Bangalore crime, Sandhya Pavitra Nagaraj, P Murthy: ಹನಿಟ್ರ್ಯಾಪ್ ಕೇಸು, ಆರೋಪಿತ ಮಹಿಳೆಯಿಂದ ಫೇಸ್ಬುಕ್ ನಲ್ಲಿ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ ಮೂರ್ತಿ ವಿರುದ್ಧ ನಿಂದನೆ ; ಕಳ್ಳಿ ವಿರುದ್ಧ ಕಾರ್ಯಕರ್ತರಿಂದ ಪ್ರತಿಭಟನೆ, ಚಪ್ಪಲಿ ಸೇವೆ 

10-10-24 10:57 pm       Bangalore Correspondent   ಕರ್ನಾಟಕ

ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿ ಆರೋಪ ಎದುರಿಸುತ್ತಿರುವ ಪವಿತ್ರಾ ನಾಗರಾಜ್ ಎಂಬ ಮಹಿಳೆ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿ, ಅಂಬೇಡ್ಕರ್ ಸೇನಾ ಸಂಘಟನೆಯ ನಾಯಕರನ್ನು ನಿಂದಿಸುತ್ತಿದ್ದು, ಇದನ್ನು ವಿರೋಧಿಸಿ ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ಆಕೆಯ ಪೋಸ್ಟರಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು, ಅ.10: ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿ ಆರೋಪ ಎದುರಿಸುತ್ತಿರುವ ಪವಿತ್ರಾ ನಾಗರಾಜ್ ಎಂಬ ಮಹಿಳೆ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿ, ಅಂಬೇಡ್ಕರ್ ಸೇನಾ ಸಂಘಟನೆಯ ನಾಯಕರನ್ನು ನಿಂದಿಸುತ್ತಿದ್ದು, ಇದನ್ನು ವಿರೋಧಿಸಿ ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ಆಕೆಯ ಪೋಸ್ಟರಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ತನ್ನನ್ನು ಕಾಂಗ್ರೆಸ್ ನಾಯಕಿಯೆಂದು ಬಿಂಬಿಸಿಕೊಂಡಿದ್ದಲ್ಲದೆ, ಸರಕಾರಿ ಉದ್ಯೋಗ ದೊರಕಿಸುವ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಪವಿತ್ರಾ ನಾಗರಾಜ್ ವಿರುದ್ಧ ಶಿವಾಜಿ ನಗರ ಠಾಣೆಯಲ್ಲಿ ಹನಿಟ್ರ್ಯಾಪ್ ಕೇಸು ದಾಖಲಾಗಿತ್ತು. ಎಸ್ಡಿಪಿಐ ಮುಖಂಡ ಭಾಸ್ಕರ ಪ್ರಸಾದ್ ತನ್ನ ಅಶ್ಲೀಲ ವಿಡಿಯೋ ಇದೆಯೆಂದು ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಇವರಿಗೆ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ ಬೆಂಬಲಿಸಿದ್ದರು.

ಇದೀಗ ಪಿ. ಮೂರ್ತಿ ಬಗ್ಗೆ ಅವಾಚ್ಯವಾಗಿ ನಿಂದಿಸಿ ತೇಜೋವಧೆ ಮಾಡುವ ರೀತಿ ಪವಿತ್ರಾ ನಾಗರಾಜ್ ನಿಗೂಢ ಜಾಗದಿಂದ ಫೇಸ್ಬುಕ್ ನಲ್ಲಿ ವಿಡಿಯೋ ಹಾಕುತ್ತಿದ್ದಾರೆ. ಇವರನ್ನು ಬಂಧಿಸಲು ಪೊಲೀಸರು ಮೀನ ಮೇಷ ಎಣಿಸುತ್ತಿದ್ದಾರೆಂದು ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ಬೆಂಗಳೂರು ಏರ್ಪೋರ್ಟ್ ರಸ್ತೆಯ ಸಿದ್ಲಘಟ್ಟ ಎಂಬಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ.

Ambedkar sene protests against Sandhya Pavitra Nagaraj for deformative vidoes against P Murthy in Bangalore. Sandhya Pavitra Nagaraj who has been booked in honey trap case against Bhaskar Prasad has been making deformation videos against Ambedkar Sene State president P Murthy. Members held protest and slapped her banner with chappals.