Ramesh Jarkiholi, B. Y. Vijayendra: ಹುಡುಗ ವಿಜಯೇಂದ್ರಗೆ ಹುಡುಗಾಟ ಬುದ್ಧಿ, ಸಣ್ಣ ವಯಸ್ಸು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವ್ನು ಲಾಯಕ್ಕಲ್ಲ ; ರಮೇಶ್ ಜಾರಕಿಹೊಳಿ ಗುಡುಗು 

05-12-24 10:50 pm       HK News Desk   ಕರ್ನಾಟಕ

ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ಗಂಭೀರವಾಗಿ ಕೆಲಸ ಮಾಡುವುದು ಒಳ್ಳೆಯದು. ಹುಡುಗಾಟದ ಬುದ್ಧಿ, ವಯಸ್ಸು ಸಣ್ಣದಿರೋದ್ರಿಂದ ಆ ಸ್ಥಾನಕ್ಕೆ ಅವರು ಲಾಯಕ್ಕಲ್ಲ. ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲಿ ಎಂದು ಮೊನ್ನೆ ದೆಹಲಿಯಲ್ಲೂ ನಾನು ಹೇಳಿದ್ದೇನೆ ಎಂದು ಮಾಜಿ ಸಚಿವ‌ ರಮೇಶ್ ಜಾರಕಿಹೊಳಿ ಮತ್ತೆ ವಾಗ್ದಾಳಿ ನಡೆಸಿದರು.

ಬೆಳಗಾವಿ, ಡಿ 05: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ಗಂಭೀರವಾಗಿ ಕೆಲಸ ಮಾಡುವುದು ಒಳ್ಳೆಯದು. ಹುಡುಗಾಟದ ಬುದ್ಧಿ, ವಯಸ್ಸು ಸಣ್ಣದಿರೋದ್ರಿಂದ ಆ ಸ್ಥಾನಕ್ಕೆ ಅವರು ಲಾಯಕ್ಕಲ್ಲ. ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲಿ ಎಂದು ಮೊನ್ನೆ ದೆಹಲಿಯಲ್ಲೂ ನಾನು ಹೇಳಿದ್ದೇನೆ ಎಂದು ಮಾಜಿ ಸಚಿವ‌ ರಮೇಶ್ ಜಾರಕಿಹೊಳಿ ಮತ್ತೆ ವಾಗ್ದಾಳಿ ನಡೆಸಿದರು.

ದೆಹಲಿ ಪ್ರವಾಸ ಮುಗಿಸಿ ಬೆಳಗಾವಿ ಸಾಂಬ್ರಾ ವಿಮಾನ‌ ನಿಲ್ದಾಣಕ್ಕೆ ಇಂದು ಸಂಜೆ ಬಂದಿಳಿದ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

ಜಂಟಿ ಸದನ ಸಮಿತಿ ಅಧ್ಯಕ್ಷರಿಗೆ ನಮ್ಮ ವರದಿ ಸಲ್ಲಿಸಲಾಗಿದೆ. ನಮ್ಮ ತಂಡಕ್ಕೆ ಶಹಬ್ಬಾಷ್‌ಗಿರಿ ಕೊಟ್ಟಿದ್ದಾರೆ. ಶೀಘ್ರದಲ್ಲೇ ‌ಎರಡನೇ ಹಂತದ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ಈಗಾಗಲೇ ಕಾರಜೋಳ ಅವರ ಮೂಲಕ ವರದಿ ಸಲ್ಲಿಸಲಾಗಿದೆ ಎಂಬ ವಿಜಯೇಂದ್ರ‌ ಹೇಳಿಕೆಗೆ, ಕಾರಜೋಳ ಇಲ್ಲೇ ಇದ್ದರು ಕೇಳಿದ್ದೀರಾ ಎಂದು‌ ಮರು ಪ್ರಶ್ನಿಸಿದರು.

ಯಡಿಯೂರಪ್ಪನವರ ಮಗ ಎನ್ನುವ ಕಾರಣಕ್ಕೆ ರಾಜ್ಯಾಧ್ಯಕ್ಷರಾಗಿದ್ದಾರೆ.‌ ಯಡಿಯೂರಪ್ಪ ಬಹಳಷ್ಟು ಹೋರಾಟ ಮಾಡಿದ ಬಳಿಕ ಆ ಸ್ಥಾನಕ್ಕೆ ತಲುಪಿದ್ದರು. ಅವರ ಮಗನಾಗಿ ಆ ಸ್ಥಾನ ತಲುಪಿದ್ದು ವ್ಯರ್ಥ. ಯಡಿಯೂರಪ್ಪನವರ ಹಿರಿತನ, ತ್ಯಾಗ ಮತ್ತು ಹೋರಾಟ ಮಂಕಾಗುತ್ತಿದೆ. ಈಗ ಅಧಿಕಾರ ಬಿಟ್ಟು ಕೊಟ್ಟು ಮುಂದೆ ಅನುಭವ ಪಡೆದ ಬಳಿಕ ಮತ್ತೆ ಅಧ್ಯಕ್ಷರಾಗಲಿ ಎಂದು ಸಲಹೆ ನೀಡಿದರು.

ವರಿಷ್ಠರ ತೀರ್ಮಾನಕ್ಕೆ ನಾವೆಲ್ಲಾ ಬದ್ಧ. ಆದರೆ, ಆ ಹುಡುಗ ವಿಜಯೇಂದ್ರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಲಾಯಕ್ ಅಲ್ಲ ಎಂಬುದನ್ನು ನಾನು ಪದೇ ಪದೇ ಹೇಳಲು ಪ್ರಯತ್ನಿಸುತ್ತಿದ್ದೇನೆ. ಯಾವುದೋ ಒಂದು ಸಮಯದಲ್ಲಿ ಏನೋ ತಿಳಿದು ಅಧ್ಯಕ್ಷ‌ನನ್ನಾಗಿ ಮಾಡಿದ್ದಾರೆ. ವಿಜಯೇಂದ್ರ ನಡವಳಿಕೆ ಬಗ್ಗೆ ಹೈಕಮಾಂಡ್​ಗೆ ತಿಳಿಸಿಕೊಟ್ಟಿದ್ದೇವೆ. ಮುಂದೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕಿದೆ. ಇನ್ನು ಅಧ್ಯಕ್ಷರ ಬದಲಾವಣೆ ಬಗ್ಗೆ ಮುಂದೆ ನೋಡೋಣ. ಅದನ್ನು ಮಾಧ್ಯಮಗಳ ಮುಂದೆ ಮಾತಾಡಲಾಗದು ಎಂದರು.

Ramesh Jarkiholi slams B. Y. Vijayendra, says he's unfit to be the president. Says hes a small kid, who doesn't know any politics like his father.