ಬ್ರೇಕಿಂಗ್ ನ್ಯೂಸ್
28-11-24 10:41 pm Bangalore Correspondent ಕರ್ನಾಟಕ
ಬೆಂಗಳೂರು, ನ.28: ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಡಿಸೆಂಬರ್ ಮೊದಲ ವಾರದಲ್ಲಿ ಸಚಿವ ಸಂಪುಟಕ್ಕೆ ಸರ್ಜರಿಯಾಗಲಿದೆ ಎನ್ನಲಾಗುತ್ತಿದ್ದು, ಕೆಲವೊಬ್ಬರನ್ನು ಕೈಬಿಟ್ಟು ಸಿಎಂ ಸಿದ್ದರಾಮಯ್ಯ ಹೊಸಬರಿಗೆ ಮಣೆ ಹಾಕಲಿದ್ದಾರೆ ಎನ್ನುವ ಲೆಕ್ಕಾಚಾರಗಳಿವೆ.
ಈ ನಡುವೆ, ಕಳೆದ ಬಾರಿಯೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಕೆ ಹರಿಪ್ರಸಾದ್ ಈ ಬಾರಿ ಸಚಿವ ಸಂಪುಟ ಸೇರಲಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಹರಿಪ್ರಸಾದ್ ಅವರು ತುರ್ತಾಗಿ ದೆಹಲಿಗೆ ತೆರಳಿದ್ದು, ಅವರಿಗೆ ಕೇಂದ್ರ ನಾಯಕರು ಪ್ರಮುಖ ಸ್ಥಾನದ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಹರಿಪ್ರಸಾದ್ ಎಐಸಿಸಿ ಕಾರ್ಯದರ್ಶಿ ಸೇರಿದಂತೆ ವಿವಿಧ ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡಿದವರು. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ತನ್ನದೇ ಆದ ಪ್ರಭಾವ ಇಟ್ಟುಕೊಂಡಿದ್ದಾರೆ.
ಹರಿಪ್ರಸಾದ್ ಅವರು ನಾಲ್ಕು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರೂ, ಸುದೀರ್ಘ 50 ವರ್ಷಗಳಿಂದ ಪಕ್ಷದ ನಾನಾ ರೀತಿಯ ಹುದ್ದೆಗಳನ್ನು ನಿಭಾಯಿಸಿದ್ದರೂ ಅವರಿಗೆ ಅಧಿಕಾರದ ಸ್ಥಾನ ಸಿಕ್ಕಿಲ್ಲ. ಯುಪಿಎ ಸರಕಾರ ಇದ್ದಾಗ ರಾಜ್ಯಸಭೆ ಸದಸ್ಯರಾಗಿದ್ದರೂ, ಸಚಿವ ಸ್ಥಾನದ ಭಾಗ್ಯ ಸಿಕ್ಕಿರಲಿಲ್ಲ. ಕರಾವಳಿಯ ಬಿಲ್ಲವ ಸಮುದಾಯಕ್ಕೆ ಸೇರಿರುವ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದ ವ್ಯಕ್ತಿ. ಕಳೆದ ಬಾರಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಸ್ಥಾನಕ್ಕೆ ಹಗ್ಗಜಗ್ಗಾಟ ನಡೆಯುತ್ತಿದ್ದಾಗ, ಇಬ್ಬರ ಜಗಳದಲ್ಲಿ ಮತ್ತೊಬ್ಬ ಹಿಂದುಳಿದ ವರ್ಗದ ಬಿಕೆ ಹರಿಪ್ರಸಾದ್ ಲಕ್ ಹೊಡೆಯುತ್ತಾರಾ ಎನ್ನುವ ಕುತೂಹಲ ಎದುರಾಗಿತ್ತು.
ಆದರೆ ಸಿದ್ದರಾಮಯ್ಯ ತಮ್ಮ ಪರವಾಗಿ ಅತಿ ಹೆಚ್ಚು ಶಾಸಕರಿದ್ದಾರೆ ಎಂಬುದನ್ನು ಬಿಂಬಿಸಿ ಸಿಎಂ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರು. ಆನಂತರ, ಬಿಕೆ ಹರಿಪ್ರಸಾದ್ ಸಚಿವರಾಗಬಹುದು ಎನ್ನುವ ಮಾತು ಕೇಳಿಬಂದಿತ್ತು. ಆದರೆ, ಇವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರ ಇದ್ದಾರೆಂದು ಸಚಿವ ಸ್ಥಾನದಿಂದ ಸಿದ್ದರಾಮಯ್ಯ ದೂರ ಇಟ್ಟಿದ್ದಾರೆಂದೂ ವಿಶ್ಲೇಷಣೆ ನಡೆದಿತ್ತು. ಈ ಕಾರಣಕ್ಕೆ ಹರಿಪ್ರಸಾದ್ ಕೆಲವು ಕಾಲ ಸ್ವಲ್ಪ ಸಿಟ್ಟನ್ನೂ ಇಟ್ಟುಕೊಂಡಿದ್ದರು. ಆದರೆ, ರಾಜ್ಯ ಸರಕಾರ ಬಂದು ಒಂದೂವರೆ ವರ್ಷ ಪೂರೈಸುತ್ತಿದ್ದಂತೆ ಎದುರಾದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಗೆದ್ದಿರುವುದು ಸಿದ್ದರಾಮಯ್ಯ ಸ್ಥಾನವನ್ನು ಮತ್ತೆ ಗಟ್ಟಿಗೊಳಿಸಿದೆ. ಇದೀಗ ಕೆಲವು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕುವುದಕ್ಕೆ ಎಐಸಿಸಿ ಮುಂದಾಗಿದೆ.
ಈ ವೇಳೆ, ದೀರ್ಘ ಕಾಲದ ರಾಜಕೀಯ ಅನುಭವಿ ಬಿಕೆ ಹರಿಪ್ರಸಾದ್ ಅವರನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ, ಮುಂದಿನ ಚುನಾವಣೆ ವೇಳೆಗೆ ಬಿಲ್ಲವರನ್ನು ಓಲೈಸಿ ಕರಾವಳಿಯಲ್ಲಿ ಅಧಿಕಾರ ಹಿಡಿಯುವ ಕನಸನ್ನೂ ಕಂಡಿದೆ. ಈ ಸೂತ್ರಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಪ್ಪಿಗೆ ನೀಡಿದ್ದು, ಹರಿಪ್ರಸಾದ್ ಪ್ರಮುಖ ಖಾತೆಯನ್ನೇ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ರಫ್ ಅಂಡ್ ಟಫ್ ವ್ಯಕ್ತಿತ್ವದ ಹರಿಪ್ರಸಾದ್ ಗೃಹ ಸಚಿವರಾದರೆ ಉತ್ತಮ ಎನ್ನುವ ಬಯಕೆ ಅವರ ಅಭಿಮಾನಿಗಳಲ್ಲಿದೆ. ಮೃದು ಸ್ವಭಾವದ ಪರಮೇಶ್ವರ್ ಅವರನ್ನು ಬದಲಿಸಬೇಕು ಎನ್ನುವ ಮಾತೂ ಕೇಳಿಬರುತ್ತಿರುವುದರಿಂದ ಬಿಕೆ ಮಹತ್ವದ ಸ್ಥಾನ ಪಡೆಯುತ್ತಾರಾ ಎನ್ನುವ ಕುತೂಹಲ ಇದೆ.
Senior Congress leader BK HariPrasad likely in the chance of getting ministerial post in the state of Karnataka. Sources have told that the Ministry post would be announced in December.
10-12-24 10:47 pm
HK News Desk
Panchamasali Protest, Belagavi: ಬೆಳಗಾವಿ ಸುವರ್...
10-12-24 10:32 pm
Murudeshwara beach drowning bhatkal: ಮುರ್ಡೇಶ್...
10-12-24 10:03 pm
SM krishna school holiday: ಎಸ್ಸೆಂ ಕೃಷ್ಣ ನಿಧನ...
10-12-24 11:48 am
SM Krishna Death, Wikipedia; ಬೆಂಗಳೂರಿಗೆ 'ಸಿಲಿ...
10-12-24 11:34 am
10-12-24 10:57 pm
HK News Desk
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
Devendra Fadnavis, Maharashtra New CM; 'ಮಹಾ'...
04-12-24 01:29 pm
10-12-24 09:37 pm
Mangalore Correspondent
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
Ullal, Mangalore, Accident, Netravathi bridge...
09-12-24 06:03 pm
ಜೋಕಾಲಿಗೆ ಸಿಲುಕಿ 3ನೇ ತರಗತಿ ಬಾಲಕಿ ಸಾವಿನ ಸುದ್ದಿಗ...
09-12-24 03:26 pm
10-12-24 11:18 pm
Mangalore Correspondent
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm
Chikkamagaluru murder: ಸೋಶಿಯಲ್ ಮೀಡಿಯಾದಲ್ಲಿ ಪರ...
08-12-24 05:02 pm
ಷೇರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರ ಮೋಸ ; ನಕಲಿ ಟ...
07-12-24 09:48 pm