Dinesh Gundu Rao, Savarkar: ಸಾವರ್ಕರ್ ಮಾಂಸಾಹಾರಿ, ಸ್ಸಾರಿ.. ಇದು ನನ್ನ ತಂದೆಯಾಗಲೀ ಪತ್ನಿಯಾಗಲೀ ಹೇಳಿದ್ದಲ್ಲ, ಸಾವರ್ಕರ್ ಅವರೇ ! ಸಿನಿಮಾದ ವಿಡಿಯೋ ಸಾಕ್ಷಿ ಕೊಟ್ಟ ಸಚಿವ ದಿನೇಶ್ ಗುಂಡೂರಾವ್ 

04-10-24 12:38 pm       Bangalore Correspondent   ಕರ್ನಾಟಕ

ಸಾವರ್ಕರ್ ಮಾಂಸಾಹಾರಿಯಾಗಿದ್ದರು ಎಂಬ ತಮ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಸಾರಿ, ಇದು ನಾನು ಹೇಳಿದ್ದಲ್ಲ.

ಬೆಂಗಳೂರು, ಅ.4: ಸಾವರ್ಕರ್ ಮಾಂಸಾಹಾರಿಯಾಗಿದ್ದರು ಎಂಬ ತಮ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಸಾರಿ, ಇದು ನಾನು ಹೇಳಿದ್ದಲ್ಲ. ನನ್ನ ತಂದೆಯಾಗಲಿ, ನನ್ನ ಪತ್ನಿಯಾಗಲಿ ಹೇಳಿದ್ದಲ್ಲ ಎಂದು ಹೇಳಿ ಸಾವರ್ಕರ್ ಸಿನಿಮಾದ ವಿಡಿಯೋದಲ್ಲಿ ಪಾತ್ರಧಾರಿ ಮಾಂಸ ತಿನ್ನುವ ತುಣುಕನ್ನು ಅಪ್ಲೋಡ್ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಅವರು ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ದಿನೇಶ್ ಗುಂಡೂರಾವ್, 'ಬ್ರಾಹ್ಮಣ ಸಮಾಜದ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು.‌ ಮಾಂಸಹಾರ ಸೇವನೆಯನ್ನು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಹೀಗಾಗಿ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಷ್ಟ್ ಆಗಿ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್‌ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್‌ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಆದರೆ ಗಾಂಧೀಜಿಯವರು ಸಸ್ಯಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು ಎಂದಿದ್ದರು.

ಈ ಬಗ್ಗೆ ವ್ಯಾಪಕ ವಿರೋಧ ಕೇಳಿಬರುತ್ತಿದ್ದಂತೆ ಮತ್ತೆ ಸ್ಪಷ್ಟನೆ ನೀಡಿರುವ ದಿನೇಶ್ ಗುಂಡೂರಾವ್ ಅವರು, 'ಸಾವರ್ಕರ್ ಒಬ್ಬ ನಾಸ್ತಿಕ, ಮಾಂಸಾಹಾರಿ' "Sorry"…ಇದು ನಾನು ಹೇಳಿದ್ದಲ್ಲ. ನನ್ನ ತಂದೆಯಾಗಲಿ, ನನ್ನ ಪತ್ನಿಯಾಗಲಿ ಹೇಳಿದ್ದಲ್ಲ. ಇದನ್ನು ಹೇಳಿದ್ದು ಸ್ವತಃ ಸಾವರ್ಕರ್ ಅವರೇ!' ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಸಾವರ್ಕರ್ ಚಿತ್ರದಲ್ಲಿ ಸಾವರ್ಕರ್ ಪಾತ್ರಧಾರಿ ಮಾಂಸಾಹಾರ ಸೇವಿಸುತ್ತಿರುವ ವಿಡಿಯೋವನ್ನೂ ಅಪ್ಲೋಡ್ ಮಾಡಿದ್ದಾರೆ.

Standing firm on his statement regarding Hindu ideologue Veer Savarkar, senior Congress leader and Karnataka Health Minister Dinesh Gundu Rao reiterated that he stands by his remarks on Hindutva ideologue Veer Savarkar being a ‘rationalist’, stating that Savarkar consumed non-vegetarian food and was not against cow slaughter.