Actor Sudeep Mother Death, ಚಿತ್ರನಟ ಸುದೀಪ್ ತಾಯಿ ವಿಧಿವಶ ; ಶಿವಮೊಗ್ಗದ ಸಾರಿಗೆ ಉದ್ಯಮಿಯನ್ನು ವರಿಸಿದ್ದ ಉಡುಪಿ ಮೂಲದ ಸರೋಜಾ !

20-10-24 03:50 pm       HK News Desk   ಕರ್ನಾಟಕ

ಚಿತ್ರನಟ ಸುದೀಪ್ ಅವರ ತಾಯಿ ಸರೋಜಾ (83) ಅಲ್ಪಕಾಲದ ಅಸೌಖ್ಯದ ಬಳಿಕ ಭಾನುವಾರ (ಇಂದು) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು ಜೆಪಿ ನಗರದಲ್ಲಿರುವ ಸುದೀಪ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ಇದೇ ವೇಳೆ, ಸುದೀಪ್ ತಾಯಿ ಕರಾವಳಿ ಮೂಲದ ಎಲ್ಲಿಯವರು ಎನ್ನುವ ಜಿಜ್ಞಾಸೆ ಮೂಡಿದೆ. 

ಬೆಂಗಳೂರು, ಅ.20: ಚಿತ್ರನಟ ಸುದೀಪ್ ಅವರ ತಾಯಿ ಸರೋಜಾ (83) ಅಲ್ಪಕಾಲದ ಅಸೌಖ್ಯದ ಬಳಿಕ ಭಾನುವಾರ (ಇಂದು) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು ಜೆಪಿ ನಗರದಲ್ಲಿರುವ ಸುದೀಪ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ಇದೇ ವೇಳೆ, ಸುದೀಪ್ ತಾಯಿ ಕರಾವಳಿ ಮೂಲದ ಎಲ್ಲಿಯವರು ಎನ್ನುವ ಜಿಜ್ಞಾಸೆ ಮೂಡಿದೆ. 

ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಸುದೀಪ್ ತನ್ನ ತಾಯಿ ಮೂಲದ ಬಗ್ಗೆ ಹೇಳಿಕೊಂಡಿದ್ದರು. ಸುದೀಪ್ ಶಿವಮೊಗ್ಗ ಮೂಲದವರು ಆಗಿದ್ದರೂ, ತಾಯಿ ಮಂಗಳೂರು ಮೂಲದವರು. ಚೆನ್ನಾಗಿಯೇ ತುಳು ಮಾತಾಡುತ್ತಾರೆ ಎಂದಿದ್ದು ಕುತೂಹಲ ಕೆರಳಿಸಿತ್ತು. "ನನ್ನ ಅಮ್ಮ ಮಂಗಳೂರಿನವರು. ನನ್ನ ಅಪ್ಪ ಇಡೀ ಕರ್ನಾಟಕ ಎಲ್ಲಾ ಹುಡುಕಿ ಮಂಗಳೂರಿನ ಹುಡುಗಿಯನ್ನು ಇಷ್ಟಪಟ್ಟು ಮದುವೆಯಾಗಿದ್ದರು. ನನ್ನ ತಾಯಿ ತುಂಬಾ ಚೆನ್ನಾಗಿ ತುಳು ಮಾತನಾಡುತ್ತಾರೆ. ಒಂದು ದಿನ ನಾನೇ ಅವರನ್ನು ಇಲ್ಲಿಗೆ ಕಳುಹಿಸಿಕೊಡುತ್ತೇನೆ. ಅವರಲ್ಲಿ ತುಳು ಮಾತನಾಡಿ" ಎಂದು ಮಂಗಳೂರಿನಲ್ಲಿ ನಡೆದ ಯಕ್ಷ ಪಟ್ಲ ಕಾರ್ಯಕ್ರಮದಲ್ಲಿ ಅಮ್ಮನ ಬಗ್ಗೆ ಪ್ರೀತಿಯಿಂದ ಸುದೀಪ್‌ ಮಾತನಾಡಿದ್ದರು. 

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಸುದೀಪ್ ತಂದೆ ಸಂಜೀವ್‌ ಮಂಜಪ್ಪ ಅವರು ಸರೋಜಾ ಅವರನ್ನು ಮದುವೆಯಾದ ಬಳಿಕ ಶಿವಮೊಗ್ಗದಲ್ಲಿ ಹೊಟೇಲ್ ಉದ್ಯಮ ಆರಂಭಿಸಿದ್ದರು. ಅದಕ್ಕೂ ಮೊದಲೇ ಖಾಸಗಿ ಬಸ್ ಉದ್ಯಮ ನಡೆಸುತ್ತಿದ್ದರು. 1969ರಲ್ಲಿ ಮೊದಲ ಬಾರಿಗೆ ಶಿವಮೊಗ್ಗ- ಮಂಗಳೂರು ಮಧ್ಯೆ ಮೊದಲ ಬಾರಿಗೆ ಖಾಸಗಿ ಮಿನಿ ಬಸ್ ಸಾರಿಗೆ ಆರಂಭಿಸಿದ್ದರು. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದ ಸಂಜೀವ ಮಂಜಪ್ಪ ಅವರು, ಇಡೀ ಕರ್ನಾಟಕದಲ್ಲಿ ಮಿನಿ ಬಸ್ ಸಾರಿಗೆ ಪರಿಕಲ್ಪನೆ ತಂದಿದ್ದೇ ನಾನು. ಆಗೆಲ್ಲಾ ಶಿವಮೊಗ್ಗದಿಂದ ಮಂಗಳೂರು ತಲುಪಲು ಬೆಳಗ್ಗೆ ಹೊರಟರೆ ಸಂಜೆಯಾಗುತ್ತಿತ್ತು. ಆಗುಂಬೆ ಘಾಟಿಯಲ್ಲಿ ದೊಡ್ಡ ಬಸ್ಗಳು ಬ್ರಿಟಿಷ್ ಕಾಲದಿಂದಲೂ ಹೋಗುತ್ತಿರಲಿಲ್ಲ. ಮಿನಿ ಬಸ್ ಆರಂಭಿಸಿದ ಬಳಿಕ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗದಿಂದ ಹೊರಟ ಬಸ್ 9.30ರ ಸುಮಾರಿಗೆ ಮಂಗಳೂರು ತಲುಪುತ್ತಿತ್ತು ಎಂದು ಸ್ಮರಿಸಿದ್ದಾರೆ. 

ಸುದೀಪ್ ತಾಯಿ ಸರೋಜಾ ಅವರು ಮೂಲತಃ ಉಡುಪಿಯವರು. ತುಳು ಭಾಷಿಗರು. ಜಾತಿ ಬೇರೆಯಾಗಿದ್ದರೂ, ಸಾರಿಗೆ ಉದ್ಯಮಿಯಾಗಿದ್ದ ಸಂಜೀವಣ್ಣ ಮತ್ತು ಇವರ ನಡುವೆ ನಂಟು ಹೇಗೆ ಬೆಳೆಯಿತು ಎನ್ನುವುದು ತಿಳಿದಿಲ್ಲ. ಆದರೆ ಸರೋಜಾ ಮತ್ತು ಅವರ ತಾಯಿ ತುಳು ಮಾತೃಭಾಷೆಯವರಾಗಿದ್ದರು. ಮದುವೆಯ ಬಳಿಕ ಸರೋಜಾ ಅವರೊಂದಿಗೆ, ಸಂಜೀವಣ್ಣ ಅವರು ತಮ್ಮ ವಾಸ್ತವ್ಯವನ್ನು ಶಿವಮೊಗ್ಗ ನಗರಕ್ಕೆ ಬದಲಾಯಿಸಿದ್ದರು. ಹೀಗಾಗಿ ಇವರ ಉಡುಪಿ ಜಿಲ್ಲೆಯ ನಂಟು ಕಡಿದುಹೋಗಿತ್ತು. ಆದರೆ ಇವರ ಶಿವಮೊಗ್ಗದಿಂದ ಉಡುಪಿ, ಮಂಗಳೂರಿಗೆ ಮಿನಿ ಬಸ್ ಸಾರಿಗೆ ಉದ್ಯಮ ಕೆಲವು ವರ್ಷಗಳ ಕಾಲ ಮುಂದುವರಿದಿತ್ತು. ಆನಂತರ, ಸಂಜೀವ್‌ ಮಂಜಪ್ಪ ಅವರು ಹೋಟೆಲ್‌ ಉದ್ಯಮದ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದರು. ಇದೇ ಕಾರಣದಿಂದ ತಮ್ಮ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಿದ್ದರು. 

ಸುದೀಪ್ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ತಂದೆ ಸಿನಿಮಾ ನಿರ್ಮಾಣ, ವಿತರಕನಾಗಿ ತೊಡಗಿಸಿದ್ದರಿಂದ ಬೆಂಗಳೂರಿನಲ್ಲಿ ನೆಲೆಸುವಂತಾಗಿತ್ತು. ಕೆಲವು ವರ್ಷಗಳ ಬಳಿಕ ಶಿವಮೊಗ್ಗದ ಹೊಟೇಲ್ ಉದ್ಯಮವನ್ನು ಬೇರೆಯವರಿಗೆ ವಹಿಸಿ, ಪೂರ್ಣ ಪ್ರಮಾಣದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿದ್ದರು. ಸುದೀಪ್ ಈಗ ಶಿವಮೊಗ್ಗದ ಲಕ್ಕವಳ್ಳಿಯಲ್ಲಿ ತೋಟ ಮತ್ತು ಹೆಚ್ಚುವರಿ ಮನೆಯನ್ನೂ ಮಾಡಿಕೊಂಡಿದ್ದಾರೆ. ಅಷ್ಟೇ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಬೆಳೆದಿದ್ದಾರೆ. ಸುದೀಪ್ ಪ್ರೈಮರಿ ಓದುತ್ತಿದ್ದಾಗ ತುಂಬ ತುಂಟನಾಗಿದ್ದ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಾಯಿ ಸರೋಜಾ ಹೇಳಿದ್ದರು. ಆ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Kannada actor and television host Kichcha Sudeep’s mother, Saroja Sanjeev, died on Sunday, October 20. She was 86 years old. Saroja Sanjeev breathed her last at around 7 am at Apollo Hospital, Jayanagar, where she had been receiving treatment for age-related health complications. Despite efforts by the medical team to stabilise her condition, she succumbed to her illness in the early hours of the day.