ಬ್ರೇಕಿಂಗ್ ನ್ಯೂಸ್
24-12-24 03:44 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.24: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿ ಎಂಎಲ್ಸಿ ಸಿ.ಟಿ ರವಿ ನಿಂದಿಸಿದ್ದಾರೆನ್ನುವ ಪ್ರಕರಣದಲ್ಲಿ ಸದನದ ಒಳಗಡೆ ಮಹಜರು ನಡೆಸಲು ಸಭಾಪತಿ ಬಸವರಾಜ ಹೊರಟ್ಟಿ ಪೊಲೀಸರಿಗೆ ಅನುಮತಿ ನಿರಾಕರಿಸಿದ್ದು ಬೆಳಗಾವಿ ನಗರ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಅವರು ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೋರಿ ಸಭಾಪತಿಗೆ ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಹೇಳಿಕೆ ನೀಡಿರುವ ಹೊರಟ್ಟಿ, ಪೊಲೀಸರು ಸದನದ ಒಳಗಡೆ ಬಂದು ಪರಿಶೀಲಿಸುವ ಹಕ್ಕು ಹೊಂದಿಲ್ಲ ಎಂದಿದ್ದಾರೆ.
ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಬಂಧಿಸಲಾಗಿದೆ. ಸದ್ಯ, ನಾವು ಎರಡೂ ಕಡೆಯಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ. ಈ ಬಗ್ಗೆ ದೂರು ನೀಡಿದರೆ, ನಾವು ಕ್ರಮ ಕೈಗೊಳ್ಳುತ್ತೇವೆ. ಪರಿಷತ್ತಿನ ಒಳಗೆ ನಡೆದ ಘಟನೆಯಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಬಾರದು, ಸದನದೊಳಗೆ ನಡೆದಿರುವ ವಿಚಾರದಲ್ಲಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಮಹಜರು ನಡೆಯದ ಹೊರತು ತನಿಖೆ ಅಪೂರ್ಣವಾಗಲಿದ್ದು ಒಟ್ಟು ಪ್ರಕರಣಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ಮುಂದಿನ ಬೆಳವಣಿಗೆ ಬಗ್ಗೆ ಕುತೂಹಲ ಕೆರಳಿಸಿದೆ. ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ ಬಳಿಕ ಸದನಕ್ಕೆ ಬೀಗ ಹಾಕಲಾಗಿದೆ. ಸದನ ಪ್ರವೇಶ ಮಾಡಲು ಪೊಲೀಸರು ಅಧಿಕಾರ ಹೊಂದಿಲ್ಲ.
ಸದನದಲ್ಲಿ ನಡೆದಿರುವ ಘಟನೆ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ ಬಳಿಕ ರೂಲಿಂಗ್ ನೀಡಿದ್ದೇನೆ. ಅಲ್ಲಿಗೆ ಅದು ಮುಗಿದ ಅಧ್ಯಾಯ. ಮುಂದೆ ಎರಡೂ ಕಡೆಯಿಂದ ದೂರು ಬಂದರೆ ಮಾತ್ರ ಪರಿಶೀಲಿಸಲಾಗುವುದು. ಸದ್ಯಕ್ಕೆ ಏನೂ ಬೆಳವಣಿಗೆ ಆಗಿಲ್ಲ ಎಂದು ಹೊರಟ್ಟಿ ತಿಳಿಸಿದ್ದಾರೆ. ಬೆಳಗಾವಿ ಕಮಿಷನರ್ ಯಡಾ ಮಾರ್ಟಿನ್ ಪ್ರತಿಕ್ರಿಯಿಸಿ, ನಾವು ಸ್ಥಳ ಮಹಜರಿಗೆ ಅನುಮತಿ ಕೇಳಿದ್ದೆವು. ಈವರೆಗೆ ಅನುಮತಿ ಸಿಕ್ಕಿಲ್ಲ. ನಾವು ಸದನ ಪ್ರವೇಶ ಮಾಡಿಲ್ಲ. ಸಿಟಿ ರವಿ ಅವರು ಸದನದಿಂದ ಹೊರಬಂದ ಬಳಿಕ ಬಂಧಿಸಲಾಗಿತ್ತು ಎಂದು ತಿಳಿಸಿದ್ದಾರೆ.
CT Ravi remarks on Lakshmi Hebbalkar, speaker Khader rejects spot mahazar inside the parliament. Ravi was taken into custody after the registration of a case under sections 75 (sexual harassment) and 79 (act intended to insult the modesty of a woman) of the Bharatiya Nyaya Sanhita at Hirebagewadi police station.
10-04-26 06:53 pm
HK News Desk
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
11-04-26 12:44 pm
HK News Desk
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
10-04-26 10:12 pm
Mangalore Correspondent
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
Besant Evening College, BPL Cricket: ಬೆಸೆಂಟ್...
07-04-26 01:22 pm
11-04-26 12:04 pm
HK News Desk
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm