ಬ್ರೇಕಿಂಗ್ ನ್ಯೂಸ್
25-11-24 05:51 pm Bangalore Correspondent ಕರ್ನಾಟಕ
ಬೆಂಗಳೂರು, ನ.25: ಜೆಡಿಎಸ್ ಶಾಸಕರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಮನಸ್ಸು ಮಾಡಬೇಕು. ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೆಗೌಡರು ಫೇಲ್ ಆಗಿದ್ದಾರೆ. ಹಳ್ಳಿ ಹಳ್ಳಿಗೆ ಬಂದು, ಪ್ರಚಾರ ಮಾಡಿದ್ರೂ ಜನ ಗೌರವ ಕೊಡಲಿಲ್ಲ. ಸಮುದಾಯ ಬೆಂಬಲ ಕೊಡಲಿಲ್ಲ. ಅವರ ಕುಟುಂಬ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ಇನ್ನು ಯಾಕೆ ಈ ಸಮಾಜದ ಶಕ್ತಿ ಬಳಸಿಕೊಂಡು ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ತೀರಾ..? ಹೀಗೆಂದು ಚನ್ನಪಟ್ಟಣ ನೂತನ ಶಾಸಕ ಸಿಪಿ ಯೋಗೀಶ್ವರ್ ದೇವೇಗೌಡ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ.
ಜೆಡಿಎಸ್ ಕುಸಿತ ಕಾಣ್ತಿದೆ, ನಶಿಸಿ ಹೋಗ್ತಿದೆ. ಪಕ್ಷ ನಶಿಸಿಹೋದಾಗ, ಶಾಸಕರು ಬೇರೆ ಕಡೆ ಮುಖ ಮಾಡೋದು ಸಹಜ. ನನ್ನ ಪೂರ್ತಿ ಸಮಯ ನಾನು ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗ್ತೇನೆ. ಇಡೀ ಕುಟುಂಬ ನಿಂತು ಒಬ್ಬ ಸಾಮಾನ್ಯ ವ್ಯಕ್ತಿ ವಿರುದ್ದ ದಾಳಿ ಮಾಡಿದ್ರಲ್ಲ ಅನ್ನೋ ನೋವಿಂದ ಮಾತಾಡಿದ್ದೀನಿ. ನನಗೆ ಯಾರಾದ್ರೂ ಜವಾಬ್ದಾರಿ ಕೊಟ್ರೆ ಅಂತ ಜೆಡಿಎಸ್ ಶಾಸಕರನ್ನು ಕರೆತರುವ ವಿಚಾರ ಮಾತಾಡಿದ್ದೆ.
ಜೆಡಿಎಸ್ ಶಾಸಕರು ನಿಮ್ಮ ಸಂಪರ್ಕ ಮಾಡಿದ್ರಾ ಎಂಬ ಪ್ರಶ್ನೆಗೆ, ಕುಮಾರಸ್ವಾಮಿ ಅವರ ಆರ್ಭಟ, ಈ ಕುಯುಕ್ತಿ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಅಂತ ಈ ಮಾತು ಹೇಳಿದ್ದೇನೆ. ಕುಟುಂಬದ ಸ್ವಾರ್ಥಕ್ಕಾಗಿ ಒಕ್ಕಲಿಗರನ್ನು ಬಳಸಿಕೊಳ್ಳುತ್ತಿರುವುದನ್ನು ಹೇಳಿದ್ದೇನೆ ಎಂದಿದ್ದಾರೆ.
ಬಿಜೆಪಿ ಪಕ್ಷದಿಂದ ಆಚೆ ತಳ್ಳಲ್ಪಟ್ಟವನು. ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಆಚೆ ಬಂದಿದ್ದೇನೆ. ನಾನೆರನು ಅಲ್ಲಿಂದ, ಇಲ್ಲಿಂದ ಹಾರಿಕೊಂಡಿರೋನು ಅಲ್ಲ. ಅನಿವಾರ್ಯ ರಾಜಕೀಯ ಸ್ಥಿತಿ ನನ್ನನ್ನು ಆ ರೀತಿ ಮಾಡಿದೆ. ನಾನು ಕೊನೆ ದಿನದ ವರೆಗೂ ಕಾದು ರಾಜಕೀಯ ನಿರ್ಣಯ ತೆಗೆದುಕೊಂಡಿದ್ದೇನೆ. ನಾವು ಕಟ್ಟಿದ ಮನೆಯಿಂದ ಆಚೆ ಹಾಕಿದ ಮೇಲೆ ಬೇರೆ ಮನೆ ಹುಡುಕಿಕೊಳ್ಳಬೇಕು. ನಾನು ಪಕ್ಕಾ ಕಾಂಗ್ರೇಸ್ಸಿಗ,ನಾನು ಪಕ್ಷ ಬಿಡಲ್ಲ ಎಂದು ಹೇಳಿದರು.
ಜೆಡಿಎಸ್ ಅವರು ಸೋತು ಸುಣ್ಣ ಆಗಿದ್ದಾರಲ್ಲ. ಕುರುಕ್ಷೇತ್ರದಲ್ಲಿ ಬಭ್ರುವಾಹನ ಹೇಳ್ತಾನಲ್ಲಾ, ಮಗನನ್ನು ಯುದ್ದ ಭೂಮಿಗೆ ಕಳಿಸಿ ನೀನು ರಣಹೇಡಿ ಆಗ್ಬಿಟ್ಟೆ ಅಂತ. ಇವತ್ತು ಕೂಡ ಅದೇ ಪರಿಸ್ಥಿತಿ ಕುಮಾರಸ್ವಾಮಿಗಾಗಿದೆ. ತನ್ನ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದ್ರೆ ಕೇಂದ್ರ ಸಚಿವ ಆಗಿ ಏನು ಪ್ರಯೋಜನ. ಕುಮಾರಸ್ವಾಮಿ ಭಂಡತನಕ್ಕೆ ಬೆಲೆ ತೆತ್ತಿದ್ದಾರೆ. ಅವರಿಗೆ ಇದ್ರೆ ಈ ಊರು, ಬಿಟ್ರೆ ಇನ್ನೊಂದು ಊರು ಎಂದು ಟಾಂಗ್ ಇಟ್ಟರು.
ಬೆಳಗಾವಿ ಸದನದಲ್ಲಿ ಎಲ್ಲಾ ಶಾಸಕರು ಸಿಗ್ತಾರೆ. ಅವರ ಹತ್ತಿರ ಮಾತಾಡ್ತೀನಿ, ಚರ್ಚೆ ಮಾಡ್ತೀನಿ. ಜೆಡಿಎಸ್ ಶಾಸಕರ ಜೊತೆಗೂ ಮಾತಾಡ್ತೀನಿ ಎಂದು ಶಾಸಕ ಸಿಪಿ ಯೋಗೀಶ್ವರ್ ಹೇಳಿದ್ದಾರೆ.
Former prime minister, 92-year-old HD Deve Gowda’s possibly last-ditch attempt to launch his favourite grandson Nikhil Kumaraswamy’s political career from Channapatna Assembly constituency ended in a fiasco, casting grave concerns about the future of the regional party launched by him – the Janata Dal
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am