ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗೃಹಲಕ್ಷ್ಮಿ ಯೋಜನೆ ; ಪ್ರತಿ ಕುಟುಂಬದ ಮಹಿಳೆಗೆ ತಲಾ ಎರಡು ಸಾವಿರ ಘೋಷಣೆ ! 

16-01-23 10:33 pm       Bangalore Correspondent   ಕರ್ನಾಟಕ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ ತಲಾ ರೂ. 2,000 ಸಹಾಯಧನ ನೀಡುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. 

ಬೆಂಗಳೂರು, ಜ.16: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ ತಲಾ ರೂ. 2,000 ಸಹಾಯಧನ ನೀಡುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. 

ನಗರದ ಅರಮನೆ ಮೈದಾನದಲ್ಲಿ ಸೋಮವಾರ ನಡೆದ 'ನಾ ನಾಯಕಿ' ಎಂಬ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿ ಇರುವ ಗೃಹಲಕ್ಷ್ಮಿ ಯೋಜನೆಯ ಚೆಕ್ ಪ್ರತಿಕೃತಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರದರ್ಶನ ಮಾಡಿದರು. 

Congress' Second Poll-Promises For Karnataka Election 2023 — Rs 2,000 To  'Woman Head Of Every Household'

K'taka Congress promises monthly ₹2k to each housewife if voted to power |  Bengaluru - Hindustan Times

ಸಾಂಕೇತಿಕವಾಗಿ ಚೆಕ್ ಪತ್ರವನ್ನು ಪ್ರಿಯಾಂಕ ಗಾಂಧಿ ಅವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಲ್ಲಿಸಿದರು. ವೇದಿಕೆಯಲ್ಲಿ ಅನೇಕ ನಾಯಕರು, ಗೃಹಲಕ್ಷ್ಮಿ ಯೋಜನೆಯ ಘೋಷಣೆಯ ಭಿತ್ತಿಪತ್ರಗಳನ್ನು ಹಿಡಿದು ಭರವಸೆ ನೀಡಿದರು. 

Karnataka: Congress promises Rs 2000/month to woman head of households -  The Week

priyanka gandhi: In race to woo women voters in poll-bound Karnataka, Congress  announces Griha Lakshmi vs BJP's Grihini Shakti - The Economic Times

ಕೈ ನಾರಿ ಶಕ್ತಿ ಪ್ರದರ್ಶನ ಹೆಸರಲ್ಲಿ ರಾಜ್ಯದಾದ್ಯಂತ ಮಹಿಳಾ ಕಾರ್ಯಕರ್ತರು ಅರಮನೆ ಮೈದಾನದಲ್ಲಿ ಸೇರಿದ್ದರು. ಮಹಿಳೆಯರನ್ನು ಓಲೈಸಲು ಕಾಂಗ್ರೆಸ್, ರಾಜ್ಯದೆಲ್ಲೆಡೆ ಬಡ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ನೆರವು ನೀಡುವ ಘೋಷಣೆ ಮಾಡಿದೆ.

AICC general secretary Priyanka Gandhi-Vadra on Monday announced a monthly dole of Rs 2000 to each household led by women if the Congress is elected in the upcoming assembly elections.