ಬ್ರೇಕಿಂಗ್ ನ್ಯೂಸ್
11-08-24 10:10 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್.11: ಬೆಂಗಳೂರಿನ ಅಗತ್ಯಕ್ಕೆ ಬೇಕಾದಷ್ಟು ನೀರು ಬೆಂಗಳೂರಿನ ಒಳಗಡೆಯೇ ಲಭ್ಯವಿದ್ದು, ಲಿಂಗನಮಕ್ಕಿಯಿಂದ, ಮೇಕೆದಾಟಿನಿಂದ ನಗರಕ್ಕೆ ನೀರು ಪೂರೈಸುವ ಯೋಜನೆಗಳನ್ನು ಕೈ ಬಿಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿ ಟಿ.ವಿ.ರಾಮಚಂದ್ರ ಸಲಹೆ ನೀಡಿದ್ದಾರೆ.
ಗಾಂಧಿ ಭವನದಲ್ಲಿ 'ಪರಿಸರಕ್ಕಾಗಿ ನಾವು' ಸಂಘಟನೆಯು ಮಾಧವ ಗಾಡ್ಗೀಳ್ ವರದಿ ಅನುಷ್ಠಾನದ ಬಗ್ಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ವಾರ್ಷಿಕವಾಗಿ 750 ರಿಂದ 800 ಮಿಲಿ ಮೀಟರ್ ಮಳೆಯಾಗುತ್ತದೆ. ಇದರರ್ಥ 15 ಟಿಎಂಸಿ ನೀರನ್ನು ನಾವು ಮಳೆ ನೀರು ಕೊಯ್ಲು ಪದ್ಧತಿ ಮೂಲಕ ಸಂಗ್ರಹಿಸಬಹುದು. ಹಾಗೆಯೇ 16 ಟಿಎಂಸಿಯಷ್ಟು ನೀರು ಇಲ್ಲಿ ಕೆರೆ, ಅಂತರ್ಜಲಗಳಲ್ಲಿದ್ದು, ಒಟ್ಟು 31 ಟಿಎಂಸಿ ನೀರು ನಗರದೊಳಗೆ ಲಭ್ಯವಿದೆ. ಬೆಂಗಳೂರಿಗೆ ಬಳಕೆಗೆ ಬೇಕಾಗಿರುವ ನೀರು 18 ಟಿಎಂಸಿ ಮಾತ್ರ. ತನ್ಮೂಲಕ ನಗರದ ಬಳಕೆಗೆ ಅಗತ್ಯ ಪ್ರಮಾಣದ ನೀರು ನಗರದೊಳಗೆಯೇ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ನೀರಿನ ಮರು ಬಳಕೆಯಿಂದ ಜಲ ಮೂಲಗಳ ಮೇಲಿನ ಒತ್ತಡ ಕಡಿಮೆ ಮಾಡಬಹುದು. ನಗರದಲ್ಲಿರುವ ಕೆರೆಗಳ ಪುನರುಜ್ಜೀವನ ಕ್ರಮಗಳ ಮೂಲಕ ಅನ್ಯ ಊರಿನ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು. ಜಕ್ಕೂರು ಕೆರೆಯ ಅಭಿವೃದ್ಧಿಯ ಮಾದರಿ ನಮ್ಮ ಮುಂದಿದೆ. ಜಕ್ಕೂರು ಕೆರೆಯ ಹೂಳನ್ನು ತೆಗೆದು ಏನು ಮಾಡುವುದು ಎಂಬುದು ನಮ್ಮ ದೊಡ್ಡ ತಲೆ ನೋವಾಗಿತ್ತು. ನಾವು ಪಕ್ಕದ ರೈತರ ಮನವೊಲಿಸಿ ಸುಮಾರು 400 ಎಕರೆ ಕೃಷಿ ಭೂಮಿಗೆ ಹೂಳನ್ನು ಹಾಕಿದೆವು. ಇಂದು ಆ ರೈತರಿಗೆ ಉತ್ತಮ ಫಸಲು ಬರುತ್ತಿದೆ. ಜಕ್ಕೂರು ಕೆರೆಯ ಸುತ್ತಮುತ್ತಲಿರುವ ಬಾವಿಗಳಲ್ಲಿ ಉತ್ತಮ ಮಟ್ಟದಲ್ಲಿ ನೀರು ಲಭ್ಯವಿದೆ ಎಂದು ಹೇಳಿದರು.
ಬೆಳ್ಳಂದೂರು ಕೆರೆಯ ಶುದ್ಧೀಕರಣ ಪ್ರಯತ್ನ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಬೆಳ್ಳಂದೂರು ಮತ್ತು ವರ್ತೂರು ಕೆರೆಯ ನೀರನ್ನು ಜನ ಬಳಕೆಗೆ ಬಳಸುವುದರಿಂದ ಕಾವೇರಿ ನೀರಿನ ಮೇಲಿನ ನಮ್ಮ ಅವಲಂಬನೆ ಕಡಿಮೆ ಮಾಡಬಹುದು. ಅದೇ ರೀತಿ ಪ್ರತಿ ವಾರ್ಡ್‌ನಲ್ಲಿಯೂ ಕಿರು ಅರಣ್ಯ ಬೆಳೆಸಬೇಕು. ಯುವ ಜನರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಟಿ.ವಿ.ರಾಮಚಂದ್ರ ಸಲಹೆ ನೀಡಿದರು.
ಇನ್ನು ಮೇಕೆದಾಟು ಯೋಜನೆಗೆ 5,000 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಲಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಅರಣ್ಯಕ್ಕೆ 100 ಟಿಎಂಸಿ ನೀರನ್ನು ಸಂಗ್ರಹಿಸಿಡುವ ಸಾಮರ್ಥ್ಯವಿದೆ. 100 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಇರುವ ಕಾಡು ನಾಶ ಮಾಡಿ ಸಿಮೆಂಟ್ ಕಟ್ಟೆ (ಡ್ಯಾಂ) ಕಟ್ಟಿ 45 ಟಿಎಂಸಿ ನೀರು ಸಂಗ್ರಹಿಸುತ್ತೇವೆ ಎಂಬುದರಲ್ಲಿ ಅರ್ಥವಿದೆಯೇ ಎಂದು ಅವರು ಪ್ರಶ್ನಿಸಿದರು. ಹಾಗೆಯೇ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರುವ ಪ್ರಯತ್ನವನ್ನು ನಾನು ನನ್ನ ಕೊನೆಯ ಉಸಿರು ಇರುವವರೆಗೂ ವಿರೋಧಿಸುತ್ತೇನೆ ಎಂದು ಟಿ.ವಿ. ರಾಮಚಂದ್ರ ಹೇಳಿದರು.
TV Ramachandra slams government over construction of Mekedatu project, says was it required to destroy 5 thousand hecter land to do this project.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm