ಬ್ರೇಕಿಂಗ್ ನ್ಯೂಸ್
30-06-24 10:41 pm Bangalore Correspondent ಕರ್ನಾಟಕ
ಬೆಂಗಳೂರು, ಜೂ 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTCಯು ಭರ್ಜರಿ ಉದ್ಯೋಗ ನೇಮಕಾತಿ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವವರು ಕೂಡಲೇ ಅರ್ಜಿ ಸಲ್ಲಿಸಬೇಕು.
ಇದರ ನೇಮಕಾತಿಗೆ ನಿರ್ಧರಿಸಿರುವ ಸಾರಿಗೆ ಇಲಾಖೆ ಶೀಘ್ರವೇ ಭರ್ತಿ ಮಾಡಿಕೊಳ್ಳಲಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸುತ್ತಲೇ ಇದ್ದಾರೆ. ಆದರೆ ಅರ್ಹ ಅಭ್ಯರ್ಥಿಗಳು ಯಾವಾಗ ಇದೆಲ್ಲ ನೇಮಕಾತಿ ನಡೆಯಲಿದೆ ಎಂದು ಕಾತರರಾಗಿದ್ದಾರೆ.
ಸದ್ಯ ಖಾಲಿ ಇರುವ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಹುದ್ದೆಗಳನ್ನು ಆಯಾ ಬಸ್ ಡಿಪೋಗಳು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿವೆ. ಹಾಗಾದರೆ ಎಲ್ಲೆಲ್ಲಿ KSRTC ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಇಲ್ಲಿ ತಿಳಿಯಿರಿ.
ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಕೆಎಸ್‌ಆರ್‌ಟಿಸಿ
ಹುದ್ದೆ ಹೆಸರು: ಚಾಲಕ ಹುದ್ದೆಗಳು (ಹೊರಗುತ್ತಿಗೆ ಆಧಾರದಲ್ಲಿ)
ಒಟ್ಟು ಹುದ್ದೆ: 13000
ಉದ್ಯೋಗ ಸ್ಥಳ: ಬೆಂಗಳೂರು, ರಾಮನಗರ, ಆನೇಕಲ್ ಹಾಗೂ ಇತರ ಕಡೆ
ಮಾಸಿಕ ವೇತನ : 23,700 ರೂ., (PF, ESI ಸೌಲಭ್ಯ ಇರಲಿದೆ)
ಶೈಕ್ಷಣಿಕ ಅರ್ಹತೆಗಳು ಏನು?
ಚಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ
ಮಾನ್ಯತೆ ಪಡೆದ ವಾಹನ ಚಾಲನೆಯ ಪರವಾನಗಿ ಹೊಂದಿರುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಸೇವಾ ಅನುಭವ, ಷರತ್ತುಗಳು
ಅಭ್ಯರ್ಥಿಗಳು ಲಘು ಮೋಟಾರ್ ವಾಹನ ಚಾಲಕರಾಗಿ ಕನಿಷ್ಠ ಎರಡು ವರ್ಷಗಳ ಕೆಲಸ ಮಾಡಿದ ಅನುಭವ ಇರಬೇಕು. ಹೊರಗುತ್ತಿಗೆ ನೇಮಕಾತಿ ಇದಾಗಿದ್ದರಿಂದ ಹುದ್ದೆಗಳ ಮೇಲೆ ಅಭ್ಯರ್ಥಿಗಳಿಗೆ ಯಾವುದೇ ರೀತಿ ಹಕ್ಕು ಇರುವುದಿಲ್ಲ. ಖಾಯಂ ನೇಮಕಾತಿ ವೇಳೆ ಇವರನ್ನು ತೆರವು ಮಾಡಲಾಗುವುದು ಎಂಬ ಷರತ್ತು ವಿಧಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ
ಈ ಮೇಲ್ಕಂಡ ಮಾನದಂಡ, ಅರ್ಹತೆ, ಷರತ್ತುಗಳಿಗೆ ಒಪ್ಪಿ ದಾಖಲೆಗಳನ್ನು ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಗಳು ಮಾತ್ರವೇ ಮಾನ್ಯ ಆಗಲಿವೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಚಾಲನೆ ತರಬೇತಿಯನ್ನು ನೀಡಿ ಪರೀಕ್ಷೆಯನ್ನು ನಡೆಸಿ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆಯ ಜೊತೆ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಎಂದು ನಿಗಮ ಮಾಹಿತಿ ನೀಡಿದೆ.
ನೇಮಕಾತಿ ಕುರಿತು ಹೆಚ್ಚಿನ ಮಾಹಿತಿ ಸಂಪರ್ಕ
ರಾಮನಗರ ಮತ್ತು ಆನೇಕಲ್ KSRTC - 8090980889-8618876846
ಚಾಮರಾಜನಗರ KSRTC - 8050980889- 8618876846 ಇಲ್ಲಿಗೆ ಕರೆ ಮಾಡಿ ನಿಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬೇಕು.
The Karnataka State Road Transport Corporation (KSRTC) has launched a massive recruitment drive. Applications are invited from eligible candidates in this regard. Those who want to get a government job should apply immediately.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm