ಬ್ರೇಕಿಂಗ್ ನ್ಯೂಸ್
07-11-24 04:24 pm HK News Desk ಕರ್ನಾಟಕ
ಕಾರ್ಕಳ, ನ.7: ರಾಜ್ಯದಲ್ಲಿ ಮೊದಲ ನಕ್ಸಲ್ ಎನ್ಕೌಂಟರ್ ಆಗಿದ್ದ ಕಾರ್ಕಳ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲು ಗ್ರಾಮ ಈದುವಿನಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಭೀತಿ ಆವರಿಸಿದೆ. ಎರಡು ದಿನಗಳ ಹಿಂದೆ ಐದಾರು ಮಂದಿ ಇದ್ದ ಶಸ್ತ್ರಸಜ್ಜಿತ ಯುವಕರ ತಂಡವು ಈದು ಗ್ರಾಮದ ಮುಸ್ಲಿಂ ಕಾಲೊನಿಯ ಬಂಡೆಕಲ್ಲು ಎಂಬಲ್ಲಿ ಸ್ಥಳೀಯರಿಗೆ ಕಾಣಸಿಕ್ಕಿದೆ.
ಕಾಡಿಗೆ ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ್ದ ಸ್ಥಳೀಯರು ಶಸ್ತ್ರ ಹಿಡಿದುಕೊಂಡಿದ್ದ ಯುವಕರನ್ನು ಕಂಡಿದ್ದು, ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 30ರಿಂದ 40 ವರ್ಷ ಪ್ರಾಯದ ಯುವಕರು ಎನ್ನಲಾಗುತ್ತಿದ್ದು 2003ರಲ್ಲಿ ಇದೇ ಗ್ರಾಮದ ಬೊಲ್ಲೊಟ್ಟು ಎಂಬಲ್ಲಿ ಇಬ್ಬರು ಮಹಿಳಾ ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಬೊಲ್ಲೊಟ್ಟು ಪ್ರದೇಶದಿಂದ ಒಂದು ಕಿಮೀ ಅಂತರದಲ್ಲಿ ಈಗ ನಕ್ಸಲರು ಪತ್ತೆಯಾಗಿದ್ದಾರೆ.
2003ರಲ್ಲಿ ಬೊಲ್ಲೊಟ್ಟು ರಾಮ ಪೂಜಾರಿ ಎಂಬವರ ಮನೆಗೆ ನಕ್ಸಲರು ಭೇಟಿ ನೀಡಿದ್ದರು. ಆಗಿನ ಉಡುಪಿ ಎಸ್ಪಿಯಾಗಿದ್ದ ಮುರುಗನ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ನಕ್ಸಲ್ ತಂಡದ ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರು ಹತರಾಗಿದ್ದರು. ರಾಜ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಎನ್ಕೌಂಟರ್ ಆಗಿದ್ದು ಅದೇ ಮೊದಲಾಗಿತ್ತು. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ 2002ರ ವೇಳೆಗೆ ನಕ್ಸಲರ ಚಟುವಟಿಕೆ ಕಾಣಿಸಿಕೊಂಡಿದ್ದರೂ ನಿರಂತರ ಪೊಲೀಸ್ ಕಾರ್ಯಾಚರಣೆಯಿಂದಾಗಿ ನಕ್ಸಲ್ ವಾದಕ್ಕೆ ಹಿನ್ನಡೆಯಾಗಿತ್ತು. ಕಾರ್ಕಳ ಭಾಗದಲ್ಲಿ ಏಂಟಿ ನಕ್ಸಲ್ ಫೋರ್ಸ್ ವಿಭಾಗವನ್ನೇ ತೆರೆದು ನಿರಂತರ ಕೂಂಬಿಂಗ್ ವ್ಯವಸ್ಥೆ ಮಾಡಲಾಗಿತ್ತು.
2011ರ ಬಳಿಕ ಬಹುತೇಕ ನಕ್ಸಲರ ಚಲನವಲನ ಮಾಯವಾಗಿದ್ದು, ಹತ್ತು ವರ್ಷಗಳ ಬಳಿಕ ಪಶ್ಚಿಮ ಘಟ್ಟದಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. 2024ರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು, ಆಬಳಿಕ ಸುಬ್ರಹ್ಮಣ್ಯ ಬಳಿಯ ಐನೆಕಿದು, ಕೂಜಿಮಲೆ ಭಾಗದಲ್ಲಿ ನಕ್ಸಲರು ಬಂದು ದಿನಸಿ ಸಾಮಗ್ರಿಗಳನ್ನು ಪಡೆದು ಹೋಗಿದ್ದರು ಎನ್ನುವ ವದಂತಿ ಹರಡಿತ್ತು. ಒಬ್ಬರು ಮಹಿಳೆ ಮತ್ತು ನಾಲ್ವರು ಪುರುಷರಿದ್ದ ತಂಡವು ಆನಂತರ ಪ್ರತ್ಯಕ್ಷ ಆಗಿರಲಿಲ್ಲ. ಅತ್ತ ಕೇರಳ ಭಾಗದಲ್ಲಿಯೂ ನಕ್ಸಲ್ ವಿರೋಧಿ ಕಾರ್ಯಾಚರಣೆ ಚುರುಕಾಗಿದ್ದರಿಂದ ಆ ಕಡೆಯಿಂದ ಬಂದವರು ಎನ್ನಲಾಗಿತ್ತು, ಆದರೆ ಅದಾಗಿ ಏಳೆಂಟು ತಿಂಗಳ ಬಳಿಕ ಹಿಂದೊಮ್ಮೆ ನಕ್ಸಲ್ ಪೀಡಿತ ಗ್ರಾಮವಾಗಿದ್ದ ಈದುವಿನಲ್ಲಿ ಮತ್ತೆ ನಕ್ಸಲರು ಪತ್ತೆಯಾಗಿರುವುದು ಪರಿಸರದ ಜನರಲ್ಲಿ ಭೀತಿ ಮೂಡಿಸಿದೆ.
Suspected Naxals have once again been spotted in Eedu village of Karkala taluk sending panic among locals. It is learnt a group of four armed youth were spotted near a colony in the village on Monday. Locals who had been to the adjacent forest to collect forest produce noticed the armed group.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
22-02-25 09:48 pm
HK News Desk
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
Kasargod News, Crime: ಉಕ್ಕಿನಡ್ಕ ; ಕೆರೆಗೆ ಬಿದ್...
22-02-25 01:31 pm
Donald Trump, Modi, India: ಭಾರತದಲ್ಲಿ ಮೋದಿಯನ್ನ...
21-02-25 01:23 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm