ಬ್ರೇಕಿಂಗ್ ನ್ಯೂಸ್
25-08-23 07:54 pm Source: Gizbot Kannada ಡಿಜಿಟಲ್ ಟೆಕ್
ವೇರಿಯೇಬಲ್ಸ್ ಆಕ್ಸಿಸರೀಸ್ ವಲಯದಲ್ಲಿ ಬೋಟ್ ಕಂಪೆನಿ ಪ್ರಸಿದ್ಧಿ ಪಡೆದುಕೊಂಡಿದೆ. ವಿಭಿನ್ನ ಶ್ರೇಣಿಯ ವೆರಿಯೆಬಲ್ಸ್ ಡಿವೈಸ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ಸ್ಮಾರ್ಟ್‌ವಾಚ್ ಬೋಟ್ ಲೂನಾರ್ ORB ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ವಾಚ್ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ.
ಹೌದು, ಬೋಟ್ ಲೂನಾರ್ ORB ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಬೆಂಬಲವನ್ನು ಸಹ ಪಡೆದಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಬೋಟ್ ಲೂನಾರ್ ORB ಸ್ಮಾರ್ಟ್‌ವಾಚ್
ಬೋಟ್ ಲೂನಾರ್ ORB ಸ್ಮಾರ್ಟ್‌ವಾಚ್ 1.45 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಆಲ್‌ವೇಸ್ ಆನ್ ಡಿಸ್‌ಪ್ಲೇಯನ್ನು ಬೆಂಬಲಿಸಲಿದೆ. ಅಲ್ಲದೆ DIY ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ಸಹ ನೀಡುತ್ತಿದೆ. ಇದರಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದ್ದು, ಇದಕ್ಕಾಗಿ ಇನ್‌ಬಿಲ್ಟ್ ಮೈಕ್ರೋಫೋನ್ ಅನ್ನು ಒಳಗೊಂಡಿದೆ. ಇದು IP67 ರೇಟಿಂಗ್ ಅನ್ನು ಹೊಂದಿದ್ದು, ನೀರು ಮತ್ತು ಧೂಳಿನಿಂದ ವಾಚ್ ಅನ್ನು ರಕ್ಷಣೆ ಮಾಡಲಿದೆ.
ಬೋಟ್ ಲೂನಾರ್ ORB ಸ್ಮಾರ್ಟ್‌ವಾಚ್ ಬಳಕೆದಾರರ ಆರೋಗ್ಯ ಮಟ್ಟವನ್ನು ಅಳೆಯುವ ಹಲವು ಹೆಲ್ತ್ ಟ್ರ್ಯಾಕರ್‌ಗಳನ್ನು ಸಹ ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಬಳಕೆದಾರರ ಹೃದಯಬಡಿತವನ್ನು ಅಳೆಯುವ ಸೆನ್ಸಾರ್, SpO2 ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯುವ ಸೆನ್ಸಾರ್, ಮಹಿಳೆಯರ ಆರೋಗ್ಯವನ್ನು ಅಳೆಯುವ ಸೆನ್ಸಾರ್ ಮತ್ತು ಸ್ಲಿಪಿಂಗ್ ಟ್ರ್ಯಾಕರ್ ಅನ್ನು ಕೂಡ ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್ 700ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಸಹ ಬೆಂಬಲಿಸಲಿದೆ.
ಈ ಸ್ಮಾರ್ಟ್‌ವಾಚ್ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ನೊಂದಿಗೆ ಬರಲಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಅಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಮೆಟಾಲಿಕ್ ಸ್ಟ್ರಾಪ್ ಆಯ್ಕೆಯನ್ನು ಸಹ ನೀಡಲಾಗ್ತಿದೆ. ಈ ಸ್ಮಾರ್ಟ್‌ವಾಚ್ ಬ್ಲ್ಯಾಕ್, ರೋಸ್, ಗ್ರೀನ್ ಮತ್ತು ಪಿಂಕ್ ಕಲರ್ ಆಯ್ಕೆಗಳಲ್ಲಿ ದೊರೆಯಲಿದೆ.
ಬೋಟ್ ಲೂನಾರ್ ORB ಬೆಲೆ ಮತ್ತು ಲಭ್ಯತೆ
ಬೋಟ್ ಲೂನಾರ್ ORB ಸ್ಮಾರ್ಟ್ ವಾಚ್ 2,199ರೂ ಬೆಲೆಯನ್ನು ಹೊಂದಿದೆ. ಇದು ಆಗಸ್ಟ್ 28ರಂದು ಮೊದಲ ಮಾರಾಟಕ್ಕೆ ಬರಲಿದ್ದು, ಅಮೆಜಾನ್ ಸೈಟ್ ಮೂಲಕ ಖರೀದಿಸಬಹುದಾಗಿದೆ. ಇನ್ನು ಸ್ಮಾರ್ಟ್‌ವಾಚ್‌ನ ಬ್ಲ್ಯಾಕ್ ಕಲರ್ ಆಯ್ಕೆಯು ಮೆಟಾಲಿಕ್ ಸ್ಟ್ರಾಪ್ ಆಯ್ಕೆಯನ್ನು ಸಹ ಹೊಂದಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಇನ್ನು ಇದೇ ಸಂದರ್ಭದಲ್ಲಿ ಇತ್ತೀಚಿಗೆ ಬೋಟ್ ಕಂಪೆನಿ ಪರಿಚಯಿಸಿದ್ದ ಬೋಟ್ ವೇವ್ ನಿಯೋ ಪ್ಲಸ್ ಸ್ಮಾರ್ಟ್‌ವಾಚ್ ಅನ್ನು ಸಹ ಗಮನಿಸಬಹುದು. ಈ ಸ್ಮಾರ್ಟ್‌ವಾಚ್ 1.96 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 550 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ ಕಸ್ಟ್‌ಮೈಸ್ ವಾಚ್‌ಫೇಸ್‌ಗಳನ್ನು ಸಹ ಆಯ್ಕೆಯನ್ನು ನೀಡಿದ್ದು, ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಪಡೆದುಕೊಂಡಿದೆ. ಇನ್ನು ನೀವು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಮೂಲಕ ಸ್ಮಾರ್ಟ್‌ಫೋನ್ ಕರೆಗಳನ್ನು ತೆಗೆದುಕೊಳ್ಳಬಹುದು.
ಇನ್ನು ಸ್ಮಾರ್ಟ್‌ವಾಚ್ ಕ್ರೆಸ್ಟ್ ಪ್ಲಸ್ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅನುಕೂಲಕರ ವಾಯ್ಸ್ ಕಮಾಂಡ್‌ಗಳಿಗಾಗಿ AI ವಾಯ್ಸ್ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿದೆ. ಇದು ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 700 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್ IP67 ರೇಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡಲಿದೆ. ಇದಲ್ಲದೆ ವಾಚ್‌ನಲ್ಲಿ ಸುಲಭ ಪ್ರವೇಶಕ್ಕಾಗಿ ಕ್ವಿಕ್ ಡಯಲ್ ಪ್ಯಾಡ್‌ನಲ್ಲಿ 10 ಕಂಟ್ಯಾಕ್ಟ್‌ಗಳನ್ನು ಸೇವ್ ಮಾಡಬಹುದಾಗಿದೆ.
Boat Lunar ORB with a1 45 Amoled Display Launched in India.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm