50 MP ಸೆಲ್ಫಿ ಕ್ಯಾಮೆರಾದೊಂದಿಗೆ ಲಾಂಚ್‌ ಆಯ್ತು ವಿವೋ V29e: ಬೆಲೆ ಎಷ್ಟು? ಇತರೆ ಫೀಚರ್ಸ್‌ಗಳೇನು?

28-08-23 07:16 pm       Source: Gizbot Kannada   ಡಿಜಿಟಲ್ ಟೆಕ್

ಟೆಕ್‌ ವಲಯವೇ ಬಹಳ ಕುತೂಹಲದಿಂದ ಎದುರುನೋಡುತ್ತಿದ್ದ ವಿವೋದ (Vivo) ಹೊಸ ಫೋನ್ ಕೊನೆಗೂ ಲಾಂಚ್‌ ಆಗಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದುವ ಮೂಲಕ ವಿಶೇಷವಾದ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದ್ದು, ಇದರೊಂದಿಗೆ ಕೆಂಪು ಹಾಗೂ ನೀಲಿ ಬಣ್ಣಗಳಲ್ಲಿ ಜಗಮಗಿಸುತ್ತಿದೆ.

ಟೆಕ್‌ ವಲಯವೇ ಬಹಳ ಕುತೂಹಲದಿಂದ ಎದುರುನೋಡುತ್ತಿದ್ದ ವಿವೋದ (Vivo) ಹೊಸ ಫೋನ್ ಕೊನೆಗೂ ಲಾಂಚ್‌ ಆಗಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದುವ ಮೂಲಕ ವಿಶೇಷವಾದ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದ್ದು, ಇದರೊಂದಿಗೆ ಕೆಂಪು ಹಾಗೂ ನೀಲಿ ಬಣ್ಣಗಳಲ್ಲಿ ಜಗಮಗಿಸುತ್ತಿದೆ. 

ಹೌದು, ಸ್ಮಾರ್ಟ್‌ಫೋನ್‌ ವಲಯದಲ್ಲಿ ವಿವೋ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕಂಪೆನಿಯ ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ನೀಡುವುದಕ್ಕೆ ಹೆಸರಾಗಿದ್ದು, ಈ ಸಾಲಿಗೆ ಈಗ ವಿವೋ V29e (Vivo V29e) ಸ್ಮಾರ್ಟ್‌ಫೋನ್‌ ಸೇರಿಕೊಂಡಿದೆ. ಈ ಫೋನ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಬಲ ಪಡೆದಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಈ ಫೋನ್‌ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

Vivo V29e launch on August 28: Here's what we know so far | Mint

ವಿವೋ V29e ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್‌ ಮಾಡಲಾಗಿದ್ದು, ಹಿಂದಿನ ವಿವೋ V-ಸರಣಿ ಫೋನ್‌ಗಳಂತೆಯೇ, ಹೊಸ ವಿವೋ V29e ಅನ್ನು ಫೋಟೋಗ್ರಫಿ ಮತ್ತು ಬಜೆಟ್-ಕೇಂದ್ರಿತ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಎಕ್ಸ್-ಸರಣಿಯ ಫೋನ್‌ಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿರುವ ಈ ಫೋನ್ ಆಟೋ-ಫೋಕಸ್‌ನೊಂದಿಗೆ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ವಿವೋ V29e ಡಿಸ್‌ಪ್ಲೇ ವಿವರ: ಈ ಫೋನ್ ಹೆಚ್ಚಿನ ರಿಫ್ರೆಶ್ ರೇಟ್‌ನೊಂದಿಗೆ ಫುಲ್ ಹೆಚ್‌ಡಿ 6.73 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಅಂದರೆ 2400x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಮುಂಭಾಗದಲ್ಲಿ ಪಂಚ್ ಕಟೌಟ್ ಆಯ್ಕೆ ನೀಡಲಾಗಿದೆ. ಈ ಸೆಲ್ಫಿ ಕ್ಯಾಮೆರಾ ಆಟೋ ಫೋಕಸ್ ಫೀಚರ್ಸ್‌ ಪಡೆದಿದೆ.

ವಿವೋ V29e ಪ್ರೊಸೆಸರ್‌ ಮಾಹಿತಿ: ಇನ್ನು ಈ ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್‌ ಓಎಸ್‌ ಅನ್ನು ರನ್‌ ಮಾಡಲಿದೆ. ಜೊತೆಗೆ ಎರಡು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಈ ಫೋನ್‌ ಕಂಡುಬರುತ್ತದೆ ಅಂದರೆ ಒಂದು 128GB ಮತ್ತೊಂದು 256GB ಸ್ಟೋರೇಜ್. 8GB RAM ಸಂರಚನೆಯು ಎರಡೂ ಮಾದರಿಗಳಲ್ಲಿ ಒಂದೇ ಆಗಿರುತ್ತದೆ.

Vivo V29e Launched in India with 50MP Selfie Camera, 44W Fast Charging, and  more

ವಿವೋ V29e ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್‌ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್ OIS ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಹೊಂದಿದೆ. ಇದು ಕ್ಯಾಮರಾ ಆಪ್‌ ಪೋರ್ಟ್ರೇಟ್, ಮೈಕ್ರೋ ಮೂವಿ, ಹೈ-ರೆಸಲ್ಯೂಶನ್, ಪ್ಯಾನೋ, ಸ್ಲೋ ಮೋಷನ್, ಡಬಲ್ ಎಕ್ಸ್‌ಪೋಸರ್, ಡ್ಯುಯಲ್ ವ್ಯೂ, ಸೂಪರ್‌ಮೂನ್ ಮತ್ತು ಲೈಟ್ ಎಫೆಕ್ಟ್‌ಗಳನ್ನು ಒಳಗೊಂಡಂತೆ ಹಲವು ಫೀಚರ್ಸ್‌ ಪಡೆದಿದೆ. ಸೆಲ್ಫಿಗಾಗಿ ಮೊದಲೇ ತಿಳಿಸಿದಂತೆ ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ವಿವೋ V29e ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 44W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಉಳಿದಂತೆ 5G, ಟೈಪ್ ಟಿ ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಅನೇಕ ಭದ್ರತಾ ಹಾಗೂ ಕನೆಕ್ಟಿವಿಟಿ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ.

Vivo V29e launched in India with color-changing back, curved display, 50MP  AF selfie camera, and more - Gizmochina

ವಿವೋ V29e ಬೆಲೆ ಹಾಗೂ ಲಭ್ಯತೆ: ಈ ಫೋನ್ 128GB ಮತ್ತು 256GB ಸ್ಟೋರೇಜ್‌ನೊಂದಿಗೆ 8GB RAM ನಲ್ಲಿ ಕಾಣಿಸಿಕೊಂಡಿದ್ದು, ಭಾರತದಲ್ಲಿ ಇದರ ಬೆಲೆ 26,999ರೂ.ಗಳಿಂದ ರಿಂದ ಪ್ರಾರಂಭವಾಗುತ್ತದೆ. ಹಾಗೆಯೇ 28,999ರೂ.ವರೆಗೂ ಇರಲಿದೆ. ಜೊತೆಗೆ ಕೆಂಪು ಅಥವಾ ನೀಲಿ ಬಣ್ಣದಲ್ಲಿ ಈ ಫೋನ್‌ಗಳಿದ್ದು, ಆರ್ಟಿಸ್ಟಿಕ್ ರೆಡ್ ಆಯ್ಕೆಯು ಬಣ್ಣವನ್ನು ಬದಲಾಯಿಸುವ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದನ್ನು ಫ್ಲಿಪ್‌ಕಾರ್ಟ್‌ ಮತ್ತು ವಿವೋದ ಅಧಿಕೃತ ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

Vivo V29e Launch with 50mp Selfie Camera know Specs Price Details.