ಬ್ರೇಕಿಂಗ್ ನ್ಯೂಸ್
16-10-24 10:19 pm HK News Desk ಕರ್ನಾಟಕ
ಶಿವಮೊಗ್ಗ, ಅ.16: ರಾಜ್ಯದಲ್ಲಿ ಹಿಂದುಳಿದ ವರ್ಗ, ದಲಿತ ವರ್ಗದ ಜೊತೆಗೆ ಎಲ್ಲಾ ಸಮುದಾಯದ ದೊಡ್ಡ ಸಂಘಟನೆ ಮಾಡಬೇಕು. ಇದು ಅನೇಕ ಸಾಧು ಸಂತರ ಅಪೇಕ್ಷೆ ಇದೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಸಭೆ ನಡೆಸಿ, ಅ.20 ರಂದು ಬಾಗಲಕೋಟೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಭೆಯಲ್ಲಿ ಸುಮಾರು ಎರಡೂವರೆ ಸಾವಿರ ಜನ ಸೇರುತ್ತಾರೆ. ಉತ್ತರ ಕರ್ನಾಟಕ ಭಾಗದ ಸುಮಾರು 25 ಮಂದಿ ಸಾಧು ಸಂತರು ಭಾಗವಹಿಸುತ್ತಾರೆ. ಹಿಂದು ಸಮಾಜದ ಎಲ್ಲಾ ಬಡವರಿಗೆ ಸರಿಯಾದ ಸಂಘಟನೆ ಇಲ್ಲ. ರಾಷ್ಟ್ರ ಭಕ್ತರ ದೊಡ್ಡ ಸಂಘಟನೆ ಆಗಬೇಕಿದೆ ಅಂತ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ಈ ಹಿಂದೆ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದೆ. ಯಡಿಯೂರಪ್ಪ ಹೇಳಿದರು ಅಂತ ರಾಯಣ್ಣ ಬ್ರಿಗೇಡ್ ನಿಲ್ಲಿಸಿ ತಪ್ಪು ಮಾಡಿದೆ. ಈಗ ಆ ರೀತಿ ಮಾಡಲ್ಲ, ನನ್ನ ಸಂಘಟನೆ ಮುಂದುವರಿಸುತ್ತೇನೆ ಎಂದಿದ್ದಾರೆ.
ವಕ್ಪ್ ಆಸ್ತಿ ಬಗ್ಗೆ ಅನ್ವರ್ ಮಾನಪ್ಪಾಡಿ ವರದಿ ಕೊಟ್ಟಿದ್ದಾರೆ. ರಾಜ್ಯದ ಶ್ರೀಮಂತ ಮುಸ್ಲಿಮರು ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ. ವರದಿ ಪ್ರಕಾರ ರೆಹಮಾನ್ ಖಾನ್, ಮಲ್ಲಿಕಾರ್ಜುನ ಖರ್ಗೆ ಆಸ್ತಿ ಲೂಟಿ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಹಾಗೂ ಬೇರೆ ಬೇರೆ ಪಕ್ಷದವರು ಇದ್ದಾರೆ. ಸಾವಿರಾರು ಕೋಟಿ ಲೂಟಿಯಾಗಿದೆ. ಪ್ರಭಾವಿ ಮುಸ್ಲಿಮರು ತಮ್ಮ ಆಸ್ತಿ ಹೋಗ್ತದೆ ಅಂತ ಏನು ಬೇಕಾದರೂ ಮಾಡಬಹುದು. ಡಿ.ಹೆಚ್. ಶಂಕರಮೂರ್ತಿ ಅವರು ಸಭಾಧ್ಯಕ್ಷರಾಗಿದ್ದಾಗ ವರದಿ ಸ್ವೀಕಾರ ಮಾಡಿದ್ದರು. ವರದಿ ಜಾರಿ ಮಾಡುವಾಗ ಅನ್ವರ್ ಮಾನಪ್ಪಾಡಿ ಹಾಗೂ ಡಿ.ಎಚ್. ಶಂಕರಮೂರ್ತಿ ಅವರಿಗೆ ರಕ್ಷಣೆ ಕೊಡಬೇಕು ಎಂದರು.
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯುವ ಸರ್ಕಾರದ ನಿರ್ಧಾರ ಟೀಕಿಸಿದ ಈಶ್ವರಪ್ಪ, ಪೊಲೀಸರ ರಕ್ಷಣೆಯನ್ನು ಸರ್ಕಾರ ಮಾಡಲ್ಲ ಅಂದರೆ ಸರಕಾರ ಬದುಕಿದೆಯಾ, ಸತ್ತಿದೆಯಾ.. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚಿದ್ದರು. ಸುಪ್ರೀಂ ಕೋರ್ಟ್ ಕೂಡ ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ. ಸಿದ್ದರಾಮಯ್ಯ, ಡಿಕೆಶಿ ಗೂಂಡಾಗಳ ರಕ್ಷಣೆಗೆ ಹೊರಟಿದ್ದಾರೆ. ಇದು ಗೂಂಡಾ ಸರ್ಕಾರನಾ ಎಂದು ಸಂಶಯ ಬರುತ್ತದೆ. ಈ ಧೋರಣೆ ಸರಿಯಲ್ಲ, ಹೀಗಾಗಿಯೇ ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗ್ತಿದೆ. ಇಡಿ ಕೇಸ್ ರದ್ದು ಮಾಡ್ತೀವಿ, ಕೇಸ್ ವಾಪಸ್ ಪಡೆಯುತ್ತೇವೆ ಅಂದ್ರೆ ಪೊಲೀಸರಿಗೆ ರಕ್ಷಣೆ ಕೊಡುವವರು ಯಾರು.. ನಮಗೆ ರಕ್ಷಣೆ ಇಲ್ಲ ಅಂತಾ ಪೊಲೀಸರು ಕೈಕಟ್ಟಿ ಕುಳಿತರೇ ರಕ್ಷಣೆ ಮಾಡುವವರು ಯಾರು? ಮಂತ್ರಿಗಳಿಗೆ ಪೊಲೀಸರು ರಕ್ಷಣೆ ಕೊಡುವುದಿಲ್ಲ. ಕರ್ನಾಟಕ ಗೂಂಡಾ ರಾಜ್ಯ ಆಗುತ್ತದೆ. ಬಾಂಗ್ಲಾದೇಶದಲ್ಲಿ ಇದೇ ನಡೆದಿದ್ದು.
ಸಿದ್ದರಾಮಯ್ಯ ಇತ್ತೀಚಿಗೆ ದೇವಸ್ಥಾನಕ್ಕೆ ಹೋಗ್ತಿದ್ದಾರೆ. ಈಗ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ಮೊದಲು ಕುಂಕುಮ ಹಚ್ಚಲು ಹೋದರೆ ಮೈಮೇಲೆ ದೆವ್ವ ಬಂದ ರೀತಿ ಆಡೋರು. ಈ ರೀತಿಯ ಭಕ್ತಿ ನಾಟಕೀಯ ಆಗಬಾರದು. ಈ ಭಕ್ತಿ ಮುಂದುವರಿಸಿ. ಮುಡಾ ಹಗರಣದಲ್ಲಿ ಸಿಲುಕಿದ್ದೀನಿ ಅಂತ, ವೈಯಕ್ತಿಕ ಲಾಭಕ್ಕೆ ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ ರಕ್ಷಣೆ ಕೊಡಬೇಕಾ.. ಮುಸ್ಲಿಮರು, ಗೂಂಡಾಗಳ ಪರ ಇದ್ದರೆ ಚಾಮುಂಡೇಶ್ವರಿ, ಎಲ್ಲಮ್ಮ ಹೇಗೆ ಕಾಪಾಡ್ತಾಳೆ. ಚಾಮುಂಡೇಶ್ವರಿ, ಎಲ್ಲಮ್ಮ ಸಹಿಸುವುದಿಲ್ಲ. ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ರೀತಿ ನೀವು ಸಂಹಾರ ಆಗ್ತೀರಾ ಎಂದು ಲೇವಡಿ ಮಾಡಿದರು.
ಜಾತಿ ಜನಗಣತಿ 18ಕ್ಕೆ ಮಂಡಿಸುತ್ತೇನೆ ಅಂದಿದ್ದರು. ಇದೀಗ 18ಕ್ಕೆ ಆಗಲ್ಲ, ಮುಂದೂಡುತ್ತೇನೆ ಅಂದಿದ್ದಾರೆ. 9 ವರ್ಷದ ಹಿಂದೆಯೇ ಜಾತಿಜನಗಣತಿ ಮಂಡಿಸುತ್ತೇನೆ ಅಂದಿದ್ದರು. 9 ವರ್ಷ ಆದರೂ ಮಂಡಿಸಲು ಆಗಿಲ್ಲ. ಇದೀಗ 25ಕ್ಕೆ ಮಂಡನೆ ಮಾಡ್ತೀನಿ ಅಂದಿದ್ದಾರೆ. ನೋಡೋಣ, 9 ವರ್ಷ ಕಾಯ್ದಿದ್ದೇವೆ ಇನ್ನೊಂದು ವಾರ ಕಾಯೋದಕ್ಕೆ ಆಗಲ್ವಾ.. ಮುಡಾ ಹಗರಣ ಡೈವರ್ಟ್ ಮಾಡಲು ಜಾತಿ ಜನಗಣತಿ ವರದಿ ಪ್ರಸ್ತಾಪ ಮಾಡಿದ್ದರೆ ಜನ ಸಹಿಸಲ್ಲ ಎಂದರು ಈಶ್ವರಪ್ಪ.
Eshwarappa slams Mallikarjun Kharge says will hold protest against him on October 20.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm