ಬ್ರೇಕಿಂಗ್ ನ್ಯೂಸ್
14-10-24 08:51 pm Bangalore Correspondent ಕರ್ನಾಟಕ
ಬೆಂಗಳೂರು, ಅ.14: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ A-2 ಆರೋಪಿ ಹಾಗೂ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಪೋಲಿಸರಿಂದ ಚಾರ್ಜ್ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ದರ್ಶನ್ ಜಾಮೀನು ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ದರ್ಶನ್ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರೆ, ತನಿಖಾಧಿಕಾರಿಗಳ ಪರವಾಗಿ ಎಸ್ಪಿಪಿ ಪ್ರಸನ್ನಕುಮಾರ್ ಪ್ರತಿವಾದಿಸಿದ್ದರು. ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲದ ನ್ಯಾ.ಜೈಶಂಕರ್ ಅವರು ದರ್ಶನ್ ಜಾಮೀನು ಅರ್ಜಿ ತೀರ್ಪನ್ನು ಕಾಯ್ದಿರಿಸಿ ಅ.10ರಂದು ಆದೇಶ ಹೊರಡಿಸಿದ್ದರು.
ಪ್ರಕರಣದಲ್ಲಿ ತಮ್ಮ ಕಕ್ಷಿದಾರ ದರ್ಶನ್ ಪರ ಪೊಲೀಸರು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಮಾಧ್ಯಮಗಳ ವರದಿಗಳಿಂದ ತನಿಖಾಧಿಕಾರಿಗಳು ಪ್ರಭಾವಕ್ಕೆ ಒಳಗಾಗಿ ತನಿಖೆ ಮಾಡಿದಂತಿದೆ. ಮಹಜರು ಪ್ರಕ್ರಿಯೆ, ಸ್ವಇಚ್ಚಾ ಹೇಳಿಕೆ, ತಡವಾಗಿ ಸಾಕ್ಷಿಗಳ ಹೇಳಿಕೆ ಪಡೆಯುವುದು, ಸಾಕ್ಷಿಗಳ ಸಂಗ್ರಹದಲ್ಲಿ ವಿಳಂಬ, FSL ವರದಿಗಳಲ್ಲಿನ ಲೋಪ, ತನಿಖೆಯ ಪ್ರತಿ ಹಂತಗಳಲ್ಲೂ IOs (ತನಿಖಾಧಿಕಾರಿಗಳು) ಎಡವಿದ್ದಾರೆ ಎಂದು ವಾದ ಸಲ್ಲಿಕೆಯಾಗಿತ್ತು.
ದರ್ಶನ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆದಿದೆ. ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಚಾಟಿಂಗ್ ಮಾಡಿದ ವಿಚಾರ ದರ್ಶನ್ಗೆ ಗೊತ್ತಿರಲಿಲ್ಲ. ಅವರ ಚಾಟಿಂಗ್ ವೇಳೆ ದರ್ಶನ್ ಕಾಶ್ಮೀರದ ಪ್ರವಾಸದಲ್ಲಿದ್ದರು. ಅಪಹರಣ ಮತ್ತು ಕೊಲೆಯಲ್ಲಿ ದರ್ಶನ್ ಪಾತ್ರವಿಲ್ಲ. ಇದೊಂದು ಕೆಟ್ಟ ತನಿಖಾ ವರದಿ ಎಂದು ಸಿ.ವಿ.ನಾಗೇಶ್ ಅವರು ಕೋರ್ಟ್ ಮುಂದೆ ಪೊಲೀಸರು ಲೋಪ ದೋಷಗಳ ಎಂದು ವಾದಿಸಿದ್ದರು.
ಇದಕ್ಕೆ ಪ್ರಬಲವಾಗಿ ವಿರೋಧಿಸಿದ್ದ ಎಸ್ಪಿಪಿ ಪ್ರಸನ್ನಕುಮಾರ್, ಪೊಲೀಸರು ಕೊಲೆಗೆ ಸಂಬಂಧಿಸಿ ಎಲ್ಲಾ ಟೆಕ್ನಿಕಲ್ ಸಾಕ್ಷಿಗಳನ್ನೂ ಕಲೆ ಹಾಕಿಯೇ ತನಿಖೆ ಮಾಡಿದ್ದಾರೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ, ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆ ತಂದು ಥಳಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೊಂದು ಪೂರ್ವ ನಿಯೋಜಿತ ಕೃತ್ಯ. ಇದರಲ್ಲಿ ದರ್ಶನ್ ಮತ್ತವರ ಆಪ್ತೆ ಪವಿತ್ರಾಗೌಡ, ಇನ್ನಿತರ ಆರೋಪಿಗಳು ಭಾಗಿದಾರಿಗಳು ಎಂದು ವಾದಿಸಿದ್ದರು.
A lower court in Bengaluru on Monday rejected the bail applications of actor Darshan Thoogudeepa and his close friend Pavithra Gowda in the Renukaswamy murder case.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm