ಬ್ರೇಕಿಂಗ್ ನ್ಯೂಸ್
08-11-24 01:58 pm Bangalore Correspondent ಕರ್ನಾಟಕ
ಬೆಂಗಳೂರು, ನ.8: IIT/IIM/IISC /NIT ಯಂತಹ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ SC/ST ವಿದ್ಯಾರ್ಥಿಗಳ ಪ್ರೋತ್ಸಾಹ ಧನವನ್ನು 1 ರಿಂದ 2 ಲಕ್ಷಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು ಇದು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಹೆಚ್ಚಿನ ಶೈಕ್ಷಣಿಕ ಸಾಧನೆಗೆ ಕಾರಣವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ 95ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು, ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ದೊರಕದೇ ಮ್ಯಾನೇಜ್ ಮೆಂಟ್ ಕೋಟಾದಡಿ ಎಂಬಿಬಿಎಸ್ ಕೋರ್ಸ್ ಗೆ ಸೀಟು ಪಡೆದುಕೊಂಡ ಪರಿಶಿಷ್ಟ ಜಾತಿಯ ಮಕ್ಕಳಿಗೆ 25 ಲಕ್ಷ ರೂಪಾಯಿಗಳ ಶುಲ್ಕ ಧನವನ್ನು ಒದಗಿಸಲು ಸರ್ಕಾರ ತೀರ್ಮಾನಿಸಿದೆ.
ಎಂಬಿಬಿಎಸ್ ಪದವಿಯನ್ನು ಪಡೆಯುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೊದಲ ವರ್ಷ 60% ಗೂ ಹೆಚ್ಚಿನ ಅಂಕಗಗಳನ್ನು ಪಡೆದು ಉತ್ತೀರ್ಣ ರಾದರೆ ಅವರಿಗೆ ಅವರಿಗೆ ಮತ್ತೆ 25 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಶಿಕ್ಷಣವೇ ಸಮಾಜವನ್ನು ಬದಲಿಸುವ ಕೀಲಿಕೈ ಎಂಬ ಅಂಶವನ್ನು ಮನಗಂಡು ಈ ಒಂದು ಮಹತ್ವದ ಘೋಷಣೆಯನ್ನು ಸರ್ಕಾರವು ಮಾಡಿದ್ದು, ಇದರಿಂದ ಉನ್ನತ ಶಿಕ್ಷಣ ಮಾಡಬೇಕೆಂಬ ವಿದ್ಯಾರ್ಥಿಗಳ ಕನಸ್ಸು ನನಸಾಗಲಿದೆ.
ಇನ್ನು ಬಡತನದ ಬೇಗೆಗೆ ಸಿಲುಕಿ ಎಂಬಿಬಿಎಸ್ ಓದುವ ಬಯಕೆ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟು ಸಿಗದೇ ಅವರು ಖಾಸಗೀ ಸಂಸ್ಥೆಗಳಲ್ಲಿ ಓದುತ್ತಿದ್ದರೆ, ಅಂತಹ ಪ್ರತಿಭಾವಂತ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಲಿದ್ದು, ಇದಕ್ಕಾಗಿ ಆರಂಭಿಕವಾಗಿ 25 ಲಕ್ಷ ರೂಪಾಯಿಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Increase in incentive fund for SC ST children studying in national educational institutions from 1 to 2 lakhs Minister HC Mahadevappa.
08-11-24 01:58 pm
Bangalore Correspondent
ಜಂಟಿ ಸದನ ಸಮಿತಿ ಭೇಟಿ ಬೆನ್ನಲ್ಲೇ ರಾಜ್ಯ ಸರ್ಕಾರ ಎಲ...
07-11-24 06:49 pm
Waqf bill, Hubballi, Farmers: ವಕ್ಫ್ ವಿವಾದಕ್ಕೆ...
07-11-24 06:17 pm
Karkala, Naxals: ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್...
07-11-24 04:24 pm
Salman Khan, Haveri arrest, Death threat: ನಟ...
06-11-24 10:51 pm
06-11-24 03:35 pm
HK News Desk
ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನೇ ತನ್ನದೆಂದ ವಕ್ಫ್...
05-11-24 03:30 pm
Edneer Math Swamiji, Attack, Kasaragod: ಎಡನೀರ...
05-11-24 11:41 am
ಹೊಟ್ಟೆ ನೋವೆಂದು ಬಂದಿದ್ದ 15 ವರ್ಷದ ಬಾಲಕನ ಹೊಟ್ಟೆಯ...
04-11-24 03:28 pm
ನೀಲೇಶ್ವರ ಕಳಿಯಾಟ ಉತ್ಸವದಲ್ಲಿ ಸುಡುಮದ್ದು ಸ್ಫೋಟ ;...
04-11-24 12:55 pm
07-11-24 11:06 pm
Mangalore Correspondent
Mangalore Padil Road, Impact: ಗುಂಡಿ ಬಿದ್ದ ಪಡೀ...
07-11-24 10:30 pm
Mangalore Marathon, Road Diversion: ನ.10ರಂದು...
07-11-24 07:46 pm
Ivan Dsouza Congress, Mangalore: ಮುಖ್ಯಮಂತ್ರಿ...
07-11-24 07:41 pm
Mangalore Ullal Press club, Deepavali: ಉಳ್ಳಾಲ...
07-11-24 07:27 pm
08-11-24 02:00 pm
Mangalore Correspondent
Hassan Murder, Police constable, crime: ಹಾಸನ...
06-11-24 09:11 pm
Bangalore crime, Jayadeva Hospital: ಪ್ರತಿಷ್ಠಿ...
06-11-24 11:50 am
Lakshmi Hebbalkar, Somu, Belagavi Suicide; ಸಚ...
05-11-24 10:22 pm
Hassan Murder, police constable: ಹಾಸನ ; ಹಸೆಮಣ...
05-11-24 05:05 pm