Zammer Vs HD Kumaraswamy: ಕರಿಯಣ್ಣ ಹೇಳಿಕೆಯಿಂದ ತೀವ್ರ ವಿವಾದಕ್ಕೀಡಾದ ಜಮೀರ ; ‘ಒಳ ಚಡ್ಡಿ’ ಕಹಾನಿ ಬಿಚ್ಚಿಟ್ಟ ಡೀಕೆ, ಸ್ವಪಕ್ಷೀಯರಿಂದಲೇ ಟೀಕೆ, ಬುಡಕ್ಕೆ ಬೆಂಕಿ ಬೀಳುತ್ತಲೇ ತಣ್ಣಗಾದ ಸಚಿವ

12-11-24 09:53 pm       HK News Desk   ಕರ್ನಾಟಕ

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಬಗ್ಗೆ ಆಡಿರುವ ವಿವಾದಾತ್ಮಕ ಮಾತು ತೀವ್ರ ಟೀಕೆಗೆ ಗುರಿಯಾಗಿದೆ. ಕುಮಾರಸ್ವಾಮಿ ಅವರನ್ನು ಕರಿಯ ಎಂದು ಅವಹೇಳನಕಾರಿ ಮಾತನ್ನಾಡಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದೆ.

ರಾಮನಗರ, ನ 12 : ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಬಗ್ಗೆ ಆಡಿರುವ ವಿವಾದಾತ್ಮಕ ಮಾತು ತೀವ್ರ ಟೀಕೆಗೆ ಗುರಿಯಾಗಿದೆ. ಕುಮಾರಸ್ವಾಮಿ ಅವರನ್ನು ಕರಿಯ ಎಂದು ಅವಹೇಳನಕಾರಿ ಮಾತನ್ನಾಡಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದೆ.

ಭಾನುವಾರ ಕಾರ್ಯಕರ್ತರ ಸಭೆಯಲ್ಲಿ ವಾಗ್ದಾಳಿ ನಡೆಸುವ ಭರದಲ್ಲಿ "ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್ ಎಂದು ಉರ್ದುವಿನಲ್ಲಿ ಜಮೀರ್ ಹೇಳಿದ್ದರು. ಯೋಗೀಶ್ವರ್ ಕೂಡ ಜೆಡಿಎಸ್ ಹೋಗಬೇಕು ಅಂತ ಅಂದುಕೊಂಡಿದ್ದರು. ಆದರೆ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ‌ ಜೆಡಿಎಸ್ಗೆ ಹೋಗಿಲ್ಲ ಎಂದು ಹೇಳಿದ್ದರು. ಈ ಹಿಂದೆ ಹಿಜಾಬ್ ಬೇಡ ಅಂದಿದ್ದರು ಕುಮಾರಸ್ವಾಮಿ. ಈಗ ನಿನಗೆ ಮುಸಲ್ಮಾನರ ಮತ ಬೇಕಾ? ಕುಮಾರಸ್ವಾಮಿ ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡ್ತಾನಂತೆ. ಏ ಕುಮಾರಸ್ವಾಮಿ ನಿನ್ನ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತಾರೆ ಎಂದು ಜಮೀರ್‌ ಕುಮಾರಸ್ವಾಮಿ ವ್ಯಂಗ್ಯವಾಗಿ ಮಾತನಾಡಿದ್ದರು.

ಕಂಪ್ಲೇಂಟ್ ಕೊಡೋಕೆ ಹೇಳಿ..  

ಜಮೀರ್ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಹಾಗೂ ಜಮೀರ್ ಅವರದ್ದು ಗಳಸ್ಯ ಕಂಠಸ್ಯ ಸಂಬಂಧ. ಅವರ ಚಡ್ಡಿ ಒಳಗಡೆ ಏನಿದೆ ಅಂತ ಇವರು ಹೇಳ್ತಾರೆ. ಇವರ ಬಗ್ಗೆ ಅವರು ಹೇಳ್ತಾರೆ, ಅವೆಲ್ಲ ಅವರೊಳಗಿನ ವಿಚಾರ. ಕರಿಯಾ ಅಂತ ಹೇಳಿದ್ದಕ್ಕೆ ಕಂಪ್ಲೆಂಟ್ ಕೋಡೋಕೆ ಹೇಳಿ, ನಾನೇನೂ ಡಿಫೆಂಡ್ ಮಾಡ್ತಾ ಇಲ್ಲಾ, ಅದು ಅವರಿಬ್ಬರ ವಿಚಾರವಾಗಿದ್ದು, ಇಂಟರ್‌ಫೀಯರ್ ಆಗಲ್ಲ ಎಂದರು.

ಕ್ಷಮೆ ಕೇಳಲು ಸಿದ್ಧ ಎಂದ ಜಮೀರ್

ತನ್ನ ಹೇಳಿಕೆ ಬಗ್ಗೆ ಸ್ವಪಕ್ಷೀಯರಿಂಲೇ ಟೀಕೆ ಕೇಳಿಬರುತ್ತಲೇ ಜಮೀರ್ ತಣ್ಣಗಾಗಿದ್ದು, ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ ಎನ್ನುವ ಮೂಲಕ ವಿವಾದಕ್ಕೆ ತೆರೆಯೆಳೆಯಲು ಯತ್ನಿಸಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಜೊತೆಯಲ್ಲಿದ್ದಾಗ, ಅವರು ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ. ಪ್ರೀತಿಯಿಂದಲೇ ಹೇಳಿಕೊಳ್ಳುತ್ತಿದ್ದೆವು. ಅವರ ಮೇಲೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದು ತೇಪೆ ಹಚ್ಚುವ ಯತ್ನ ಮಾಡಿದ್ದಾರೆ.

ಜಮೀರ್ ಮಾತಿನಿಂದ ಕೆರಳಿರುವ ಜೆಡಿಎಸ್, ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ತನ್ನ ಟ್ವಿಟರ್ ಖಾತೆ ಮೂಲಕ ಜಮೀರ್ ವಿರುದ್ಧ ಸರಣಿ ಟೀಕೆ ಮಾಡಿದೆ. ವರ್ಣ ನಿಂದನೆ ಕಾಂಗ್ರೆಸ್ ನಾಯಕತ್ವದ ಕಲ್ಪನೆಯೇ? ಜಮೀರ್ ಅಹ್ಮದ್ ಖಾನ್ ರಾಷ್ಟ್ರ ಮಟ್ಟದ ನಾಯಕ ಕುಮಾರಸ್ವಾಮಿ ಅವರನ್ನು ಚರ್ಮದ ಬಣ್ಣದಿಂದ ನಿಂದಿಸುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ಸಿಗರು ಮಾತ್ರ ಮೌನ ವಹಿಸಿದ್ದಾರೆ. ದೇಶದಲ್ಲಿ ಸಮಾನತೆ, ತಾರತಮ್ಯ ಬಗ್ಗೆ ಗಂಟಲು ಹರಿಯುವಂತೆ ಪಾಠ ಮಾಡುವ ಕಾಂಗ್ರೆಸ್‌ ನಾಯಕರು ಈಗ ಯಾಕೆ ತುಟಿ ಬಿಚ್ಚುತ್ತಿಲ್ಲ? ಎಂದು ಪ್ರಶ್ನಿಸಿದೆ.

After coming under attack from NDA partners BJP and JD(S) for his remarks on the colour of the skin of Union Minister for Major Industries and Steel and former CM H. D. Kumaraswamy, Karnataka’s Minister for Housing, Wakf and Minority Welfare B. Z. Zameer Ahmed Khan apologised for his comments.