Cobra snake in Amazon package: ಅಮೇಜಾನ್‌ನಲ್ಲಿ ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು ; ಓಪನ್ ಮಾಡಿದ್ಮೇಲೆ ಬಾಕ್ಸ್ ಬಿಸಾಕಿ ಓಡಿದ ದಂಪತಿ, ಪಾರ್ಸೆಲ್ ಜೊತೆ 'ಕೋಬ್ರಾ ಸ್ನೇಕ್' ಫ್ರೀ !

19-06-24 12:00 pm       Bangalore Correspondent   ಕರ್ನಾಟಕ

ಆನ್‌ಲೈನ್ ಶಾಪಿಂಗ್ ಈಗ ಸಕತ್ ಟ್ರೆಂಡ್‌ನಲ್ಲಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಹಿಡುದು ಏನ್ ಬೇಕಿದ್ದರೂ ಆರ್ಡರ್ ಮಾಡಿ ತೆಗೆದುಕೊಳ್ಳುವ ಕಾಲದಲ್ಲಿ ಇದ್ದೀವಿ.

ಬೆಂಗಳೂರು, ಜೂ.19: ಆನ್‌ಲೈನ್ ಶಾಪಿಂಗ್ ಈಗ ಸಕತ್ ಟ್ರೆಂಡ್‌ನಲ್ಲಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಹಿಡುದು ಏನ್ ಬೇಕಿದ್ದರೂ ಆರ್ಡರ್ ಮಾಡಿ ತೆಗೆದುಕೊಳ್ಳುವ ಕಾಲದಲ್ಲಿ ಇದ್ದೀವಿ. ನಾವು ಆರ್ಡರ್ ಮಾಡಿರುವುದು ಬಿಟ್ಟು ಬೇರೆ ವಸ್ತು ಬಂದರೆ ಅದನ್ನು ಬದಲಿಸಬಹುದು. ಆದರೆ, ಡಿಲಿವರಿ ಬಾಕ್ಸ್‌ನಲ್ಲಿ ಬುಸ್ ಬುಸ್ ನಾಗಪ್ಪ ಬಂದ್ರೆ ಏನ್ ಮಾಡ್ತೀರಾ? 

ಹೌದು... ಗಮಿಂಗ್ ಆಟ ಎಕ್ಸ್‌ಬಾಕ್ಸ್ ಕಂಟ್ರೋಲರ್ ಅರ್ಡರ್ ಮಾಡಿದ್ದ ದಂಪತಿಗೆ ಅಮೆಜಾನ್ ಬಾಕ್ಸ್‌ನಲ್ಲಿ ಬಂದಿದ್ದು ಮಾತ್ರ ನಾಗರ ಹಾವು . ಈ ಘಟನೆ ನಡೆದಿರುವುದು ಸಿಲಿಕಾನ್ ಸಿಟಿ ಬೆಂಗಳೂರುನಲ್ಲಿ. ತಮಗೆ ಬಂದ ಅಮೆಜಾನ್ ಪ್ಯಾಕೇಜ್‌ನಲ್ಲಿ ಜೀವಂತ ನಾಗರಹಾವು ಕಂಡುಬಂದಿದೆ ಎಂದು ಜೋಡಿ ಹೇಳಿದೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಈಗ ಸಕತ್ ವೈರಲ್ ಆಗಿದೆ.

ನಾವು ಅಮೆಜಾನ್‌ನಿಂದ 2 ದಿನಗಳ ಹಿಂದೆ ಎಕ್ಸ್‌ಬಾಕ್ಸ್ ಕಂಟ್ರೋಲರ್ನ್ನು ಆರ್ಡರ್ ಮಾಡಿದ್ದೇವು. ಅಮೆಜಾನ್‌ನಿಂದ ಬಂದ ಪ್ಯಾಕೇಜ್‌ನಲ್ಲಿ ಜೀವಂತ ಹಾವು ಬಂದಿದೆ. ಪ್ಯಾಕೇಜ್ ಅನ್ನು ನೇರವಾಗಿ ಡಿಲೆವರಿ ಪಾರ್ಟ್ನರ್ ನಮಗೆ ನೀಡಿದ್ದಾರೆ. ಅವರು ಹೊರಗೆ ಇಟ್ಟು ಹೋಗಿಲ್ಲ. ನಾವು ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತಿದ್ದೇವೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ, ಜೊತೆಗೆ ನಮ್ಮಲ್ಲಿ ಪ್ರತ್ಯಕ್ಷದರ್ಶಿಗಳು ಇದ್ದಾರೆ" ಎಂದು ಪಾರ್ಸಲ್‌ನಲ್ಲಿ ಹಾವು ಪಡೆದ ಗ್ರಾಹಕರು ಇಂಡಿಯಾ ಟುಡೇಗೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದು ಸ್ಪಷ್ಟವಾಗಿ ಅಮೆಜಾನ್‌ನ ನಿರ್ಲಕ್ಷ್ಯ ಮತ್ತು ಅವರ ಕಳಪೆ ಸಾರಿಗೆ /ಗೋಡೌನ್ ನೈರ್ಮಲ್ಯ ಮತ್ತು ಮೇಲ್ವಿಚಾರಣೆಯಿಂದ ಉಂಟಾದ ಸುರಕ್ಷತಾ ಉಲ್ಲಂಘನೆಯಾಗಿದೆ. ಸುರಕ್ಷತೆಯಲ್ಲಿ ಇಂತಹ ಗಂಭೀರ ಲೋಪ ಮಾಡಲು ಹೇಗೆ ಸಾಧ್ಯ ಎಂದು ದಂಪತಿಗಳು ಕಿಡಿಕಾರಿದ್ದಾರೆ.

A couple in Bengaluru was shocked after they found a snake in the package they ordered online from Amazon App on Sunday. The couple, both software engineers, had ordered an Xbox controller online but were shocked to see a spectacled cobra inside their package.