ಬ್ರೇಕಿಂಗ್ ನ್ಯೂಸ್
07-12-24 11:20 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.7: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಬಾಣಂತಿಯರ ಸಾವು ಸಂಭವಿಸಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿರಾರು ಸರ್ಜರಿಗಳನ್ನ ಯಶಸ್ವಿಯಾಗಿ ನಡೆಸಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಸಿಸೇರಿಯನ್ ಗೆ ಒಳಗಾದ ಐವರು ಬಾಣಂತಿಯರು ಸಾವಿಗೀಡಾಗಿರುವುದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆ ಭೇಟಿ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಪ್ರತಿಭಟನೆಯನ್ನ ಎದುರಿಸಬೇಕಾಯ್ತು. ಜಿಲ್ಲಾಸ್ಪತ್ರೆಯ ಎದುರೇ ಧರಣಿ ಕುಳಿತಿದ್ದ ಶ್ರೀರಾಮುಲು ಅವರ ಬಳಿ ನೇರವಾಗಿ ತೆರಳಿದ ಸಚಿವ ದಿನೇಶ್ ಗುಂಡೂರಾವ್, ಧರಣಿ ಕೈ ಬಿಡುವಂತೆ ಮನವಿ ಮಾಡಿದರು.. ಬಾಣಂತಿಯರ ಸಾವಿನ ವಿಚಾರದಲ್ಲಿ ಪ್ರತಿಭಟಿಸುವುದನ್ನ ನಾನು ವಿರೋಧಿಸಲ್ಲ. ಆದರೆ ಈ ರೀತಿಯ ಸಾವಿನ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣವೇ ನಾನೇ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲದಿಂದ ತಜ್ಞರ ತಂಡವನ್ನ ಕಳಿಸಿ ಏಲ್ಲಿ ಲೋಪದೋಷಗಳಾಗಿವೆ ವರದಿ ನೀಡುವಂತೆ ಕೇಳಿದ್ದೆ. ಅವರು ನೀಡಿರುವ ವರದಿಯ ಪ್ರಕಾರ ವೈದ್ಯರ ಸೇವೆಯಲ್ಲಿ ಯಾವುದೇ ಕುಂದು ಕೋರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಿಂಗರ್ ಲ್ಯಾಕ್ಟೇಟ್ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ನಮಗೂ ಈ ಮೊದಲು ಐವಿ ದ್ರಾವಣದ ಮೇಲೆ ಅನುಮಾನವಿತ್ತು. 6 ತಿಂಗಳ ಹಿಂದೆಯೇ ನಾವು ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ತಡೆಹಿಡಿದಿದ್ವಿ.. ಆದರೆ ಕಂಪನಿಯವರು ಕೋರ್ಟ್ ಮೊರೆ ಹೋಗಿ ಸೆಂಟ್ರಲ್ ಡ್ರಗ್ ಲ್ಯಾಬ್ ನಿಂದ ಪಾಸಿಟಿವ್ ವರದಿ ತಂದು KSMCL ನಿಂದ ಬಿಡುಗಡೆ ಮಾಡಿಸಿಕೊಂಡಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು. ಕಂಪನಿಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಕ್ರಮ ವಹಿಸುತ್ತಿದ್ದು, ಕಂಪನಿಯವರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಲಾಗಿದೆ. ರಾಜ್ಯಾದ್ಯಂತ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಯನ್ನ ನಿಲ್ಲಿಸಲಾಗಿದೆ ಎಂದು ಸಚಿವ ಗುಂಡೂರಾವ್ ಸ್ಪಷ್ಟಪಡಿಸಿದರು. ಸಚಿವರ ಸ್ಪಷ್ಟನೆ ಬಳಿಕ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆಯನ್ನ ಕೈಬಿಟ್ಟರು.
ಆಸ್ಪತ್ರೆ ಭೇಟಿ ನೀಡಿ ಆಪರೇಷನ್ ಥಿಯೇಟರ್ ಗಳನ್ನ ಪರಿಶೀಲಿಸಿದ ಸಚಿವರು, ಸರ್ಜರಿ ಸಂದರ್ಭದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲು ಸೂಚನೆ ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪಶ್ಚಿಮ ಬಂಗಾಳದ ಕಂಪನಿ ಪೂರೈಸಿದ್ದ 192 ಐವಿ ರಿಂಗರ್ ಲ್ಯಾಕ್ಟೇಟ್ ಬ್ಯಾಚ್ ಗಳನ್ನ ತಡೆಹಿಡಿದಿದ್ದು, ಆಸ್ಪತ್ರೆಗಳಿಂದ ಹಿಂಪಡೆಯಲಾಗಿದೆ. ಕಂಪನಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಸೂಚಿಸಿದ್ದೇನೆ ಎಂದರು. ಐವಿ ದ್ರಾವಣಕ್ಕಾಗಿ ಹೊಸ ಟೆಂಡರ್ ಪ್ರಕ್ರಿಯೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಐವಿ ರಿಂಗರ್ ಲ್ಯಾಕ್ಟೇಟ್ ಅನ್ನು 6 ತಿಂಗಳ ಹಿಂದೆಯೇ ಬಳಸದಂತೆ ಸ್ಥಗಿತಗೊಳಿಸಲಾಗಿತ್ತು. ಪಶ್ಚಿಮ ಬಂಗಾಳದ ಕಂಪನಿಯನ್ನ ಬ್ಲಾಕ್ ಲೀಸ್ಟ್ ಕೂಡ ಸೇರಿಸಲಾಗಿತ್ತು.
ಪಾವಗಡ ಆಸ್ಪತ್ರೆಯಲ್ಲಿ ದ್ರಾವಣ ಬಳಕೆಯ ಸಂದರ್ಭದಲ್ಲಿ ಕೆಲವು ಅನುಮಾನ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿಯೇ ಮುಂಜಾಗ್ರತಾ ಕ್ರಮವಾಗಿ 192 ಬ್ಯಾಚ್ ಗಳಲ್ಲಿ ಪೂರೈಕೆಯಾಗಿದ್ದ ಐವಿ ದ್ರಾವಣವನ್ನ ತಡೆಹಿಡಿದು, ಎಲ್ಲಿಯೂ ಬಳಸದಂತೆ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದ್ದೆವು. ಆನಂತರ ಟೆಸ್ಟ್ ಮಾಡಿಸಿದಾಗ ರಾಜ್ಯದ ಡ್ರಗ್ ಕಂಟ್ರೋಲ್ ನವರು ಎರಡು ಬ್ಯಾಚ್ ಗಳು ಸ್ಡ್ಯಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂದು ವರದಿ ನೀಡಿದ್ದರು.
ಅಲ್ಲದೇ ರಾಜ್ಯದ ಔಷಧಿ ಸರಬರಾಜು ನಿಗಮ NABL ನವರು ಟೆಸ್ಟಿಂಗ್ ನಡೆಸಿದಾಗ 192 ಬ್ಯಾಚ್ ಗಳಿಗೆ NABL ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿದ್ದರು. ಆದರೂ ಮುಂಜಾಗ್ರತೆ ದೃಷ್ಟಿಯಿಂದ ರಾಜ್ಯದ ಡ್ರಗ್ ಕಂಟ್ರೋಲ್ ನವರು NSQ ವರದಿ ನೀಡಿದ್ದ 22 ಬ್ಯಾಚ್ ಗಳನ್ನ ಆಸ್ಪತ್ರೆಗಳಿಗೆ ನೀಡಿರಲಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಸ್ಪಷ್ಟಪಡಿಸಿದರು.
ಮೃತ ಬಾಣಂತಿಯರಾದ ನಂದನಿ, ಲಲಿತಾ ಹಾಗೂ ಕೂಡ್ಲಿಗಿಯ ಸುಮಯಾ ಅವರುಗಳ ಮನೆಗಳಿಗೆ ಭೇಟಿ ನೀಡಿದ ಆರೋಗ್ಯ ಸಚಿವರು, ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ಈ ರೀತಿಯ ಸಾವುಗಳು ಸಂಭವಿಸಬಾರದು. ಮುಂದೆ ಈ ರೀತಿಯ ಸಾವುಗಳು ಆಗದಂತೆ ಎಚ್ವರಿಕೆ ವಹಿಸುವುದರ ಜೊತೆಗೆ, ಲೋಪ ದೋಷಗಳನ್ನ ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಖುವುದಾಗಿ ಸಚಿವರು ಭರವಸೆ ನೀಡಿದರು. ಮೃತ ಬಾಣಂತಿಯರ ಕುಟುಂಬ ವರ್ಗದವರಿಗೆ ಸರ್ಕಾರ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು, ಹೆಚ್ವಿನ ಪರಿಹಾರಕ್ಕಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
BJP leader B. Sriramulu, who launched a hunger strike outside the district hospital in Ballari over the maternal deaths reported there and at Ballari Medical College and Research Centre, called off his agitation after Health Minister Dinesh Gundu Rao persuaded him with concrete assurances on Saturday.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm