ಬ್ರೇಕಿಂಗ್ ನ್ಯೂಸ್
19-12-24 08:05 pm HK News Desk ಕರ್ನಾಟಕ
ಬೆಳಗಾವಿ, ಡಿ.19: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸದನದಲ್ಲೇ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ. ರವಿ ಮೇಲೆ ಕಾಂಗ್ರೆಸಿಗರು ಬೆಳಗಾವಿ ಸುವರ್ಣ ಸೌಧದಲ್ಲೇ ಒದ್ದು ಹಲ್ಲೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರಿನಂತೆ ಕೇಸು ದಾಖಲಿಸಿದ ಪೊಲೀಸರು ಸಿಟಿ ರವಿ ಅವರನ್ನು ಬಂಧಿಸಿ ಹೊತ್ತೊಯ್ದಿದ್ದಾರೆ.
ಬೆಳಗಾವಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲು ಆಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೀಡಿದ ದೂರಿನ್ವಯ ಮಹಿಳೆಯರು ವಿರುದ್ಧ ಅವಾಚ್ಚ ಶಬ್ದ ಬಳಕೆ ಆರೋಪದಡಿ BNS 75 ಮತ್ತು 79ರಡಿ ಕೇಸು ದಾಖಲಿಸಲಾಗಿತ್ತು. ಇದರ ಬೆನ್ನಲ್ಲೇ ಸುವರ್ಣ ಸೌಧದಲ್ಲಿ ಹೊರಗೆ ಮತ್ತು ಒಳಗೆ ಕಾಂಗ್ರೆಸ್ ಮತ್ತು ಬಿಜೆಪಿಗರು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನಾ ಸ್ಥಳದಿಂದಲೇ ಸಿ.ಟಿ. ರವಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿ.ಟಿ. ರವಿಯನ್ನು ಬಂಧನ ಮಾಡಲು ಪೊಲೀಸರು ಬರುತ್ತಿದ್ದಂತೆಯೇ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿದ್ದು ಸುವರ್ಣ ಸೌಧ ಮೆಟ್ಟಿಲಲ್ಲೇ ದೊಡ್ಡ ಹೈಡ್ರಾಮಾ ನಡೆಯಿತು. ಈ ವೇಳೆ ಸಿ.ಟಿ. ರವಿ ಅವರನ್ನು ಮುಲಾಜಿಲ್ಲದೇ ಮೇಲೆತ್ತಿದ ಪೊಲೀಸರು ಪೊಲೀಸ್ ವಾಹನಕ್ಕೆ ತುಂಬಿಸಿ ಕರೆದೊಯ್ದಿದ್ದಾರೆ. ಬಿಜೆಪಿ ನಾಯಕರು ಪೊಲೀಸರ ವಾಹನಕ್ಕೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರೂ ಪೊಲೀಸರು ಕ್ಯಾರೆಂದಿಲ್ಲ.
ಇಷ್ಟಕ್ಕೂ ಸದನದಲ್ಲಿ ಆಗಿದ್ದೇನು ?
ಬೆಳಗಾವಿಯ ಅಧಿವೇಶನದಲ್ಲಿ ಕೇಂದ್ರ ಸಚಿವ ಅಮಿತ್ ಷಾ ಅಂಬೇಡ್ಕರ್ ಕುರಿತು ಆಡಿದ್ದ ಮಾತಿನ ಬಗ್ಗೆ ಕಾಂಗ್ರೆಸಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಬಂದಿದ್ದರು. ಈ ವೇಳೆ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಕಾಂಗ್ರೆಸಿಗರು ಕೂಡ ಪ್ರತಿಭಟನೆಗೆ ಮುಂದಾಗಿದ್ದು ಎರಡೂ ಕಡೆಯ ನಾಯಕರು ಪರಸ್ಪರ ಹೇಳಿಕೆ ನೀಡಲಾರಂಭಿಸಿದ್ದರು. ಈ ವೇಳೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರು ಅಲ್ಲಿಯೇ ಇದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಟಿ ರವಿಯನ್ನು ಕೊಲೆಗಡುಕ ಎಂದಿದ್ದಕ್ಕೆ ಇವರು ಸಿಟ್ಟಿನಿಂದ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರಿಡುತ್ತಾ ಪರಿಷತ್ ಸಭೆಯಿಂದ ಹೊರಗೆ ಹೋಗಿದ್ದು, ಸಭಾಪತಿಗೆ ದೂರು ನೀಡಿದ್ದರು. ಇದರ ನಂತರ ಹಿರೇ ಬಾಗೇವಾಡಿ ಪೊಲೀಸ್ ಠಾಣೆಗೂ ದೂರು ನೀಡಿದ್ದರು.
ಸಭಾಪತಿಗೆ ದೂರು ನೀಡಿದ ಬೆನ್ನಲ್ಲೇ ಇತ್ತ ಸಿ.ಟಿ. ರವಿ ಅವರು ನಾನು ಅಂತಹ ಪದವನ್ನೇ ಬಳಕೆ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಸಭಾಂಗಣದ ವಿಡಿಯೋ ಹಾಗೂ ಆಡಿಯೋ ಪರಿಶೀಲನೆ ಮಾಡುವಂತೆ ಸಭಾಪತಿ ಸೂಚನೆ ನೀಡಿದ್ದಾರೆ. ಇದರ ಇದಾದ ನಂತರ ಮಧ್ಯಾಹ್ನದ ಊಟಕ್ಕೆ ಹೋಗಿದ್ದಾರೆ. ಮಧ್ಯಾಹ್ನ ಊಟ ಮಾಡಿಕೊಂಡು ವಾಪಸ್ ಬರುವಾಗ ಸಿ.ಟಿ. ರವಿ ಮೇಲೆ ಹಲ್ಲೆ ಯತ್ನ ನಡೆದಿದೆ. ಆದರೆ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸಿಟಿ ರವಿ ಅವರನ್ನು ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಖಾಸಗಿ ಆಪ್ತ ಸಹಾಯಕ ಸಂಗನಗೌಡ ಹಾಗೂ ಚನ್ನರಾಜ್ ಅವರ ಪಿಎ ಸದ್ದಾಂ ಸೇರಿದಂತೆ ಐದಾರು ಜನರು ಸುವರ್ಣ ಸೌಧದ ಒಳಗೆ ಸಿ.ಟಿ. ರವಿ ಅವರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಮಾರ್ಷಲ್‌ಗಳು ರಕ್ಷಣೆಗೆ ಮುಂದಾದರೂ ಅವರಲ್ಲಿ ಒಬ್ಬರು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.
ಇದಾಗುತ್ತಲೇ ಸುವರ್ಣ ಸೌಧದ ಹೊರಗಡೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಸಿಟಿ ರವಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲೇ ಈ ರೀತಿಯಾಗಿದ್ದರಿಂದ ಅವರ ಬೆಂಬಲಿಗರು ತೀವ್ರ ಆಕ್ರೋಶಗೊಂಡಿದ್ದಾರೆ. ಇದರಿಂದ ಸಿಟಿ ರವಿ ಹೊರಗೆ ಬರುವುದಕ್ಕೂ ಆಗದೆ ಸಭಾಪತಿ ಕೊಠಡಿಯಲ್ಲೇ ಉಳಿದುಕೊಂಡರು. ಸಂಜೆ ವೇಳೆಗೆ ಪೊಲೀಸರು ಬಂಧಿಸಿ ಹೊತ್ತೊಯ್ದಿದ್ದಾರೆ. ಈ ನಡುವೆ, ಸಿ.ಟಿ. ರವಿ ಮೇಲೆ ಹಲ್ಲೆಗೆ ಯತ್ನಿಸಿ ಸುವರ್ಣ ಸೌಧದಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಸುಮಾರು 100ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
An FIR has been lodged against Bharatiya Janata Party MLC CT Ravi at the Hirebagewadi Police Station here on charges of using obscene and derogatory language against Minister Lakshmi Hebbalkar in the Legislative Council on Thursday.
19-12-24 08:05 pm
HK News Desk
Chikkamagaluru, Elephant Attack: ಚಿಕ್ಕಮಗಳೂರಲ್...
19-12-24 06:36 pm
Atul Subhash, Suicide: ಬೆಂಗಳೂರು ಟೆಕ್ಕಿ ಆತ್ಮಹತ...
19-12-24 01:31 pm
RTI Snehamayi Krishna Missing: ಮುಡಾ ಹಗರಣದ ಪ್ರ...
17-12-24 05:39 pm
Pavithra Gowda Release, Actor Darshan; ಪರಪ್ಪನ...
17-12-24 11:53 am
19-12-24 05:40 pm
HK News Desk
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಇನ್ನಿಲ್ಲ...
15-12-24 11:05 pm
19-12-24 04:28 pm
Mangalore Correspondent
Ullal Bridge, Traffic, Mangalore : ನೇತ್ರಾವತಿ...
19-12-24 01:53 pm
MCC catholic Bank Anil Lobo arrest, Suicide C...
18-12-24 05:09 pm
MCC Bank Anil Lobo, FIR, Manohar Pereira Suic...
18-12-24 01:56 pm
MCC Bank Anil Lobo, Manohar Pereira Suicide:...
17-12-24 11:13 pm
18-12-24 09:23 pm
Bangalore Correspondent
Mangalore CCB Police, Crime, Drugs; ಸಿಸಿಬಿ ಪೊ...
18-12-24 11:15 am
Konaje Police, Mangalore Police, Drugs; ಮಾದಕ...
17-12-24 07:51 pm
Karkala GooglePay Fraud, Arrest: ಹೋಮ್ ನರ್ಸ್ ಆ...
17-12-24 07:34 pm
Bank Fraud Case, Mangalore Police, News: ಬ್ಯಾ...
15-12-24 01:03 pm