Yatnal, BJP Notice: ರೆಬಲ್ ನಾಯಕ ಯತ್ನಾಳ್ ಗೆ ಬಿಜೆಪಿ ಶಿಸ್ತು ಕಮಿಟಿ ಶೋಕಾಸ್ ನೋಟಿಸ್ ; ಹತ್ತು ದಿನದಲ್ಲಿ ಉತ್ತರಿಸಲು ಸೂಚನೆ, ಬಂಡಾಯ ಶಮನಕ್ಕೆ ಯತ್ನ 

02-12-24 01:33 pm       Bangalore Correspondent   ಕರ್ನಾಟಕ

ನಿರಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣದ ವಿರುದ್ಧ ವಾಗ್ದಾಳಿ ನಡೆಸುತ್ತ ಬಂಡಾಯ ಸಾರಿರುವ ಬಿಜೆಪಿ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು 10 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ. 

ಬೆಂಗಳೂರು, ಡಿ.2: ನಿರಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣದ ವಿರುದ್ಧ ವಾಗ್ದಾಳಿ ನಡೆಸುತ್ತ ಬಂಡಾಯ ಸಾರಿರುವ ಬಿಜೆಪಿ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು 10 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ. 

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಬಿಜೆಪಿ ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದುದರಿಂದ ರಾಜ್ಯ ಬಿಜೆಪಿ ತೀವ್ರ ಇರಿಸು ಮುರಿಸಿಗೆ ಒಳಗಾಗಿತ್ತು. ವಕ್ಫ್ ವಿಚಾರದಲ್ಲಿ ಪ್ರತ್ಯೇಕ ಬಣ ಕಟ್ಟಿಕೊಂಡು ರಾಜ್ಯ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಪಕ್ಷದಲ್ಲೇ ಎರಡು ಬಣ ಸೃಷ್ಟಿಯಾಗಿದ್ದರಿಂದ ಬಿಜೆಪಿ ಒಡೆದ ಮನೆಯಾಗಿತ್ತು. ವಕ್ಫ್ ಹೋರಾಟ ನೆಪದಲ್ಲಿ ಬೀದರ್ ಟು ಚಾಮರಾಜನಗರ ಪ್ರತ್ಯೇಕ ಜನ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದರು. 

ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರಿಂದ ತೀವ್ರ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿದ್ದು ಹತ್ತು ದಿನಗಳಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ ನಿಮ್ಮ ಮೌನ, ಕ್ರಮ ಜರುಗಿಸುವುದಕ್ಕೆ ಸಮ್ಮತಿ ಎನ್ನುವ ಅರ್ಥ ಕೊಡುತ್ತದೆ ಎಂದು ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.

The BJP Central Disciplinary Committee on Sunday (December 1, 2024)has issued a show-cause notice to “rebel” leader and senior MLA Basanagouda Patil Yatnal for allegedly violating party’s discipline by.