ಬ್ರೇಕಿಂಗ್ ನ್ಯೂಸ್
19-12-24 01:31 pm Bangalore Correspondent ಕರ್ನಾಟಕ
ಬೆಂಗಳೂರು, ಡಿ 19: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ಹಳ್ಳಿ ಠಾಣೆ ಪೊಲೀಸರು, ಆತನ ಪತ್ನಿ ನಿಖಿತಾ ಸಿಂಘಾನಿಯಾ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ 'ಅತುಲ್ ಸುಭಾಷ್ ಸಂತ್ರಸ್ತನಲ್ಲ, ನಾನು ನಿಜವಾದ ಸಂತ್ರಸ್ತೆ' ಎಂದು ನಿಖಿತಾ ಸಿಂಘಾನಿಯಾ ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ.
''ನಾನು ಅಡುಗೆ ಚೆನ್ನಾಗಿ ಮಾಡಿಲ್ಲವೆಂದು ಅತುಲ್ ನನಗೆ ಕಿರುಕುಳ ನೀಡುತ್ತಿದ್ದ. ನನಗೆ ನಾನ್ವೆಜ್ ಅಡುಗೆ ಬರಲ್ಲ ಎಂದು ಹೇಳಿದರೂ ಕೇಳುತ್ತಿರಲಿಲ್ಲ. ಅದೇ ಅಡುಗೆ ಮಾಡುವಂತೆ ಹೇಳುತ್ತಿದ್ದ. ಅಷ್ಟರ ಬಳಿಕವೂ ನಾನು ಮನೆ ಬಿಟ್ಟು ಹೋಗಿರಲಿಲ್ಲ. ಮನೆ ಬಿಟ್ಟು ಹೋಗುವಂತೆ ಮಾಡಿದ್ದೂ ಸಹ ಅತುಲ್. ಆತ ಮಾಡಿರುವ ಆರೋಪಗಳು ಸುಳ್ಳು, ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇನೆ. 2020ರಿಂದಲೂ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಆತನ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ. ನೀವು ನನ್ನನ್ನ ಯಾಕೆ ಬಂಧಿಸಿದ್ದೀರಿ ಎಂಬುದೂ ಸಹ ನನಗೆ ಅರ್ಥವಾಗುತ್ತಿಲ್ಲ. ನಾನು ಕಾನೂನಾತ್ಮಕವಾಗಿ ಎಲ್ಲದಕ್ಕೂ ಉತ್ತರಿಸುತ್ತೇನೆ'' ಎಂದು ತನಿಖಾಧಿಕಾರಿಗಳ ಮುಂದೆ ನಿಖಿತಾ ಹೇಳಿಕೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:
ಉತ್ತರ ಪ್ರದೇಶದ ಅತುಲ್ ಸುಭಾಷ್ (34) ಡಿ.9ರಂದು ಮಾರತ್ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸುದೀರ್ಘ ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದರು. ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನನ್ವಯ ಆತನ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ಭಾರತೀಯ ನ್ಯಾಯಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಮಾರತ್ಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಹರಿಯಾಣದ ಗುರುಗ್ರಾಮದಲ್ಲಿ ನಿಖಿತಾ ಸಿಂಘಾನಿಯಾ, ಯುಪಿಯ ಪ್ರಯಾಗ್ರಾಜ್ನಲ್ಲಿ ಆಕೆಯ ತಾಯಿ ನಿಶಾ ಸಿಂಘಾನಿಯಾ ಹಾಗೂ ಅನುರಾಗ್ ಸಿಂಘಾನಿಯಾ ಅವರನ್ನು ಪೊಲೀಸರು ಬಂಧಿಸಿದ್ದರು.
ಪೋನ್ ಕಾಲ್ನಿಂದ ಬಲೆಗೆ ಬಿದ್ದ ಆರೋಪಿಗಳು;
ಆರೋಪಿಗಳು ದಿನಕ್ಕೊಂದು ಸ್ಥಳ ಬದಲಾಯಿಸುತ್ತಿದ್ದರು. ಆರೋಪಿಗಳು ದೂರವಾಣಿ ಮೂಲಕ ಯಾರೆಲ್ಲ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುವುದರ ಮಾಹಿತಿ ಪಡೆದು, ಅವರ ಮೇಲೆಯೂ ನಿಗಾ ಇಟ್ಟಿದ್ದರು. ಆರೋಪಿಗಳು ಬರೀ ವಾಟ್ಸಪ್ ಕಾಲ್ ಮಾಡುತ್ತಿದ್ದರು. ಇದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಆದರೆ, ಆ ಒಂದು ಕಾಲ್ನಿಂದ ಪೊಲೀಸರ ಬಲೆಗೆ ಬಿದ್ದರು.
ಎ1 ನಿಖಿತಾ ಸ್ಥಳ ಬದಲಾಯಿಸುವಾಗ ಮಿಸ್ ಆಗಿ ಪರಿಚಯಸ್ಥರಿಗೆ ಕಾಲ್ ಮಾಡಿದ್ದಳು. ಆಗ, ನಿಖಿತಾ ಇರುವ ಸ್ಥಳ ಪೊಲೀಸರಿಗೆ ಗೊತ್ತಾಗಿದೆ. ನಿಖಿತಾ ಮೊಬೈಲ್ ಲೊಕೇಶನ್ ಆಧರಿಸಿ ಬೆನ್ನು ಹತ್ತಿದ ಪೊಲೀಸರು ಹರಿಯಾಣದ ಗುರುಗ್ರಾಮ ತಲುಪಿದ್ದಾರೆ. ಗುರುಗ್ರಾಮದಲ್ಲಿ ನಿಕಿತಾ ರೂಂ ಒಂದರಲ್ಲಿ ಒಂಟಿಯಾಗಿದ್ದಳು.
ಅಲ್ಲಿ ಪೊಲೀಸರು ನಿಖಿತಾಳನ್ನು ವಶಕ್ಕೆ ಪಡೆದರು. ಬಳಿಕ, ನಿಖಿತಾಳ ಕಡೆಯಿಂದಲೇ ಆಕೆಯ ತಾಯಿ ಮತ್ತು ತಮ್ಮನಿಗೆ ಕರೆ ಮಾಡಿಸಿ, ಪ್ರಯಾಗ್ರಾಜ್ನಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದರು. ಬಳಿಕ ಅವರ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಸ್ಥಳಕ್ಕೆ ತೆರಳಿ ಎ2 ನಿಶಾ ಸಿಂಘಾನಿಯಾ ಮತ್ತು ಎ3 ಸಹೋದರ ಅನುರಾಗ್ನನ್ನು ಪ್ರಯಾಗ್ರಾಜ್ನಲ್ಲಿ ಬಂಧಿಸಿದರು.
Bengaluru techie Atul Subhash's estranged wife, Nikita Singhania, who was arrested after several days as a fugitive, has categorically denied her former husband’s allegations of harassment. During police questioning, Nikita claimed that it was Atul who subjected her to harassment.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am