ಬ್ರೇಕಿಂಗ್ ನ್ಯೂಸ್
28-10-24 05:46 pm HK News Desk ಕರ್ನಾಟಕ
ತುಮಕೂರು, ಅ 28: ತಾಲೂಕಿನ ಮಂದಾರಗಿರಿ ಬೆಟ್ಟದ ತಪ್ಪಲಿನ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿನಿ ಕೆಳಕ್ಕೆ ಬಿದ್ದು ಪೊಟರೆಗೆ ಸಿಲುಕಿಕೊಂಡ ಘಟನೆ ಭಾನುವಾರ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ ಸಿಬ್ಬಂದಿ, ಸೋಮವಾರ ಆಕೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾರೆ.
ಹಂಸ (19) ಆಪತ್ತಿಗೆ ಸಿಲುಕಿದ್ದ ವಿದ್ಯಾರ್ಥಿನಿ. ಗುಬ್ಬಿ ತಾಲೂಕು ಶಿವರಾಂಪುರದ ನಿವಾಸಿ ಸೋಮನಾಥ್ ಅವರ ಪುತ್ರಿ ಹಂಸ ಅವರು ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾರೆ. ಅವರು ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಹೋಗಿ, ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಡ ರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದರೆ ಆಕೆ ಸಿಲುಕಿರುವ ಜಾಗಕ್ಕೆ ಹೋಗುವುದು ಸವಾಲಿನ ಕೆಲಸವಾಗಿತ್ತು. ಹತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಭಾನುವಾರ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಸೋಮವಾರ ಘಟನೆ ನಡೆದ ಮಂದಾರಗಿರಿ ಬೆಟ್ಟದ ಬಳಿ ಮೈದಾಳ ಕೆರೆ ಕೋಡಿ ಸ್ಥಳಕ್ಕೆ ಮತ್ತೆ ತೆರಳಿದ್ದು, ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಿದ್ದರು. ಹಂಸ ಅವರ ತಂದೆ ಸೋಮನಾಥ್, ತಾಯಿ ರಾಧಾ ಮತ್ತು ಸಹೊದರ ಹರ್ಷ ಕೂಡ ಸ್ಥಳಕ್ಕೆ ದೌಡಾಯಿಸಿದ್ದರು.
ಕೋಡಿ ಹರಿಯುವ ಭಾಗದಲ್ಲಿ ಸುಮಾರು ಹದಿನೈದು ಅಡಿ ಆಳದಲ್ಲಿರುವ ಕಲ್ಲಿನ ಬಂಡೆ ನಡುವೆ ಹಂಸ ಸಿಲುಕಿರಬಹುದು ಎಂದು ಶಂಕಿಸಲಾಗಿತ್ತು. ಅದೀಗ ನಿಜವಾಗಿದೆ. ಕೋಡಿ ನೀರು ರಭಸದಿಂದ ಹರಿಯುತ್ತಿರುವ ಕಾರಣ, ಆಕೆಯ ಪತ್ತೆ ಹಾಗೂ ರಕ್ಷಣೆಗೆ ತೊಡಕಾಗಿತ್ತು. ಕೆರೆ ಕೊಡಿಯ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ, ಆಕೆ ಸಿಲುಕಿದ್ದ ಕಲ್ಲಿನ ಪೊಟರೆಯ ಜಾಗಕ್ಕೆ ನೀರು ಹೋಗದಂತೆ ನೋಡಿಕೊಂಡು, ಬಳಿಕ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಹಂಸ ಮತ್ತು ಅವರ ಸ್ನೇಹಿತೆಯರು ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ತೆರಳಿದ್ದರು. ಆಗ ಮೈದಾಳ ಕೆರೆ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ದುರ್ಗಮ ಜಾಗದಲ್ಲಿ ಒಂಟಿಯಾಗಿ ಇಡೀ ರಾತ್ರಿ ಕಳೆದ ಹಂಸಳ ಧೈರ್ಯವನ್ನು ಅನೇಕರು ಪ್ರಶಂಸಿಸಿದ್ದಾರೆ.
ಕುತ್ತಿಗೆವರೆಗೂ ನೀರಿತ್ತು… ಇಡೀ ರಾತ್ರಿ ಮಂಡಿ ಮೇಲೆ ಕೂತಿದ್ದೆ ;
ಸಾವಿನಿಂದ ಪಾರಾದ ಹಂಸಾ ಸುರಕ್ಷಿತವಾಗಿದ್ದು, ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಏನಾಯ್ತು? ಇಡೀ ರಾತ್ರಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಆ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಸ್ಕೂಲ್ ಫ್ರೆಂಡ್ ಬಂದಿದ್ದಳು. ನಾವಿಬ್ಬರೇ ಮೈದಾಳ ಕೆರೆಗೆ ಹೋಗಿದ್ವಿ. ಕೆರೆ ಕೋಡಿಯ ನೀರಿನಲ್ಲಿ ಫೋಟೋ ತೆಗೆದುಕೊಳ್ಳುವಾಗ ಏನಾಯ್ತೋ ಗೊತ್ತಿಲ್ಲ. ಪಟ್ ಅಂತ ಸ್ಲೀಪ್ ಆಯ್ತು ಎಂದು ಹಂಸಾ ಹೇಳಿದ್ದಾರೆ.
ನನಗೆ ಸ್ವೀಮಿಂಗ್ ಏನು ಬರಲ್ಲ. ಸೋ ನನ್ನ ಅದೃಷ್ಟ ಏನೋ ಗೊತ್ತಿಲ್ಲ. ಒಳಗಡೆ ಹೋಗಬೇಕಾದ್ರೆ ಜೀವ ಹೋಯ್ತು ಅಂದುಕೊಂಡೆ. ಆದರೆ ಪುಣ್ಯಕ್ಕೆ ಬಂಡೆ ಮಧ್ಯೆ ಸಿಲುಕಿಕೊಂಡಿದ್ದೆ. ಬಂಡೆ ಮೇಲೆ ಅಡ್ಜೆಸ್ಟ್ ಮಾಡಿಕೊಂಡು ಇಡೀ ರಾತ್ರಿ ಮಂಡಿ ಮೇಲೆ ನಿಂತಿದ್ದೆ.
ನನಗೆ ಒಂದು ಭರವಸೆ ಇತ್ತು. ಬೇರೆಯವರು ನೀರಿನಲ್ಲಿ ಮುಳುಗಿರೋದು ಎಲ್ಲಾ ನೋಡಿದ್ನಲ್ಲ. ಡ್ರೋಣ್ ಎಲ್ಲಾ ಹಾರಿಸಿ ರಕ್ಷಣೆ ಮಾಡುತ್ತಾರೆ ಅನ್ನೋ ಭರವಸೆ ಇತ್ತು. ನೈಟ್ ಎಲ್ಲಾ ಸ್ವಲ್ಪ ಕಷ್ಟ ಆಯ್ತು. ನನಗೆ ಕತ್ತಿನವರೆಗೆ ನೀರಿತ್ತು. ನಾನು ಮಂಡಿ ಸಪೋರ್ಟ್ ಕೊಟ್ಟಿಲ್ಲ ಅಂದ್ರೆ ನೀರು ಬರ್ತಿತ್ತು. ಮಂಡಿ ಸಪೋರ್ಟ್ ಕೊಟ್ಟಿರೋದ್ರಿಂದ ನೀರು ಮೇಲೆ ಬರಲಿಲ್ಲ. ತುಂಬಾ ಚಳಿಯಿತ್ತು. ಕಾಲು ಬಿಟ್ಟಿದ್ರೆ ಫುಲ್ ಕೆಳಗೆ ಹೋಗುತ್ತಿದ್ದೆ. ಅಲ್ಲಿ ಉಸಿರಾಟ ಆಡೋಕೆ ಸಣ್ಣದಾಗಿ ಜಾಗ ಇತ್ತು. ಅಲ್ಲಿ ತುಂಬಾ ಕೂಗಿದೆ.
ರಾತ್ರಿಯೆಲ್ಲಾ ಕಾಲ ಕಳೆದ ಮೇಲೆ ನನಗೆ ಬೆಳಗ್ಗೆ ಶಬ್ದ ಗೊತ್ತಾಯ್ತು. ಬೆಳಗ್ಗೆ ಬಂದು ರಕ್ಷಣೆ ಮಾಡಿದ್ರು. ಅವರು ರಕ್ಷಣೆ ಮಾಡುವಾಗ ನನಗೆ ಸೌಂಡ್ ಎಲ್ಲಾ ಕೇಳ್ತಿತ್ತು. ನಿನ್ನೆ ನನಗೆ ಏನು ಗೊತ್ತಾಗಲಿಲ್ಲ. ನನಗೆ ಬದುಕ್ತಿನಿ ಅಂತ ನಂಬಿಕೆ ಇತ್ತು.
ನಾನು ಸಿದ್ಧಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದುತ್ತಾ ಇದ್ದೀನಿ. ದೇವರು ದೊಡ್ಡವನು. ಸಡನ್ ಆಗಿ ಸೆಲ್ಫ್ ಕಾನ್ಫಿಡೆನ್ಸ್ ಕಳೆದುಕೊಳ್ಳಬಾರದು. ಅಪ್ಪಾಜಿ, ಅಮ್ಮನ್ನ ನೆನಪಿಸಿಕೊಳ್ಳಬೇಕು. ನಾನು ಅಪ್ಪಾಜಿ, ಅಮ್ಮನ್ನ ನೆನಸಿಕೊಂಡೆ. ಖುಷಿಯಿದೆ, ನಾನು ಇದನ್ನ ಒಂದು ಅನುಭವ ಅಂತ ತಗೊಂಡಿದ್ದೀನಿ. ಮೀಡಿಯಾಯಿಂದ ಹಿಡಿದು ಎಲ್ಲರಿಗೂ ನಾನು ಧನ್ಯವಾದ ಹೇಳ್ತೀನಿ. ಟ್ರಾವೆಲಿಂಗ್ ಮಾಡುವಾಗ ಫೋಟೋ ತೆಗೆದುಕೊಳ್ಳುವಾಗ ಸೇಫ್ಟಿ ತುಂಬಾ ಮುಖ್ಯ. ನನಗೆ ಮಂತ್ರಾಲಯದಲ್ಲಿ ಇದೇ ರೀತಿ ಸ್ಲೀಪ್ ಆಗಿತ್ತು. ಅವಾಗ ಮೊಬೈಲ್ ಕೆಳಗೆ ಬಿದಿತ್ತು. ಇವಾಗ ನನಗೆ ಏನು ಪ್ರಾಬ್ಲಂ ಇಲ್ಲ ಎಂದು ಹಂಸಾ ಹೇಳಿದ್ದಾರೆ.
19 year old girl falls into lake while taking selfie, rescued after 12 hours of operation in Tumkur. Hamsa who was clicking slipped and fell into lake.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm