕ್ಕದಲ್ಲಿ ಹೊಂದುವುದಕ್ಕೆ ಸಮನಾಗಿರುತ್ತದೆ.

ಈ ಡಿಸ್‌ಪ್ಲೇ 240Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ. ಇದು ಹೈ ಲೆವೆಲ್‌ ಗ್ರಾಫಿಕ್ಸ್ ಮತ್ತು SDR ಮತ್ತು HDR ಎರಡರಲ್ಲೂ ಲೋ ಲೇಟೆನ್ಸಿಯನ್ನು ಸಕ್ರಿಯಗೊಳಿಸಲು AMD ಫ್ರೀಸಿಂಕ್ ಪ್ರೀಮಿಯಂ ಪ್ರೊ ಹೊಂದಿದೆ. ಇದಲ್ಲದೆ ಸ್ಯಾಮ್‌ಸಂಗ್ ಕ್ವಾಂಟಮ್ ಮೆಟ್ರಿಕ್ ಟೆಕ್ನಾಲಜಿ ಮತ್ತು ಮಿನಿ-ಎಲ್‌ಇಡಿ ಬ್ಯಾಕ್‌ಲೈಟಿಂಗ್ ಜೊತೆಗೆ ವೆಸಾ ಡಿಸ್‌ಪ್ಲೇ HDR 1000 ಪ್ರಮಾಣೀಕರಣವನ್ನು ಒಳಗೊಂಡಿದೆ. ಇದರ ಸ್ಕ್ರೀನ್‌ ಮೇಲೆ ಲೈಟ್‌ ರಿಪ್ಲೆಕ್ಷನ್‌ ಕಡಿಮೆ ಮಾಡಲು ಮತ್ತು ತೀವ್ರವಾದ ಗೇಮಿಂಗ್ ಸೆಷನ್‌ಗಳಲ್ಲಿ ಗೊಂದಲವನ್ನು ಕಡಿಮೆ ಮಾಡಲು ಮ್ಯಾಟ್ ಫಿಲ್ಮ್ ಅನ್ನು ಹೊಂದಿದೆ.

Samsung Odyssey OLED G9 World's first 49-inch OLED Dual QHD Ultra-Wide  Curved Gaming Monitor | Samsung Hong Kong

ಇನ್ನು ಸ್ಯಾಮ್‌ಸಂಗ್‌ ಒಡಿಸ್ಸಿ G9 ಡಿಸ್‌ಪ್ಲೇ ಪೋರ್ಟ್ 2.1 ಮತ್ತು HDMI 2.1 ಪೋರ್ಟ್‌ಗಳ ಸಂಯೋಜನೆಯನ್ನು ತೋರಿಸಲಿದೆ. ಈ ಫ್ಲ್ಯಾಗ್‌ಶಿಪ್ ಮಾನಿಟರ್ ಡಿಸ್‌ಪ್ಲೇ ಸ್ಟ್ರೀಮ್ ಕಂಪ್ರೆಷನ್ ಅಸ್ಪಷ್ಟತೆ ಇಲ್ಲದೆ ಪ್ರಸರಣವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಒಡಿಸ್ಸಿ ನಿಯೋ G9 ಆಟೋ ಸೋರ್ಸ್ ಸ್ವಿಚ್+ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ. ಇದು ಕನೆಕ್ಟಿವಿಟಿ ಡಿವೈಸ್‌ ಅನ್ನು ಆನ್‌ ಮಾಡಿದಾಗ ಡೆಟೆಕ್ಟ್‌ ಮಾಡಲಿದೆ. ಅಲ್ಲದೆ ಆಟೋಮ್ಯಾಟಿಕ್‌ ಆಗಿ ಹೊಸ ಸಿಗ್ನಲ್ ಮೂಲಕ್ಕೆ ಬದಲಾಯಿಸುತ್ತದೆ.

ಇನ್ನು ಈ ಮಾನಿಟರ್‌ ವಿನ್ಯಾಸದ ವಿಚಾರಕ್ಕೆ ಬಂದರೆ ಇದರ ಎತ್ತರವನ್ನು ಸರಿಹೊಂದಿಸುವ ಹಾಗೂ ಪರಿಪೂರ್ಣ ಕೋನಕ್ಕೆ ಓರೆಯಾಗಿಸಬಹುದಾಗಿದೆ. ಇದಕ್ಕಾಗಿ ದಕ್ಷತಾಶಾಸ್ತ್ರದ ಸ್ಟ್ಯಾಂಡ್‌ನೊಂದಿಗೆ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಇದರ ಹಿಂದಿನ ಪ್ಯಾನೆಲ್‌ನಲ್ಲಿ ಕೋರ್ ಲೈಟಿಂಗ್ + ಮತ್ತು ಕೋರ್‌ಸಿಂಕ್ ಅನ್ನು ನೀಡಲಾಗಿದೆ. ಇದು ಗೇಮಿಂಗ್‌ ಗ್ರಾಫಿಕ್ಸ್ ಅನ್ನು ಅನುಕರಿಸುತ್ತದೆ ಮತ್ತು ಸ್ಕ್ರೀನ್‌ ಮೇಲೆ ಡಿಸ್‌ಪ್ಲೇ ಆಗುವ ವರ್ಣಗಳಿಗೆ ಅನುಗುಣವಾಗಿ ಬಣ್ಣಗಳನ್ನು ಬದಲಾಯಿಸುತ್ತದೆ.

Samsung Odyssey Neo G9, The World's First Dual UHD Monitor Announced At CES  2023 - TechFoogle

ಭಾರತದಲ್ಲಿ Samsung Odyssey Neo G9 ಬೆಲೆ ಮತ್ತು ಲಭ್ಯತೆ ಸ್ಯಾಮ್‌ಸಂಗ್ ಒಡಿಸ್ಸಿ ನಿಯೋ G9 ಗೇಮಿಂಗ್‌ ಮಾನಿಟರ್‌ ಭಾರತದಲ್ಲಿ 2,25,000ರೂ. ಬೆಲೆಯಲ್ಲಿ ಬರಲಿದೆ. ಇದನ್ನು ಬಿಳಿ ಬಣ್ಣದ ಆಯ್ಕೆಯಲ್ಲಿ ಮಾತ್ರ ಪರಿಚಯಿಸಲಾಗಿದೆ. ಇದನ್ನು ನೀವು ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ ಮತ್ತು ಪ್ರಮುಖ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

ಲಾಂಚ್‌ ಆಫರ್‌ ಏನಿದೆ?

ಸ್ಯಾಮ್‌ಸಂಗ್ ಕಂಪೆನಿಯ ಈ ಹೊಸ ಗೇಮಿಂಗ್‌ ಮಾನಿಟರ್‌ ಅನ್ನು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 3,500ರೂ ತನಕ ರಿಯಾಯಿತಿ ಸಿಗಲಿದೆ. ಇದಲ್ಲದೆ ಆಗಸ್ಟ್ 24 ಮತ್ತು ಆಗಸ್ಟ್ 31 ರ ನಡುವೆ ಹೊಸ ಮಾನಿಟರ್ ಅನ್ನು ಖರೀದಿಸಿದರೆ 10,000 ರೂಪಾಯಿಗಳ ತ್ವರಿತ ಕಾರ್ಟ್ ರಿಯಾಯಿತಿ ದೊರೆಯಲಿದೆ.

Samsung Launched Worlds First Dual UHD Display Launched Details.