ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹಿಳೆಗೆ ಕಾರು ಡಿಕ್ಕಿ, ಹತ್ತು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವು, ಅಪಘಾತ ವಿಡಿಯೋ ವೈರಲ್ 

08-09-25 11:06 pm       HK News Desk   ದೇಶ - ವಿದೇಶ

ಕಾಸರಗೋಡು ನಗರದ ಅಡ್ಕತ್ ಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದ್ದು ಮಹಿಳೆ ಹತ್ತು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. 

ಕಾಸರಗೋಡು, ಸೆ.8 : ಕಾಸರಗೋಡು ನಗರದ ಅಡ್ಕತ್ ಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದ್ದು ಮಹಿಳೆ ಹತ್ತು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. 

ಸ್ಥಳೀಯ ಅಡ್ಕತ್ ಬೈಲು ನಿವಾಸಿ ಯೂಸುಫ್ ಎಂಬವರ ಪತ್ನಿ ನಾಸಿಯಾ(50) ಮೃತ ಮಹಿಳೆ‌. ಇವರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ ಕಾರು ಡಿಕ್ಕಿಯಾಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ತಲಪಾಡಿಯಿಂದ ಕಾಸರಗೋಡು ವರೆಗೆ ದುಬೈ ಮಾದರಿಯಲ್ಲಿ ಅತಿ ವೇಗದ ಹೆದ್ದಾರಿ ನಿರ್ಮಾಣಗೊಂಡಿದ್ದು ಎಲ್ಲೆಂದರಲ್ಲಿ ಜನರು ರಸ್ತೆ ದಾಟುವುದನ್ನ ನಿಷೇಧಿಸಲಾಗಿದೆ. ಆದರೆ ಸದ್ರಿ ಮಹಿಳೆ ವಾಹನಗಳು ಅತಿ ವೇಗದಲ್ಲಿ ಸಾಗುತ್ತವೆ ಎಂಬ ಅರಿವಿಲ್ಲದೆ, ರಸ್ತೆ ದಾಟಲು ಅವಕಾಶ ಇಲ್ಲದ ಕಡೆ ಅಡ್ಡ ಸಾಗಿದ್ದು ಇದರಿಂದಾಗಿ ಪ್ರಾಣ ಕಳಕೊಂಡಿದ್ದಾರೆ. 

ಒಂದು ಲಾರಿ ಮಹಿಳೆಯನ್ನು ನೋಡಿ ಬ್ರೇಕ್ ಹಾಕಿದರೆ ಅದರ ಹಿಂದಿದ್ದ ಕಾರು ಏಕಮುಖದ ರಸ್ತೆಯಲ್ಲಿ ಬಲ ಬದಿಯಿಂದ ಅತಿ ವೇಗವಾಗಿ ನುಗ್ಗಿ ಬಂದಿದೆ. ಈ ವೇಳೆ, ಮಹಿಳೆ ರಸ್ತೆ ದಾಟುವ ಧಾವಂತದಲ್ಲಿ ಕಾರನ್ನು ನೋಡದೆ ಓಡಿದ್ದು ನೇರವಾಗಿ ಡಿಕ್ಕಿಯಾಗಿದೆ. ಅದರ ವೇಗಕ್ಕೆ ಮಹಿಳೆ ಹತ್ತು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಕೂಡಲೇ ಮಹಿಳೆಯನ್ನು ಬೇರೆ ಕಾರಿನಲ್ಲಿ ಆಸ್ಪತ್ರೆಗೆ ಒಯ್ದರೂ ಆಕೆ ಪ್ರಾಣ ಉಳಿಯಲಿಲ್ಲ. ಅಪಘಾತದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

A tragic accident occurred on the Adkathbail stretch of the National Highway in Kasaragod city on Sunday, where a 50-year-old woman was fatally hit by a speeding car while attempting to cross the road. She was thrown nearly 10 meters due to the impact and died on the spot.