ಬ್ರೇಕಿಂಗ್ ನ್ಯೂಸ್
25-11-24 03:28 pm Bangalore Correspondent ಕರ್ನಾಟಕ
ಬೆಂಗಳೂರು, ನ.24: ರಾಜ್ಯ ಬಿಜೆಪಿ ಒಡೆದ ಮನೆಯಾಗಿದ್ದು, ಒಳಜಗಳದಲ್ಲೇ ಕಾಲ ಕಳೆಯುತ್ತಿರುವ ಕೇಸರಿ ನಾಯಕರಿಗೆ ಉಪ ಚುನಾವಣೆ ಫಲಿತಾಂಶ ಶಾಕ್ ನೀಡಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಟೀಮ್ ಒಂದು ಕಡೆಯಾದರೆ, ರೆಬಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ತನ್ನದೇ ಪ್ರತ್ಯೇಕ ತಂಡವನ್ನು ಕಟ್ಟಿಕೊಂಡು ರಾಜ್ಯ ಬಿಜೆಪಿಯನ್ನು ಬೇತಾಳನಂತೆ ಕಾಡತೊಡಗಿರುವುದು, ಇದನ್ನೆಲ್ಲ ನೋಡಿಯೂ ನೋಡದಂತೆ ಇರುವ ಹೈ ನಾಯಕರ ನಡೆಗೂ ಮತದಾರ ಶಾಕ್ ನೀಡಿದ್ದಾನೆ. ಈ ಫಲಿತಾಂಶ ಪಕ್ಷವನ್ನು ಗೆಲ್ಲಿಸುವುದಕ್ಕಿಂತ ಸೋಲಿಸುವುದಕ್ಕೇ ಹೆಚ್ಚು ಆದ್ಯತೆ ಕೊಟ್ಟಿದ್ದರು ಅನ್ನುವ ಸಂದೇಶವನ್ನಂತೂ ನೀಡಿದಂತಾಗಿದೆ.
ಸಂಡೂರು, ಚನ್ನಪಟ್ಟಣ ಅಲ್ಲದಿದದ್ದರೂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಶಿಗ್ಗಾಂವಿ ಕ್ಷೇತ್ರವನ್ನು ಬಿಜೆಪಿ ಗೆಲ್ಲಲೇಬೇಕಿತ್ತು. ಪುತ್ರ ಭರತ್ ಬೊಮ್ಮಾಯಿ ಕಾರಣಕ್ಕೆ ಬಿಜೆಪಿ ಸೋತಿದ್ದಂತೂ ಅಲ್ಲ. ಅಲ್ಲಿ ಲಿಂಗಾಯತರೇ ಪ್ರಮುಖ ಮತ ಬ್ಯಾಂಕ್ ಆಗಿರುವುದರಿಂದ ಬೊಮ್ಮಾಯಿ ಕುಟುಂಬಕ್ಕೆ ಶಾಕ್ ಟ್ರೀಟ್ಮೆಂಟ್ ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ. ಬೇರೆ ಸಮರ್ಥ ಅಭ್ಯರ್ಥಿ ಇಲ್ಲದೇ ಇದ್ದ ಕಾರಣ ಬೊಮ್ಮಾಯಿ ಪುತ್ರನಿಗೇ ಹೈಕಮಾಂಡ್ ಟಿಕೆಟ್ ನೀಡಿತ್ತು. ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಆಗಿದ್ದರೂ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಷ್ಟು ಶಕ್ತವಾಗಿರಲಿಲ್ಲ. ಹಾಗಿರುತ್ತಿದ್ದರೆ, ಕಳೆದ ಬಾರಿಯೇ ಬಸವರಾಜ ಬೊಮ್ಮಾಯಿ ಸೋಲಬೇಕಿತ್ತು. ಹಾವೇರಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೂ, ಬೊಮ್ಮಾಯಿ ಮಾತ್ರ ಗೆದ್ದಿದ್ದರು.


ಈ ಬಾರಿ ಬಿಜೆಪಿಯದ್ದೇ ಮತಬ್ಯಾಂಕ್ ಎನಿಸಿಕೊಂಡಿದ್ದ ಅತೃಪ್ತ ಬಣದ ಯತ್ನಾಳ್ ಪ್ರತಿನಿಧಿಸುವ ಪಂಚಮಸಾಲಿ ಲಿಂಗಾಯತರು ಮತ್ತು ರಮೇಶ್ ಜಾರಕಿಹೊಳಿ ಅವರ ವಾಲ್ಮೀಕಿ ಜನಾಂಗದ ಮತಗಳು ಚದುರಿದ್ದೂ ಬಿಜೆಪಿ ಸೋಲಿನಲ್ಲಿ ಕಾಣಿಕೆ ಕೊಟ್ಟಿದೆ. ಮುಸ್ಲಿಂ ಅಭ್ಯರ್ಥಿಯಾಗಿದ್ದರಿಂದ ಸಮುದಾಯದ ಮತಗಳು ಪೂರ್ತಿಯಾಗಿ ಕಾಂಗ್ರೆಸಿನತ್ತ ಕ್ರೋಢೀಕರಿಸಿದ್ದು, ಇತರೇ ಹಿಂದುಳಿದ ಮತಗಳೂ ಕಾಂಗ್ರೆಸಿನತ್ತ ವಾಲಿದ್ದು ಬಿಜೆಪಿ ಗೆಲುವನ್ನು ಕಸಿದಿದೆ. ಸಚಿವ ಸತೀಶ್ ಜಾರಕಿಹೊಳಿ ದಲಿತ ಮತ್ತು ವಾಲ್ಮೀಕಿ ಜನಾಂಗದ ಮತಗಳನ್ನು ಕಾಂಗ್ರೆಸಿನತ್ತ ಸೆಳೆಯಲು ವರ್ಕೌಟ್ ಮಾಡಿದ್ದಾರೆ. ಕ್ಷೇತ್ರದಲ್ಲಿ 30 ಸಾವಿರದಷ್ಟು ಪಂಚಮಸಾಲಿ, 20 ಸಾವಿರ ವಾಲ್ಮೀಕಿ ಜನಾಂಗದ ಮತಗಳಿವೆ. ಎಲ್ಲಿ ಬಿಜೆಪಿ ಮತಬ್ಯಾಂಕ್ ಇತ್ತೋ ಅಲ್ಲಿಗೆ ನೇರ ಬಿಲ ತೋರಿದ್ದಾರೆ. ಈ ರೀತಿ ಕನ್ನ ಹಾಕುತ್ತಿರುವುದನ್ನು ತಿಳಿಯದಷ್ಟು ದಡ್ಡರು ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದ ಬೊಮ್ಮಾಯಿ ಅವರಂತೂ ಅಲ್ಲ.


ಆದರೆ ಕೈ ಅಭ್ಯರ್ಥಿ ಬಗ್ಗೆ ಕಾಂಗ್ರೆಸಿನಲ್ಲಿ ಕಾಣಿಸಿಕೊಂಡಿದ್ದ ಬಹಿರಂಗ ಅಸಹನೆ, ಅಸಮಾಧಾನವನ್ನೇ ಬೊಮ್ಮಾಯಿ ಮತ್ತು ಜೊತೆಗಾರರು ರೊಟ್ಟಿ ತಮ್ಮ ಪ್ಲೇಟಿಗೆ ಬಿದ್ದಾಯ್ತು ಅನ್ನುವಷ್ಟು ಅತಿ ವಿಶ್ವಾಸ ಬೆಳೆಸಿಕೊಂಡು ಗೆಲುವಿನ ಲೆಕ್ಕ ಹಾಕಿದ್ದರು. ಮ್ಯಾಚ್ ಆಗೋ ಮೊದಲೇ ಕಾಂಗ್ರೆಸ್ ಸೋತು ಹೋಯ್ತು ಅನ್ನುವಷ್ಟು ಬಿಜೆಪಿ ನಾಯಕರು ಅತಿ ವಿಶ್ವಾಸ ಪಟ್ಟಿದ್ದೇ ಮುಳುವಾಗಿದೆ. ಯಾಸಿರ್ ಪಠಾಣ್ ರೌಡಿ ಶೀಟರ್ ಅನ್ನುವುದು, ಅಭ್ಯರ್ಥಿ ವಿರುದ್ಧ ಇಬ್ಬರು ಪ್ರಭಾವಿಗಳು ಬಂಡಾಯ ಸಾರಿದ್ದನ್ನೇ ತಮ್ಮ ಪಾಲಿಗೆ ಸುಲಭದ ತುತ್ತು ಅಂತ ಅನ್ಕೊಂಡಿದ್ದೇ ಬಿಜೆಪಿ ಕೈ ಸುಟ್ಟುಕೊಳ್ಳುವಂತೆ ಮಾಡಿದೆ. ಕಾಂಗ್ರೆಸಿನಲ್ಲಿ ಇಬ್ಬರಿಬ್ಬರು ಬಂಡಾಯ ಸಾರಿದರೂ, ಅವರನ್ನು ಸಮಾಧಾನಿಸಿ ಒಗ್ಗಟ್ಟು ತೋರಿದ್ದೇ ಯಶಸ್ಸಿನ ಗುಟ್ಟು. ಇವೆಲ್ಲದರ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಸೈಲಂಟ್ ಆಗಿಯೇ ಕೆಲಸ ಮಾಡಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಮೊದಲ ಬಾರಿ ಚುನಾವಣೆ ಎದುರಿಸಿದ್ದಾರೆ. ಹೀಗಾಗಿ ಪಕ್ಷದ ನಾಯಕರ ಒಳೇಟು, ಕಾಂಗ್ರೆಸಿಗರ ಲೆಕ್ಕಾಚಾರವನ್ನು ಅರಿಯುವುದರಲ್ಲಿ ಸೋತಿರಲೂಬಹುದು. ರಾಜ್ಯಾಧ್ಯಕ್ಷರಾಗಿ ಈ ಚುನಾವಣೆಯಲ್ಲಿ ಒಂದು ಸ್ಥಾನವನ್ನಾದರೂ ಗೆಲ್ಲಲೇಬೇಕಿತ್ತು. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರೂ, ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಒಂದನ್ನೂ ಗೆಲ್ಲಲಾಗಲಿಲ್ಲ ಎನ್ನುವುದು ರಾಜ್ಯ ಬಿಜೆಪಿಗೆ ಮೈನಸ್ ಪಾಯಿಂಟ್. ಕಾಂಗ್ರೆಸ್ ಪಾಲಿಗೆ ಈ ಫಲಿತಾಂಶದಿಂದ ಗಳಿಕೆಯೇನೂ ಇಲ್ಲ. ಆದರೆ, ಮೂಡಾ, ವಾಲ್ಮೀಕಿ ಹಗರಣದ ಕೊಳೆಯಲ್ಲಿ ಸೊರಗಿದ್ದ ರಾಜ್ಯ ಸರಕಾರಕ್ಕೆ ಜನಮತ ಇದೆಯೆಂಬ ಸಂದೇಶವನ್ನು ಈ ಫಲಿತಾಂಶ ರವಾನಿಸಿದೆ.
ಭ್ರಷ್ಟಾಚಾರದ ಕಳೆ ಏನಿದ್ದರೂ ಗ್ಯಾರಂಟಿ ಯೋಜನೆ ಎದುರಲ್ಲಿ ಕೊಚ್ಚಿ ಹೋಗಿರುವುದನ್ನೂ ಚುನಾವಣೆ ಫಲಿತಾಂಶ ತೋರಿಸಿದೆ. ಇದಕ್ಕಿಂತಲೂ ವಕ್ಫ್ ಹೆಸರಲ್ಲಿ ಎದ್ದಿದ್ದ ಗುಲ್ಲಿನ ವಿಚಾರವೂ ಬಿಜೆಪಿಗೆ ಮತವಾಗಿ ಪರಿವರ್ತನೆಯಾಗಿಲ್ಲ. ಮೂಡಾ, ವಾಲ್ಮೀಕಿ ಹಗರಣದ ಜೊತೆಗೆ ವಕ್ಫ್ ವಿವಾದವನ್ನೇ ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ವಿಜಯಪುರ, ಹುಬ್ಬಳ್ಳಿ, ಹಾವೇರಿಯಲ್ಲಿ ರೈತರಿಗೆ ನೋಟೀಸ್ ಕೊಟ್ಟಿದ್ದು, ಕಾಂಗ್ರೆಸ್ ಸರಕಾರಕ್ಕೆ ತೀವ್ರ ಹಿನ್ನಡೆಯಾಗುತ್ತೆ ಎಂದೇ ಭಾವಿಸಲಾಗಿತ್ತು. ಇದೇ ಕಾರಣಕ್ಕೆ ವಕ್ಫ್ ಹೊಳೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಯ್ತು ಅಂತಲೇ ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ ಬಿಜೆಪಿ ಪಾಲಿನ ಅಸ್ತ್ರವನ್ನೇ ಕಾಂಗ್ರೆಸ್ ನಾಯಕರು ಗುರಾಣಿಯಾಗಿಸಿದ್ದರು. ಮುಸ್ಲಿಂ ಮತಗಳನ್ನು ಪೂರ್ತಿಯಾಗಿ ತಮ್ಮ ಬುಟ್ಟಿಗೆ ಹಾಕ್ಕೊಂಡಿದ್ದರು. ಜೊತೆಗೆ, ದಲಿತ, ಹಿಂದುಳಿದ ವರ್ಗದ ಮತಗಳನ್ನೂ ಸೆಳೆಯಲು ಯಶಸ್ವಿಯಾದರು. ಇದರಿಂದ ವಿಜಯೇಂದ್ರ ಅವರನ್ನು ಇಳಿಸಿಯೇ ತೀರುತ್ತೇವೆಂದು ಹೊರಟಿರುವ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪಸಿಂಹ, ಅರವಿಂದ ಲಿಂಬಾವಳಿ ಕಾಂಗ್ರೆಸ್ ನಾಯಕರಿಗಿಂತಲೂ ಹೆಚ್ಚು ‘ಸಂತೋಷ’ ಪಟ್ಟಿರುವುದರಲ್ಲಿ ಸಂಶಯ ಇಲ್ಲ.
Inter fight between BJP top leaders, reason for failure in by poll elections in Karnataka. Top leader Yatnals several allegations made against BJP state president Vijayandra as lead to several internal fights, which is resulted in failure ofby-elections
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm