ಬ್ರೇಕಿಂಗ್ ನ್ಯೂಸ್
23-09-26 04:21 pm HK News Staffer ದೇಶ - ವಿದೇಶ
ಟೆಕ್ಸಾಸ್, ಸೆ.23: ಅಮೆರಿಕದ ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಯೂಟ್ಯೂಬರ್ ಒಬ್ಬ "ನಾವು ಚುನಾವಣೆಯಲ್ಲಿ ಗೆದ್ದರೆ, ಹನುಮಾನ್ ವಿಗ್ರಹ ಕೆಡವುತ್ತೇವೆ" ಎನ್ನುವ ಮೂಲಕ ಧಾರ್ಮಿಕ ದ್ವೇಷದ ಕಿಡಿ ಹೊತ್ತಿಸಿದ್ದಾನೆ. ಟೆಕ್ಸಾಸ್‌ನ ಹೂಸ್ಟನ್ ಹೊರವಲಯದ ಶುಗರ್‌ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಾಲಯದ ಆವರಣದಲ್ಲಿರುವ 90 ಅಡಿ ಎತ್ತರದ ಹನುಮಂತನ ವಿಗ್ರಹದ ವಿರುದ್ಧ ಯೂಟ್ಯೂಬರ್ ದ್ವೇಷದ ಕಿಡಿ ಹೊತ್ತಿಸಿದ್ದಾನೆ.
ಹ್ಯೂಸ್ಟನ್ ನಗರದ ಅಷ್ಟಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಏಕತಾ ಪ್ರತಿಮೆ ಎಂದು ಕರೆಯಲಾಗುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು 2024ರ ಆಗಸ್ಟ್‌ನಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಆಗಲೂ ಸ್ಥಳೀಯ ಕೆಲವು ಸಂಪ್ರದಾಯವಾದಿಗಳು ಇದರ ಬಗ್ಗೆ ಟೀಕೆ ಮಾಡಿದ್ದರು. ಇತ್ತೀಚೆಗೆ 'ಮೇಕ್ ಅಮೆರಿಕ ಗ್ರೇಟ್ ಅಗೇನ್ ಮೂವ್‌ಮೆಂಟ್'ನ ಸಕ್ರಿಯ ಕಾರ್ಯಕರ್ತನೂ ಆಗಿರುವ ಸಂಪ್ರದಾಯವಾದಿ ಯೂಟ್ಯೂಬರ್ ಜೆಸ್ಸಿ ಹ್ಯೂಸ್ ಎಂಬಾತ, ಎಕ್ಸ್ ಖಾತೆಯಲ್ಲಿ ಶುಗರ್‌ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಾಲಯದ 90 ಅಡಿ ಎತ್ತರದ ಹನುಮಾನ್ ವಿಗ್ರಹದ ಫೋಟೋವನ್ನು ಹಂಚಿಕೊಂಡಿದ್ದ. ಅದರೊಂದಿಗೆ, ನಾವು ಚುನಾವಣೆ ಗೆದ್ದರೆ ಇದನ್ನು ನಾವು ಕೆಡವಿ ಹಾಕುತ್ತೇವೆ" ಎಂದು ಬರೆದುಕೊಂಡಿದ್ದಾನೆ. ವಿವಾದಾತ್ಮಕ ಮತ್ತು ಜನಾಂಗೀಯ ದ್ವೇಷದ ಪೋಸ್ಟ್‌ಗೆ ಅಮೆರಿಕದಲ್ಲಿರುವ ಹಿಂದೂ ಅಮೆರಿಕನ್ ಸಮುದಾಯ ಹಾಗೂ ಹಿಂದೂ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಮೆರಿಕ ಸೇನೆಯ ಮಾಜಿ ಯೋಧ ಹಾಗೂ ಹಿಂದೂ ಅಮೆರಿಕನ್ ಸಮುದಾಯದ ಮುಖಂಡರಾದ ರುಚಿರ್ ಬಕ್ಷಿ ಅವರು ಈ ದ್ವೇಷದ ಪೋಸ್ಟ್‌ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು "ನನ್ನ ಧರ್ಮದ ಮೇಲೆಯೇ ದಾಳಿ ಮಾಡುವಂತಹ ದೇಶಕ್ಕಾಗಿ ನಾನು ಯುದ್ಧಕ್ಕೆ ಹೋಗಿರಲಿಲ್ಲ" ಎಂದು ಹೇಳುವ ಮೂಲಕ ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಹನುಮಾನ್ ವಿಗ್ರಹವನ್ನು ಆಗಸ್ಟ್ 2024 ರಲ್ಲಿ ಅನಾವರಣಗೊಳಿಸಲಾಗಿತ್ತು. ಅಮೆರಿಕದ ಕೆಲವು ಕ್ರಿಶ್ಚಿಯನ್ ಸಂಪ್ರದಾಯವಾದಿಗಳು ಇದನ್ನು "ಅನ್ ಕ್ರಿಶ್ಚಿಯನ್" ಮತ್ತು "ಥರ್ಡ್ ವರ್ಲ್ಡ್ ಇನ್ವೇಷನ್" (ಮೂರನೇ ಜಗತ್ತಿನ ಆಕ್ರಮಣ) ಎಂದು ಜನಾಂಗೀಯವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಅದರಲ್ಲೂ, ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತ ಚುನಾವಣಾ ಅಂಗಳದಲ್ಲಿ ಟೆಕ್ಸಾಸ್‌ನ ಸುಮಾರು 5 ಲಕ್ಷಕ್ಕೂ ಅಧಿಕ ಇರುವ ಭಾರತೀಯ-ಅಮೆರಿಕನ್ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಯತ್ನಿಸುತ್ತಿರುವ ಮಧ್ಯೆಯೇ ಈ ಧಾರ್ಮಿಕ ದ್ವೇಷದ ಕಿಡಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
23-09-26 11:05 am
HK News Staffer
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 09:55 am
HK News Staffer
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
23-09-26 09:32 am
HK News Staffer
Inspector Balakrishna Arrest, Police: ಮೇಲಧಿಕಾ...
22-09-26 09:00 pm
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm