ಮೈಸೂರಿನಿಂದ ಹೊರಟಿದ್ದ ರೈಲು ತಮಿಳುನಾಡಿನಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ; ಹಳಿ ತಪ್ಪಿದ ಬೋಗಿಗಳಿಗೆ ಬೆ‌ಂಕಿ, ಹಲವು ಪ್ರಯಾಣಿಕರಿಗೆ ಸುಟ್ಟ ಗಾಯ 

11-10-24 11:08 pm       Bangalore Correspondent   ಕರ್ನಾಟಕ

ಮೈಸೂರಿನಿಂದ ದರ್ಬಾಂಗ್​ ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು, ತಮಿಳುನಾಡಿನ ಕವರಪಟ್ಟೈ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಹಳಿ ತಪ್ಪಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. 

ಬೆಂಗಳೂರು, ಅ.11: ಮೈಸೂರಿನಿಂದ ದರ್ಬಾಂಗ್​ ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು, ತಮಿಳುನಾಡಿನ ಕವರಪಟ್ಟೈ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಹಳಿ ತಪ್ಪಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. 

ಅಪಘಾತದ ರಭಸಕ್ಕೆ ಎರಡೂ ರೈಲುಗಳ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿವೆ. 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಸುಟ್ಟ ಗಾಯಗಳಿಂದ ಗಾಯಗೊಂಡಿದ್ದಾರೆ. 6 ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ನಿಂತಿದ್ದ ಗೂಡ್ಸ್​ ರೈಲಿನ ಹಿಂಭಾಗಕ್ಕೆ 12578 ಮೈಸೂರು-ದರ್ಬಾಂಗ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. 

Mysore-Darbhanga Bagmati Express rams into goods train in Tamil Nadu, many  feared injured | Latest News India - Hindustan Times

Mysore-Darbhanga Express Collides With Goods Train Near Chennai, 2 Coaches  Catch Fire | Republic World

Mysore-Darbhanga Express Collides With Stationary Goods Train In TN, At  Least 20 Injured As 6 Coaches Derail

ಸ್ಥಳಕ್ಕೆ ರಕ್ಷಣಾ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ರವಾನಿಸಲಾಗಿದೆ. ಅಲ್ಲದೆ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

The Mysuru-Darbhanga Bagmati Express collided with a stationary freight train in Tamil Nadu's Kavarapettai, resulting in several passengers sustaining injured on Friday evening.