ಬ್ರೇಕಿಂಗ್ ನ್ಯೂಸ್
29-10-24 10:09 pm HK News Desk ಕರ್ನಾಟಕ
ಹಾಸನ, ಅ.29: ರೈತರ ಜಮೀನಿನಲ್ಲಿ ವಕ್ಫ್ ಆಸ್ತಿಯೆಂದು ರಾಜ್ಯ ಸರ್ಕಾರ ನೋಟೀಸ್ ನೀಡುತ್ತಿದ್ದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಹಿಂದೆ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ರಾಜ್ಯದ ಕಾಂಗ್ರೆಸ್ ಸರ್ಕಾರವೂ ಒಡೆದು ಆಳುವ ನೀತಿಯನ್ನ, ಅದೇ ರೀತಿಯ ಕುತಂತ್ರ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಹಾಸನದಲ್ಲಿ ತಂದೆ ಯಡಿಯೂರಪ್ಪ ಜೊತೆಗೆ ಹಾಸನಾಂಬೆ ದರ್ಶನ ಮಾಡಿದ ಬಳಿಕ ವಿಜಯೇಂದ್ರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಪಕ್ಷದ ಹಿರಿಯ ಮುಖಂಡರಾಗಿರುವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಒಂದು ತಂಡ ಬಿಜಾಪುರ ಜಿಲ್ಲೆಯ ತಾಲ್ಲೂಕುಗಳಿಗೆ ಭೇಟಿಯನ್ನ ನೀಡಿದ್ದಾರೆ. ಅಲ್ಲಿಯ ರೈತರನ್ನು ಭೇಟಿ ಮಾಡಿದ್ದಾರೆ, ಅಧಿಕಾರಿಗಳನ್ನು ಭೇಟಿ ಮಾಡ್ತಿದ್ದಾರೆ. ಒಂದು ಸ್ಪಷ್ಟವಾಗಿ ಗೋಚರ ಆಗುತ್ತಿದೆ. ಆ ಜಮೀರ್ ಅಹ್ಮದ್ ಬಾಯಲ್ಲಿ ಆ ಮಾತುಗಳನ್ನ ಕೇಳಿದ್ರೆ ಇವರು ಸಂವಿಧಾನ ಹೆಸರು ಹೇಳಿಕೊಂಡು, ಸಂವಿಧಾನ ಬದ್ಧವಾಗಿ ನಡೆದುಕೊಳ್ತೇವೆ ಹೇಳ್ತಾರೆ. ಅದಕ್ಕೆ ಅಪಚಾರ ಮಾಡುವ ರೀತಿಯಲ್ಲಿ ಇವತ್ತು ಸಚಿವರು ನಡೆದುಕೊಳ್ಳುತ್ತಿದ್ದಾರೆ. ಬೇಲಿ ಎದ್ದು ಹೊಲ ಮೇಯ್ದಂತೆ ಆಗಿದೆ ಇವತ್ತು. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಸ್ವತಃ ಸಚಿವರ ನೇತೃತ್ವದಲ್ಲೇ ಆಗ್ತಿದೆ.
ಹಲವಾರು ದಶಕಗಳಿಂದ ವಿಜಯಪುರ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ರೈತರು ಉಳುಮೆ ಮಾಡುತ್ತಿದ್ದ ಭೂಮಿಗೆ ನೋಟಿಸ್ ಕೊಟ್ಟಿದ್ದಾರೆ. ರೈತರ ಜಮೀನನ್ನು ಕಿತ್ತುಕೊಳ್ಳುವ ಕೆಲಸವನ್ನು ವಕ್ಫ್ ಬೋರ್ಡ್ ಮಾಡುತ್ತಿದೆ. ಅದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಜಮೀರ್ ಅಹಮದ್ ಮಾಡ್ತಾ ಇರೋದು ದುರದೃಷ್ಟ. ಮನಬಂದಂತೆ ಮಾತನಾಡುತ್ತಿರುವ ಜಮೀರ್ ಅಹಮದ್‌ಗೆ ಎಚ್ಚರಿಕೆ ನೀಡುತ್ತೇನೆ. ತತ್‌ಕ್ಷಣ ಸುಧಾರಿಸದೆ ಹೋದರೆ ನೀವು ಹಚ್ಚಿರುವ ಕಿಡಿ ಇಡೀ ರಾಜ್ಯ ವ್ಯಾಪಿ ಬೆಂಕಿ ಹತ್ತಿಕೊಳ್ಳುತ್ತೆ. ಅದನ್ನು ಆರಿಸಲು ಸರ್ಕಾರಕ್ಕೆ ಆಗುವುದಿಲ್ಲ. ಈ ರೀತಿ ಬೆಂಕಿ ಹಚ್ಚುವುದನ್ನು ಬಿಟ್ಟು ದೇವರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವುದು ಒಳ್ಳೆಯದು. ಇವತ್ತು ನಮ್ಮ ತಂಡ ಸಂಜೆ ಅಥವಾ ರಾತ್ರಿ ವರದಿಯನ್ನು ನೀಡ್ತಾರೆ. ಇವತ್ತು ರಾತ್ರಿ ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡ್ತೇವೆ. ಮುಂದೆ ಯಾವ ರೀತಿ ಹೋರಾಟವನ್ನು ತೆಗೆದುಕೊಳ್ಳಬೇಕು, ಈ ಸರ್ಕಾರವನ್ನು ಯಾವ ರೀತಿ ಎಚ್ಚರಿಸಬೇಕು ಎಲ್ಲವನ್ನೂ ಕೂಡ ರಾತ್ರಿಯ ಚರ್ಚೆ ಮಾಡ್ತೇವೆ ಎಂದು ಹೇಳಿದರು.
ಮೂರು ಉಪ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಯಶಸ್ಸು ಕಾಣ್ತಾರೆ, ದೊಡ್ಡ ಅಂತರದಲ್ಲಿ ಗೆಲ್ತಾರೆ. ಐತಿಹಾಸಿಕ ಗೆಲುವು ಸಂಡೂರಿನಲ್ಲಿ ಆಗೋದಿದೆ. ಸಂಡೂರಿನಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಅಲ್ಲೂ ಕೂಡ ಬಿಜೆಪಿ ಗೆಲ್ಲುತ್ತೆ ಎನ್ನುವ ವಿಶ್ವಾಸ ನನಗಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ಮೇಲೆ ಕೆಲವರ ಬ್ಯಾಟರಿ ಡೌನ್ ಆಗಿದೆ. ಏನ್ ಗೆದ್ದೇ ಬಿಟ್ವಿ ಎನ್ನುವ ಭ್ರಮೆಯಲ್ಲಿದ್ದರು. ವಾಸ್ತವಿಕ ಪರಿಸ್ಥಿತಿ ಈಗ ಅರ್ಥ ಆಗ್ತಿದೆ. ವಾತಾವರಣ ದಿನೇ ದಿನೇ ಎನ್‌ಡಿಎ ಅಭ್ಯರ್ಥಿ ಪರ ನಿರ್ಮಾಣವಾಗಿದೆ. ನಿಶ್ಚಿತವಾಗಿ ನಿಖಿಲ್ ಕುಮಾರಸ್ವಾಮಿ ಅವರು ಗೆಲ್ತಾರೆ ಎಂದು ಹೇಳಿದ ವಿಜಯೇಂದ್ರ, ಮನೆಗೆ ಅತಿಥಿಗಳು ಬಂದಾಗ, ಮನೆಯಲ್ಲಿರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಮನೆಯಿಂದ ಹೊರ ಹೋದ ಮೇಲೆ ಅಂಥ ಪ್ರಶ್ನೆಯೇ ಇಲ್ಲ ಎಂದು ಪರೋಕ್ಷವಾಗಿ ಯೋಗೀಶ್ವರ್ ವಿರುದ್ಧ ವ್ಯಂಗ್ಯವಾಡಿದರು.
The state government is issuing notices on farmers' land as waqf property, and it is as if the fence has been raised and the field has been grazed. Earlier, the British were following the policy of divide and rule. BJP state president BY Vijayendra said that the Congress government in the state is also following the policy of divide and rule and similar tactics.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm