ಬ್ರೇಕಿಂಗ್ ನ್ಯೂಸ್
01-11-24 06:00 pm Bangalore Correspondent ಕರ್ನಾಟಕ
ಬೆಂಗಳೂರು, ನ.1: ವಿಜಯಪುರ ಜಿಲ್ಲೆಯ ವಕ್ಫ್ ಆಸ್ತಿ ವಿವಾದ ಇತರ ಜಿಲ್ಲೆಗಳಿಗೂ ಹರಡುವ ಸಾಧ್ಯತೆ ಕಂಡುಬಂದಿದೆ. ಮಂಡ್ಯ ಜಿಲ್ಲೆಯ ದೇವಸ್ಥಾನ ಒಂದರ ಆಸ್ತಿಯೂ ವಕ್ಫ್ ಇಲಾಖೆಯದ್ದೆಂದು ನಮೂದಿಸಲಾಗಿದ್ದು ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಎಂಬ ಗ್ರಾಮದಲ್ಲಿ 6 ಗುಂಟೆ ವ್ಯಾಪ್ತಿಯಲ್ಲಿ ಚಿಕ್ಕಮ್ಮ ದೇವಿ ಎಂಬ ದೇವಸ್ಥಾನ ಇದೆ. ಹಲವು ವರ್ಷಗಳ ಹಿಂದೆಯೇ ಈ ದೇವಸ್ಥಾನ ಕಟ್ಟಿಸಿ ಗ್ರಾಮದ ಜನರು ಚಿಕ್ಕಮ್ಮ ದೇವಿಯನ್ನು ಪೂಜಿಸುತ್ತಾ ಬರುತ್ತಿದ್ದಾರೆ. 2023 ಜುಲೈ 17ರ ವರೆಗೆ ದೇವಸ್ಥಾನದ 6 ಗುಂಟೆ ಜಾಗದ ಆರ್‌ಟಿಸಿಯಲ್ಲಿ ಬಂಜರು ಎಂದು ಉಲ್ಲೇಖವಾಗಿತ್ತು. ಅಂದರೆ ಇದು ಸರ್ಕಾರಿ ಜಮೀನು ಎಂದರ್ಥ. ಇನ್ನೊಂದೆಡೆ ಸಾಗುವಳಿ ಕಾಲಂನಲ್ಲಿ ಚಿಕ್ಕಮ್ಮನ ದೇವಸ್ಥಾನ ಎಂದು ಹೆಸರಿತ್ತು. ಆದರೆ ಇದೀಗ ಈ ದೇವಸ್ಥಾನ ಹಾಗೂ ಜಾಗವನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ.
2023ರ ಜುಲೈ 17ರಂದು ಕೋರ್ಟ್ ಆದೇಶದ ನೆಪದಲ್ಲಿ ಪಾಂಡವಪುರ ಉಪವಿಭಾಗ ಅಧಿಕಾರಿ ದೇವಸ್ಥಾನದ ಜಾಗವನ್ನು ವಕ್ಛ್ ಆಸ್ತಿ ಎಂದು ಮ್ಯುಟೇಶನ್ ಮಾಡಿದ್ದಾರೆ. ಇದೀಗ ಗ್ರಾಮಸ್ಥರು ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಆಸ್ತಿಯ ವಿವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಸರ್ವೇ ನಂಬರ್‌ನಲ್ಲಿ ಆರ್‌ಟಿಸಿ ಗಮನಿಸಿದಾಗ ಈ ವಿವರ ಬೆಳಕಿಗೆ ಬಂದಿದೆ. ಗ್ರಾಮಸ್ಥರ ಗಮನಕ್ಕೆ ಬಾರದೇ ಹಿಂದೂ ದೇವಸ್ಥಾನವನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿರೋದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ರೈತರಿಗೂ ತಟ್ಟಿದ ವಕ್ಪ್ ಬಿಸಿ
ಇದೇ ವೇಳೆ, ಕುಂದಾನಗರಿ ಬೆಳಗಾವಿ ಜಿಲ್ಲೆಯ ರೈತರಿಗೂ ವಕ್ಫ್ ಬೋರ್ಡ್ ಶಾಕ್ ಕೊಟ್ಟಿದ್ದು, 30 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಪತ್ತೆಯಾಗಿದೆ. ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ 10 ರೈತ ಕುಟುಂಬಗಳು ಹಾಗೂ ಮೂಡಲಗಿ ತಾಲೂಕಿನ 20 ರೈತರ ಪಹಣಿ ಪತ್ರದಲ್ಲಿ ವಕ್ಫ್ ಎಂದು ಉಲ್ಲೇಖಿಸಲಾಗಿದೆ.
ರಾಕೇಶ ಕೋಳಿ ಎಂಬವರಿಗೆ ಸೇರಿದ 1 ಎಕರೆ 5 ಗುಂಟೆ ಜಮೀನು, ಮಹಾವೀರ ಬಡಿಗೇರ ಕುಟುಂಬಕ್ಕೆ ಸೇರಿದ 2 ಎಕರೆ, ಸುನೀಲ ಮುಜಾವರಗೆ ಸೇರಿದ 1 ಎಕರೆ 31 ಗುಂಟೆ ಜಮೀನು, ಸುಮಿತ್ರಾ ಮುಜಾವರ್‌ಗೆ ಸೇರಿದ 1.36 ಎಕರೆ, ಸುಭಾಷ ಭೀಮರಾಯಿಗೆ ಸೇರಿದ 5 ಗುಂಟೆ, ಬಾಬು ಮಾಲಗಾರಗೆ 30 ಗುಂಟೆ, ಬಾಬು ಮುಜಾವರ್‌ಗೆ ಸೇರಿದ 2 ಎಕರೆ, ದ್ವಾರಪಾಲ್ ಗೌರಾಜ್ 2.2 ಎಕರೆ ಸಾತಪ್ಪ ಮಾಳಿಗೆ ಸೇರಿದ 2.15 ಎಕರೆ, ರಾಜು ಮುಜಾವರಗೆ ಸೇರಿದ 2.10 ಎಕರೆ ಜಮೀನಿಗೆ ವಕ್ಫ್ ಬೋರ್ಡ್ ಕನ್ನಹಾಕಿದ್ದು ಪಹಣಿ ಪತ್ರದಲ್ಲಿ ವಕ್ಫ್ ಇಲಾಖೆಯದ್ದು ಎಂದು ನಮೂದು ಮಾಡಿದೆ. ಇದೇ ವೇಳೆ, ಚಿಕ್ಕೋಡಿ ಜಿಲ್ಲೆಯ ಬಿಜೆಪಿ ಸಂಸದೆ ಶಶಿಕಲಾ ಜೊಲ್ಲೆ ಅವರ ಪುತ್ರನಿಗೆ ಸೇರಿದ ಜಾಗಕ್ಕು ವಕ್ಫ್ ಬಿಸಿ ತಟ್ಟಿದೆ.
Waqf property row now begins at belagavi after vijaypur. A temple property is now built on waqf land states adminstration.
21-12-25 05:33 pm
HK News Desk
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 01:18 pm
Mangalore Correspondent
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm