ಬ್ರೇಕಿಂಗ್ ನ್ಯೂಸ್
29-10-24 11:02 pm HK News Desk ಕರ್ನಾಟಕ
ವಿಜಯಪುರ, ಅ.29: ವಿಜಯಪುರ ಜಿಲ್ಲೆಯಲ್ಲಿ 1200 ಎಕರೆ ಭೂಮಿ ವಕ್ಫ್ ಆಸ್ತಿಯೆಂದು ರೈತರಿಗೆ ತಹಸೀಲ್ದಾರ್ ನೋಟಿಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದ್ದು ಹಿರಿಯ ಮುಖಂಡ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ವಿಜಯಪುರ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿದೆ. ಇನ್ನೊಂದೆಡೆ ರೈತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯಪುರದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆದಿದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 14201 ಎಕರೆ ಕೃಷಿ ಜಮೀನು ಇದೆ. ಈ ಪೈಕಿ ಇನಾಮ್ ಅಬ್ಯೂಲೇಶನ್ ಆಕ್ಟ್ ನಲ್ಲಿ 1459 ಎಕರೆ ಜಮೀನು ಹೋಗಿದೆ. ಲ್ಯಾಂಡ್ ರಿಫಾರ್ಮ್ಸ ಆಕ್ಟ್ ಪ್ರಕಾರ 11835 ಎಕರೆ ಇದೆ. ಲ್ಯಾಂಡ್ ಅಕ್ವಿಶನ್ ಆಕ್ಟ್ - ನಲ್ಲಿ 133 ಎಕರೆ ಜಮೀನು ಹೋಗಿದೆ. ಸದ್ಯ ವಕ್ಫ್ ಆಸ್ತಿಯೆಂದು 773 ಎಕರೆ ಜಮೀನು ಇದೆ. ಇದು ವಕ್ಫ್ ಇಲಾಖೆಯ ಅಧೀನದಲ್ಲೇ ಇದೆ. ಕೆಲವು ಕಡೆ ಜಮೀನು ಒತ್ತುವರಿ ಆಗಿರುವುದನ್ನು ತೆರವು ಮಾಡುವಂತೆ ವಕ್ಫ್ ಸಚಿವ ಜಮೀರ್ ಅಹ್ಮದ್ ಸೂಚನೆ ನೀಡಿದ್ದರು. ಅವರ ಸೂಚನೆ ಮೇರೆಗೆ ನೋಟಿಸ್ ಮಾಡಿದ್ದೇವೆ ಎಂದು ಹೇಳಿದರು.
ಮೊದಲಿನಿಂದಲೂ ವಕ್ಫ್ ಭೂಮಿ ಇಂಡೀಕರಣ ಸತತವಾಗಿ ನಡೆಯುತ್ತಿದೆ. ಪ್ರತಿ ವರ್ಷವೂ ಇಂಡೀಕರಣ ಆಗಿವೆ. ನೋಟಿಸ್ ಕೊಡದೆಯೂ ಇಂಡೀಕರಣ ಆದ ಉದಾಹರಣೆ ಇವೆ. ಕೆಲವು ಕಡೆ ಕಂದಾಯ ನ್ಯಾಯಮಂಡಳಿಗೆ ರೈತರು ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 433 ರೈತರಿಗೆ ನೋಟಿಸ್ ಕೊಟ್ಟಿದ್ದೇವೆ. ನೋಟಿಸ್ ಕೊಟ್ಟ ತಕ್ಷಣ ಖಾತೆ ಬದಲಾವಣೆ ಆಗಲ್ಲ. ಎರಡೂ ಪಾರ್ಟಿಗಳಿಗೆ ಕರೆದು ವಿಚಾರಣೆ ನಡೆಸುತ್ತೇವೆ. ನೋಟಿಸ್ ಭೂ ಮಾಲಿಕರಿಗೆ ಹಾಗೂ ವಕ್ಫ್ ಗೂ ನಾವು ಕೊಟ್ಟಿದ್ದೇವೆ.
ಆದರೆ ಕಾಲಂ ನಂ 9 ರಲ್ಲಿ ವಕ್ಫ್ ಆಸ್ತಿ ಎಂದು ಯಾವುದೂ ಆಗಿಲ್ಲ. ಕಬ್ಜಾದಾರರು ಪರವಾಗಿ ಅಥವಾ ಮಾಲೀಕತ್ವ ಜಾಗೆಯಲ್ಲಿ ವಕ್ಫ್ ಹೆಸರು ಹಾಕಿಲ್ಲ. 44 ಭೂಮಿಗಳಿಗೆ ನೋಟಿಸ್ ಕೊಡದೆ ಇಂಡೀಕರಣ ಮಾಡಿದ್ದೇವೆ, ಆದ್ರೆ ಅವರ ಮಾಲಿಕತ್ವ ಬದಲಾಗಿಲ್ಲ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್
ಸ್ಪಷ್ಟನೆ ನೀಡಿದ್ದಾರೆ.
ಇಂಡಿ ತಹಶಿಲ್ದಾರ್ 41 ಭೂಮಿಗೆ ನೋಟಿಸ್ ಕೊಡದೆ ಇಂಡೀಕರಣ ಮಾಡಿದ್ದಾರೆ. ಆದರೆ ಈಗ ಆ 41 ಇಂಡೀಕರಣವನ್ನು ಕ್ಯಾನ್ಸಲ್ ಮಾಡಿದ್ದೇವೆ. ನಾಳೆ ಪಹಣಿಯ ಕಲಂ ನಂಬರ್ 11ರಲ್ಲಿ ಸೇರ್ಪಡೆಯಾದ ವಕ್ಫ್ ಹೆಸರನ್ನು ತೆಗೆದು ಪಹಣಿ ಕೊಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 10 ವರ್ಷದ ಬಳಿಕ ಪುನಃ ಸಮಸ್ಯೆ ಬರಬಾರದು ಎಂದು ಟಾಸ್ಕ್ ಪೋರ್ಸ್ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಟಾಸ್ಕ್ ಪೋರ್ಸ್ ರಚಸಿದ್ದಾರೆ. 124 ನೋಟಿಸ್ ಕೊಟ್ಟಿದ್ದೇವೆ, ಅದನ್ನ ವಾಪಸ್ ಪಡೆಯುತ್ತೇವೆ. ನೋಟಿಸ್ ಕೊಟ್ಟ ತಕ್ಷಣ ಇಂಡೀಕರಣ, ಪಹಣಿಯಲ್ಲಿ ಹೆಸರು ಬರಲ್ಲ. ಅಂದಾಜು 250 ಎಕರೆ ಜಮೀನಿನ ಮಾಲೀಕರಿಗೆ ನೋಟಿಸ್ ಕೊಡಲಾಗಿತ್ತು ಎಂದು ಟಿ.ಭೂಬಾಲನ್ ತಿಳಿಸಿದ್ದಾರೆ.
Even as the fact-finding team of BJP leaders visited some villages in Vijayapura district to meet farmers who complained of receiving notices from the waqf board seeking to reclaim their lands, the district authorities said on Tuesday that 124 notices issued to around 400 farmers in some villages would be withdrawn.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm