ಬ್ರೇಕಿಂಗ್ ನ್ಯೂಸ್
20-11-23 06:14 pm HK News Desk ಕರ್ನಾಟಕ
ವಿಜಯನಗರ, ನ.20: ಮದುವೆಗೆ ಕೇವಲ ಮೂರು ದಿನ ಇರುವಾಗಲೇ ಪ್ರಿಯಕರನ ಮನೆಯಲ್ಲೇ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಟಿ ಬಿ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯ ನಿಶಾನಿ ಕ್ಯಾಂಪ್ನಲ್ಲಿ ಬೆಳಕಿಗೆ ಬಂದಿದೆ. ಯುವತಿಯು ಪ್ರೀತಿಸುತ್ತಿದ್ದ ಯುವಕನ ಕಡೆಯವರು ನಿಂದನೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಪೋಷಕರು ದೂರಿದ್ದಾರೆ.
ನಗರದ ಟಿ.ಬಿ ಡ್ಯಾಂನ ಐಶ್ವರ್ಯ (29) ಮೃತ ಯುವತಿ. ಐಶ್ವರ್ಯ ಹಾಗೂ ಇದೇ ಪ್ರದೇಶದ ಆಶೋಕ್ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ದಲಿತ ಸಮುದಾಯದವಳಾಗಿದ್ದು, ಅಂತರ್ಜಾತಿ ಹಿನ್ನೆಲೆ ಇವರ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಇತ್ತೀಚೆಗೆ ಎಲ್ಲರನ್ನೂ ಒಪ್ಪಿಸಿ ಮದುವೆಗೆ ಸಿದ್ಧರಾಗಿದ್ದರು. ಈ ನಡುವೆ ಯುವತಿ ಭಾನುವಾರ ಮೃತಪಟ್ಟಿದ್ದಾಳೆ. ಯುವಕ ಮೇಲ್ಜಾತಿಯವನಾಗಿದ್ದು, ಇದೇ ವಿಚಾರ ಇಟ್ಟುಕೊಂಡು ಆತನ ಕಡೆಯವರು ಯುವತಿಗೆ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಐಶ್ವರ್ಯ ಹಾಗೂ ಅಶೋಕ್ ಪರಸ್ಪರ ಪ್ರೀತಿಸುತ್ತಿದ್ದು, ಆತ ಮೇಲ್ಜಾತಿಗೆ ಸೇರಿದವನಾಗಿದ್ದಾನೆ. ಆದರೂ ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ನವೆಂಬರ್ 23 ರಂದು ಹೊಸಪೇಟೆಯ ಸಾಯಿಲೀಲಾ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ, ನಿಮ್ಮ ಹುಡುಗಿಯನ್ನು ಮದುವೆ ಮಾಡಿಕೊಂಡರೆ ನಮಗೆ ಮರ್ಯಾದೆ ಇರುವುದಿಲ್ಲ. ಹುಡುಗಿಯನ್ನು ಅಶೋಕನ ಅಜ್ಜಿ ಮನೆಗೆ ಮದುವೆಗಿಂತ ಒಂದು ವಾರ ಮುಂಚಿತವಾಗಿ ಕಳಿಸಿ ಕೊಡಬೇಕು. ಮದುವೆ ನೀವು ಯಾರೂ ಬರಬಾರದು. ಹುಡುಗಿಯ ತಂದೆ ತಂಗಿ ಮಾತ್ರ ಮದುವೆಗೆ ಬರಬೇಕು. ಸಂಬಂಧಿಕರು ಯಾರೂ ಕೂಡ ಬರುವಂತಿಲ್ಲ ಎಂದು ತಾಕೀತು ಮಾಡಿದ್ದರು. ಅದರಂತೆ ಐಶ್ವರ್ಯಳನ್ನು ಕಳೆದ ಬುಧವಾರ ಹುಡುಗನ ಮನೆಗೆ ತಂದು ಬಿಡಲಾಗಿತ್ತು. ಆದರೆ, ಮನೆಯಲ್ಲಿ ಮದುವೆ ವಿಚಾರವಾಗಿ ಅಶೋಕನ ದೊಡ್ಡಪ್ಪನ ಮಕ್ಕಳು ಜಾತಿ ವಿಚಾರ ಮುಂದಿಟ್ಟುಕೊಂಡು ಅವಮಾನಕರವಾಗಿ ಮಾತನಾಡಿದ್ದಾರೆ. ಜಾತಿ ವಿಚಾರವಾಗಿ ಹುಡುಗನ ಮನೆಯವರು ನಿಂದಿಸಿದ್ದಲ್ಲದೇ, ಮನೆಯಲ್ಲಿ ಯಾರೂ ಆಕೆಯ ಜೊತೆ ಮಾತನಾಡುತ್ತಿರಲಿಲ್ಲ ಎಂದು ಪೋಷಕರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Vijayapura 29 year old girl Commits suicide at her boyfriend House before three days of her marriage.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm