ಕೋವಿಡ್ ಅಕ್ರಮ ತನಿಖೆಗೆ ಎಸ್ಐಟಿ ; ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಎಫ್ಐಆರ್ ದಾಖಲಿಸಲು ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯಗೆ ಸಚಿವರ ಒತ್ತಡ, ಬಿಜೆಪಿ ಕಟ್ಟಿ ಹಾಕಲು ಪ್ರತಿತಂತ್ರ 

15-11-24 03:12 pm       Bangalore Correspondent   ಕರ್ನಾಟಕ

ಕೋವಿಡ್‌ ಅಕ್ರಮ ಕುರಿತಾಗಿ ನಿವೃತ್ತ ನ್ಯಾ| ಮೈಕಲ್‌ ಡಿ’ಕುನ್ಹಾ ಮ ನೀಡಿರುವ ಮಧ್ಯಂತರ ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ವಿರುದ್ಧ  ಎಫ್ಐಆರ್‌ ದಾಖಲಿಸುವಂತೆ ರಾಜ್ಯದ ಹಿರಿಯ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ.

ಬೆಂಗಳೂರು, ನ.15: ಕೋವಿಡ್‌ ಅಕ್ರಮ ಕುರಿತಾಗಿ ನಿವೃತ್ತ ನ್ಯಾ| ಮೈಕಲ್‌ ಡಿ’ಕುನ್ಹಾ ಮ ನೀಡಿರುವ ಮಧ್ಯಂತರ ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ವಿರುದ್ಧ  ಎಫ್ಐಆರ್‌ ದಾಖಲಿಸುವಂತೆ ರಾಜ್ಯದ ಹಿರಿಯ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು ಬಿಜೆಪಿ ನಾಯಕರನ್ನು ಕಟ್ಟಿ ಹಾಕಲು ತಂತ್ರ ಹೆಣೆದಿದ್ದಾರೆ. 

ಕಾಂಗ್ರೆಸ್‌ ಸರಕಾರದ ವಿರುದ್ಧ ಸರಣಿ ಆರೋಪ ಮಾಡುತ್ತಿರುವ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕೋವಿಡ್ ಅಕ್ರಮವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ವಿರುದ್ಧ ಎಫ್ಐಆರ್‌ ದಾಖಲಿಸಿ ಎಸ್‌ಐಟಿ ತನಿಖೆ ನಡೆಸಿದರೆ ಬಿಜೆಪಿ ಕೇಂದ್ರ ನಾಯಕರನ್ನೇ ಮುಜುಗರಕ್ಕೆ ಸಿಲುಕಿಸಬಹುದೆಂಬ ತಂತ್ರಗಾರಿಕೆ ನಡೆದಿದೆ.‌ 

Covid scam: Panel has recommended prosecution of Yediyurappa, Sriramulu,  says K'taka minister

ವಿಜಯೇಂದ್ರ, ಅಶೋಕ ಜೋಡೆತ್ತು; ಆದರೆ ಕಳ್ಳೆತ್ತುಗಳೂ ಇವೆ!: ಶ್ರೀರಾಮುಲು  ವ್ಯಂಗ್ಯವಾಡಿದ್ದು ಯಾರನ್ನು? - b sriramulu mocks siddaramaiah and dk shivakumar  indireclty as thief bulls - Vijay Karnataka

ಬಿಜೆಪಿ ನಾಯಕರ ಟೀಕೆಗೆ ಹೆಚ್ಚಿನ ಅವಕಾಶ ನೀಡುವುದು ಬೇಡ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ವರದಿಯಲ್ಲಿ ಯಾವುದೇ ವ್ಯಕ್ತಿ, ಖಾಸಗಿ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆ ಹಾಗೂ ಟಾಸ್ಕ್ ಫೋರ್ಸ್ ನಿಂದ ಅಕ್ರಮಕ್ಕೆ ದಾರಿಯಾಗಿದ್ದರೂ ರಿಯಾಯಿತಿ ನೀಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ವಿರುದ್ಧವೂ ಎಫ್ಐಆರ್‌ ದಾಖಲಿಸಿ ತನಿಖೆ ನಡೆಸಬೇಕೆಂದು ಕೆಲ ಸಚಿವರು ಆಗ್ರಹಿಸಿದ್ದಾರೆ. ಹೀಗಾಗಿ ಸಚಿವ ಸಂಪುಟ ಉಪ ಸಮಿತಿಯ ಅಭಿಪ್ರಾಯವನ್ನೂ ಆಧರಿಸಿ ಎಸ್‌ಐಟಿ ರಚನೆಗೆ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ. 

ಹಿಂದಿನ ಬಿಜೆಪಿ ಸರಕಾರ ಕೋವಿಡ್‌ ಅವಧಿಯಲ್ಲಿ ಆಗಿರುವ ಸಾವಿನ ಸಂಖ್ಯೆಯನ್ನೂ ಮುಚ್ಚಿಟ್ಟು ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ರವಾನಿಸಿತ್ತು ಎಂಬ ವಿಚಾರವೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಒಳಗಾಗಿದೆ. ಕೇಂದ್ರ ಸ್ವಾಮ್ಯಕ್ಕೆ ಒಳಪಟ್ಟ ರಾಷ್ಟ್ರೀಯ ಸಂಸ್ಥೆಗಳ ವರದಿ ಆಧರಿಸಿ ರಾಜ್ಯದಲ್ಲಿ ಸುಮಾರು 4.20 ಲಕ್ಷ ಜನರು ಕೋವಿಡ್‌ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆಗಿನ ಸರಕಾರ ಕೇವಲ 30 ಸಾವಿರ ಸಾವನ್ನು ಮಾತ್ರ ನಮೂದಿಸಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಸಚಿವರು ಪ್ರಸ್ತಾವಿಸಿದ್ದಾರೆ.

Karnataka’ cabinet decided on Thursday to set up a Special Investigation Team to inquire into a Covid procurement scam that took place during BJP rule, following a commission’s interim report recommending action, including against former chief minister B S Yediyurappa, over irregularities that occurred during the pandemic.