ಬ್ರೇಕಿಂಗ್ ನ್ಯೂಸ್
26-10-23 07:25 pm Bangalore Correspondent ಕರ್ನಾಟಕ
ಬೆಂಗಳೂರು, ಅ.26: ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಅರಿಶಿನಕುಂಟೆಯಲ್ಲಿ ವರದಿಯಾಗಿದೆ.
ಅರಿಶಿನಕುಂಟೆಯ ಆದರ್ಶನಗರದ ಮನೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ(25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಮ್ನಲ್ಲಿ ನೇಣು ಬಿಗಿದುಕೊಂಡಿದ್ದು, ಅನುಮಾನಗೊಂಡ ತಂದೆ ರೂಮ್ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ಧನಲಕ್ಷ್ಮೀ ಕುಟುಂಬ, 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸವಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಬಾರಿ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧನಲಕ್ಷ್ಮಿ, ಕಾಡುಗೋಡಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೋ ವಿಚಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
An international women's kabaddi player allegedly committed suicide at Arishinakunte in Nelamangala in Bengaluru Rural. International kabaddi player Dhanalakshmi (25) committed suicide by hanging herself at her house in Adarsh Nagar in Arishinakunte.
28-12-25 09:03 pm
Bangalore Correspondent
Seabird Bus, Drink and Drive: ಮೆಜೆಸ್ಟಿಕ್ ನಲ್ಲ...
27-12-25 02:40 pm
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
28-12-25 09:37 pm
Mangalore Correspondent
ಮನೆ ಕಂಪೌಂಡ್ ಹೊರಗೆ ನಿಲ್ಲಿಸಿದ್ದ ಆಟೋ ರಿಕ್ಷಾ ಕಳವು...
28-12-25 09:12 pm
ಸಂಸದ ಬ್ರಿಜೇಶ್ ಚೌಟರ 'ಬ್ಯಾಕ್ ಟು ಊರು' ಪರಿಕಲ್ಪನೆ...
28-12-25 03:44 pm
Mangalore, Pandeshwar ASI : ಪಾಂಡೇಶ್ವರ ಠಾಣೆ ಎಎ...
28-12-25 11:50 am
ನವ ವಿಧ - ನವ ವರ್ಷ ಮಂಗಳೂರು ಕಂಬಳ ; ಒಂಬತ್ತು ಮಂದಿ...
26-12-25 10:34 pm
28-12-25 05:19 pm
HK News Desk
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm
ಧನದಾಹಕ್ಕೆ ನವ ವಿವಾಹಿತೆ ಗಾನವಿ ಬಲಿ ಪ್ರಕರಣ ; ತಲೆಮ...
27-12-25 02:28 pm
ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿ ರಿಸೆಪ್ಷನ್, ಶ್...
26-12-25 11:21 pm
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm