ಬ್ರೇಕಿಂಗ್ ನ್ಯೂಸ್
12-11-24 10:31 pm HK News Desk ಕರ್ನಾಟಕ
ಕಾರವಾರ, ನ.12: ಕಾರವಾರ ನಗರದಲ್ಲಿ ಪತ್ತೆಯಾದ ದೊಡ್ಡ ಜಾತಿಯ ರಣಹದ್ದು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿತ್ತು. ಹದ್ದಿನ ಕಾಲಿನಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಹೊಂದಿದ್ದನ್ನು ನೋಡಿದ ಸ್ಥಳೀಯರು ಗಾಬರಿಗೀಡಾಗಿದ್ದರು. ಭದ್ರತಾ ಸಿಬಂದಿಗೂ ಆತಂಕ ಎದುರಾಗಿತ್ತು.
ಕಳೆದ ಮೂರು ದಿನಗಳಿಂದ ಕಾರವಾರದ ಕೋಡಿಭಾಗ ಬಳಿಯ ನದಿ ಆಸುಪಾಸಿನಲ್ಲಿ ಹದ್ದಿನ ಹಾರಾಟ ಗಮನಿಸಿದ ಜನ, ಗೂಢಚಾರಿಕೆ ನಡೆಸಲು ಶತ್ರುಗಳು ಹದ್ದಿನಲ್ಲಿ ಕ್ಯಾಮರಾ ಅಳವಡಿಸಿ ಹಾರಲು ಬಿಟ್ಟಿದ್ದಾರೆ ಎಂಬ ಅನುಮಾನ ಪಟ್ಟಿದ್ದರು. ಹದ್ದಿನ ಕಾಲಿಗೆ ಇಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗಿತ್ತು. ಎರಡೂ ಕಾಲುಗಳಿಗೆ ಬಿಳಿ ಬಣ್ಣದ ಸ್ಟಿಕ್ಕರ್ ಹಾಕಲಾಗಿತ್ತು. ಪಕ್ಷಿಯ ಬೆನ್ನಿನಲ್ಲಿ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಕಂಡುಬಂದಿತ್ತು. ಇದೆಲ್ಲ ನೋಡಿದ ಜನರಿಗೆ ಅನುಮಾನ ಬಂದಿತ್ತು. ಕೈಗಾ ಅಣು ವಿದ್ಯುತ್ ಸ್ಥಾವರ, ಕದಂಬ ನೌಕಾನೆಲೆ ಇರುವುದರಿಂದ ರಹಸ್ಯ ಕಾರ್ಯಾಚರಣೆ ಬಗ್ಗೆ ಅನುಮಾನ ಮೂಡಿತ್ತು. ವಿಚಾರ ತಿಳಿಯುತ್ತಿದ್ದಂತೆ ಪಕ್ಷಿಯ ಮೇಲೆ ಅಧಿಕಾರಿಗಳು ತನಿಖೆ ನಡೆಸಿ ಅಸಲಿ ಸತ್ಯವನ್ನು ಹೊರ ತೆಗೆದಿದ್ದಾರೆ.
ಅರಣ್ಯ ಇಲಾಖೆಯವರೊಂದಿಗೆ ಸ್ಥಳಕ್ಕೆ ಹೋಗಿ ಬೈನಾಕ್ಯುಲರ್ ಮತ್ತು ಫೋಟೋಗ್ರಫಿ ಮೂಲಕ ಹದ್ದನ್ನು ಪರಿಶೀಲಿಸಲಾಗಿದೆ. ಹದ್ದಿಗೆ ಒಂದು ಲೇಬಲ್ ಅಂಟಿಸಲಾಗಿದ್ದು ಅದರಲ್ಲಿ ಇಂಗ್ಲಿಷನಲ್ಲಿ ‘If Found please contact ccffdtadobaz@mahaforest.gov.in OT10-4G s/n:245671 5033 2 ಎಂದು ಬರೆದಿರುತ್ತದೆ. ಇದು Himalayan Griffon Vulture ಜಾತಿಯ ದೊಡ್ಡ ರಣಹದ್ದಾಗಿದೆ. ಅಳಿವಿನ ಅಂಚಿನಲ್ಲಿರುವ ವಲಸೆ ಹಕ್ಕಿ. ಮಹಾರಾಷ್ಟ್ರ ಅರಣ್ಯ ಇಲಾಖೆಯವರು ರಕ್ಷಿಸಿ ಪೋಷಿಸುತ್ತಿದ್ದು ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದು ಪ್ರತಿ ವರ್ಷ ಇದು ಎಲ್ಲೆಲ್ಲಿ ವಲಸೆ ಹೋಗುತ್ತದೆ ಎಂದು ಅಧ್ಯಯನ ಮಾಡಲು ಜಿಪಿಎಸ್ ಅಳವಡಿಸಿರುತ್ತಾರೆ.
ರಣಹದ್ದು ಯಾವುದೇ ರೀತಿಯ ಗೂಢಚರ್ಯಕ್ಕೆ ಅಥವಾ ಇನ್ಯಾವುದೇ ಕುಕೃತ್ಯ ಕೆಲಸಕ್ಕೆ ಬಳಸಿದ್ದು ಅಲ್ಲ. ರಣಹದ್ದಿನ ಮೇಲೆ ಅರಣ್ಯ ಇಲಾಖೆಯವರು ನಿಗಾ ವಹಿಸಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಕಾರವಾರ ಪೊಲೀಸ್ ಇಲಾಖೆ ವಿನಂತಿಸಿದೆ.
Karwar, Uttara Kannada dist: An electronic device, attached to the back of a White-rumped vulture, created curiosity and concerns alike among the people at Nadivada near Kodibagh here.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
22-02-25 09:48 pm
HK News Desk
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
Kasargod News, Crime: ಉಕ್ಕಿನಡ್ಕ ; ಕೆರೆಗೆ ಬಿದ್...
22-02-25 01:31 pm
Donald Trump, Modi, India: ಭಾರತದಲ್ಲಿ ಮೋದಿಯನ್ನ...
21-02-25 01:23 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm