ಬ್ರೇಕಿಂಗ್ ನ್ಯೂಸ್
31-10-24 10:38 pm Bangalore Correspondent ಕರ್ನಾಟಕ
ಬೆಂಗಳೂರು, ಅ 31: ಮಕ್ಕಳ ಸಮೇತ ದಂಪತಿ ತೆರಳುತ್ತಿದ್ದ ಕಾರು ಅಡ್ಡಗಟ್ಟಿದ ಪುಂಡರು ದಾಳಿ ಮಾಡಿದ ಪರಿಣಾಮ ಕಾರಿನಲ್ಲಿದ್ದ ಬಾಲಕ ಗಾಯಗೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಕಸವನಹಳ್ಳಿ ಅಮೃತ ಕಾಲೇಜು ಬಳಿ ಇಬ್ಬರು ಬೈಕ್ನಲ್ಲಿ ಬಂದ ಪುಂಡರು ಹಲ್ಲೆ ನಡೆಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ಶಾಪಿಂಗ್ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ಕುಟುಂಬವನ್ನು ಬೈಕ್ನಲ್ಲಿ ಹಿಂಬಾಲಿಸಿದ್ದರು. ಇಬ್ಬರು ಮಕ್ಕಳೊಂದಿಗಿದ್ದ ಅನೂಪ್ ದಂಪತಿಯ ಕಾರನ್ನು ಅಮೃತ ಕಾಲೇಜು ಬಳಿ ಆರೋಪಿಗಳು ಅಡ್ಡಗಟ್ಟಿದ್ದರು. ಬಳಿಕ ಕಾರಿನ ಗಾಜು ಇಳಿಸುವಂತೆ ಹೆದರಿಸಿದ್ದರಿಂದ ಆತಂಕಗೊಂಡ ಅನೂಪ್ ಅವರು ಗಾಜು ತೆರೆಯದೆ ಕಾರು ಓಡಿಸಿದ್ದಾರೆ. ಆಕ್ರೋಶಗೊಂಡ ಆರೋಪಿಗಳು, ಕಲ್ಲಿನಿಂದ ಕಾರಿನ ಹಿಂಭಾಗದ ಗಾಜಿಗೆ ಹೊಡೆದಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳ ಪೈಕಿ ಐದು ವರ್ಷದ ಮಗುವಿನ ತಲೆಗೆ ಗಂಭೀರ ಗಾಯವಾಗಿದೆ. ಇದನ್ನು ಕಂಡು ಅನೂಪ್ ಪತ್ನಿ ಚೀರಾಡುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗಾಯಾಳು ಮಗುವಿನ ತಂದೆ ಅನೂಪ್ ಪ್ರತಿಕ್ರಿಯಿಸಿದ್ದು "ನಾನು ಮತ್ತು ನಮ್ಮ ಕುಟುಂಬಸ್ಥರು ಮನೆಗೆ ವಾಪಸ್ ಬರುವಾಗ ಇಬ್ಬರು ಬೈಕ್ನಲ್ಲಿ ಬಂದು ನಮ್ಮ ಕಾರು ನಿಲ್ಲಿಸಿದ್ದರು. ಏನೆಂದು ಕೇಳಿದಾಗ ಏನನ್ನು ಹೇಳದೆ ಮುಂದೆ ಹೋಗಿದ್ದರು. ಮತ್ತೆ ಹಿಂಬಾಲಿಸಿ ಕಾರು ನಿಲ್ಲಿಸಿದ್ದರು. ಕಾರಿನಿಂದ ಹೊರ ಬರುವಂತೆ ಧಮ್ಕಿ ಹಾಕಿದ್ರು. ಇಳಿಯದಿದ್ದಾಗ ಓರ್ವ ಆರೋಪಿ ಕಲ್ಲು ತೆಗೆದುಕೊಂಡು ಹಿಂಬದಿ ಸೀಟ್ನ ಗಾಜಿಗೆ ಹೊಡೆದ. ಪರಿಣಾಮ ಐದು ವರ್ಷದ ಮಗುವಿಗೆ ಕಲ್ಲು ತಾಗಿದೆ. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಮಗುವಿಗೆ ತೀವ್ರ ರಕ್ತಸ್ರಾವವಾಗಿದ್ದು, ಮೂರು ಸ್ಟಿಚ್ ಹಾಕಲಾಗಿದೆ. ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ" ಎಂದು ತಮಗಾದ ಕಹಿ ಘಟನೆ ಬಗ್ಗೆ ವಿವರಿಸಿದ್ದಾರೆ.
Another incident of road rage occurred in Bengaluru, where rowdies attacked a family’s car near Amrutha College in Kasavanahalli. The goons aggressively followed the family’s vehicle all the way to Aarogya Hastha Hospital, continuing their intimidation. During the attack, the… pic.twitter.com/Imd4CDGoGA
— Karnataka Portfolio (@karnatakaportf) October 30, 2024
Road rage in bangalore 5 year old boy injured as family returning after Diwali shopping attacked
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm