Karwar, Ballon Death: ಕಾರವಾರ ; ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು 

02-12-24 02:39 pm       HK News Desk   ಕರ್ನಾಟಕ

ಬಲೂನ್​ ಊದುತ್ತ ಮನೆಯಲ್ಲಿ ಆಟವಾಡುತ್ತಿದ್ದ 13 ವರ್ಷದ ಬಾಲಕನೊಬ್ಬನ ಗಂಟಲಲ್ಲಿ ಬಲೂನ್ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕಾರವಾರ, ಡಿ 02: ಬಲೂನ್​ ಊದುತ್ತ ಮನೆಯಲ್ಲಿ ಆಟವಾಡುತ್ತಿದ್ದ 13 ವರ್ಷದ ಬಾಲಕನೊಬ್ಬನ ಗಂಟಲಲ್ಲಿ ಬಲೂನ್ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ನವೀನ ನಾರಾಯಣ ಬೆಳಗಾಂವಕರ (13) ಮೃತ ಬಾಲಕ.

ಮನೆಯಲ್ಲಿ ಆಟವಾಡುತಿದ್ದ ವೇಳೆ ಬಲೂನ್ ಊದುವಾಗ ಬಾಯಿಯ ಒಳಗೆ ಕೈ ತಪ್ಪಿ ಜಾರಿ ಹೋಗಿ ಗಂಟಲಲ್ಲಿ ಸಿಲುಕಿದೆ. ಈ ವೇಳೆ, ಉಸಿರುಗಟ್ಟಿ ಒದ್ದಾಡುತಿದ್ದ ಈತನಿಗೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಉಸಿರಾಟವಾಡಲು ಸಾಧ್ಯವಾಗದೇ ಸಾವು ಕಂಡಿದ್ದಾನೆ.

ಹಳಿಯಾಳದ ಸರ್ಕಾರಿ ಆಸ್ಪತ್ರೆ ವೈದ್ಯರು ಗಂಟಲಲ್ಲಿ ಸಿಲುಕಿದ್ದ ಬಲೂನ್​ನನ್ನು ತೆಗೆದಿದ್ದಾರೆ. ಆದರೆ ಬಾಲಕ ಆಸ್ಪತ್ರೆ ಕರೆತರುವ ವೇಳೆಯೇ ದುರಂತ ಸಾವು ಕಂಡಿದ್ದಾನೆ. 

ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 year old boy dies after swallowing ballon while playing in karwar. The deceased has been identified as Naveen Narayan.