Liquor Bandh, Mangalore: ನ.20ರ ಮದ್ಯ ವ್ಯಾಪಾರ ಬಂದ್ ಮುಂದಕ್ಕೆ, ಸಿಎಂ ಭರವಸೆ ಹಿನ್ನೆಲೆ ತಣ್ಣಗಾದ ವ್ಯಾಪಾರಸ್ಥರು          

19-11-24 11:05 pm       Bangalore Correspondent   ಕರ್ನಾಟಕ

ಅಬಕಾರಿ ಇಲಾಖೆಯ ಭ್ರಷ್ಟಾಚಾರ, ಲಂಚಕೋರ ಸಚಿವನ ವಿರುದ್ಧ ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಿ ಮುಷ್ಕರ ಮಾಡುವುದಾಗಿ ಮದ್ಯ ಮಾರಾಟಗಾರರ ಸಂಘ ಕರೆ ನೀಡಿತ್ತು. ಮಂಗಳವಾರ ತುರ್ತಾಗಿ ಮುಖ್ಯಮಂತ್ರಿಯವರು ಸಭೆ ಕರೆದು ಮಾತನಾಡಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಬೆಂಗಳೂರು, ನ.19: ಅಬಕಾರಿ ಇಲಾಖೆಯ ಭ್ರಷ್ಟಾಚಾರ, ಲಂಚಕೋರ ಸಚಿವನ ವಿರುದ್ಧ ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಿ ಮುಷ್ಕರ ಮಾಡುವುದಾಗಿ ಮದ್ಯ ಮಾರಾಟಗಾರರ ಸಂಘ ಕರೆ ನೀಡಿತ್ತು. ಮಂಗಳವಾರ ತುರ್ತಾಗಿ ಮುಖ್ಯಮಂತ್ರಿಯವರು ಸಭೆ ಕರೆದು ಮಾತನಾಡಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮದ್ಯ ಮಾರಾಟ ಬಂದ್ ಮಾಡುವ ನಿರ್ಧಾರವನ್ನು ಮುಂದೂಡಿರುವುದಾಗಿ ಸಂಘದ ಪದಾಧಿಕಾರಿಗಳು ಪ್ರಕಟಿಸಿದ್ದಾರೆ.

ಇತ್ತೀಚೆಗೆ ಮದ್ಯ ಮಾರಾಟ ಸಂಘದ ಪ್ರತಿನಿಧಿಗಳು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ವಿರುದ್ಧ ಭಾರೀ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದರು. ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳನ್ನು ಪೋಸ್ಟಿಂಗ್ ಮಾಡುವುದಕ್ಕೂ ದೊಡ್ಡ ಮೊತ್ತದ ಲಂಚ ಪಡೆಯುತ್ತಿದ್ದಾರೆಂದು ಆರೋಪ ಕೇಳಿಬಂದಿತ್ತು. ಪ್ರತಿ ತಿಂಗಳು ಲಂಚ ಪಡೆಯುವ ವಿಚಾರವೂ ಚರ್ಚೆಯಾಗಿತ್ತು. ಇದನ್ನು ಖಂಡಿಸಿ ಮದ್ಯ ವ್ಯಾಪಾರಸ್ಥರು ಒಂದು ದಿನ ಮುಷ್ಕರ ಹೂಡುವ ಬೆದರಿಕೆ ಹಾಕಿದ್ದರು.

ಇದರಿಂದ ತೀವ್ರ ಕಸಿವಿಸಿಯಾಗಿದ್ದ ಕಾಂಗ್ರೆಸ್ ಸರ್ಕಾರವು ಮದ್ಯ ಮಾರಾಟ ಸಂಘದ ಪದಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದರು. ಬೆಂಗಳೂರಿನ ಮದ್ಯ ವ್ಯಾಪಾರಸ್ಥರು ಬಂದ್ ಮಾಡುವುದಿಲ್ಲ ಎಂದಿದ್ದರೂ ರಾಜ್ಯ ಪ್ರತಿನಿಧಿಗಳು ಬಂದ್ ಗೆ ಕರೆ ನೀಡಿದ್ದರು. ಇದೀಗ ಸಿಎಂ ಭರವಸೆ ಹಿನ್ನೆಲೆಯಲ್ಲಿ ಬಂದ್ ಕರೆಯನ್ನು ಮುಂದೂಡಿಕೆ ಮಾಡಿದ್ದಾರೆ.

November 20th Liquor Trade Bandh postpone after CMs Promise in Mangalore.