ಬ್ರೇಕಿಂಗ್ ನ್ಯೂಸ್
27-12-24 04:07 pm HK News Desk ಕರ್ನಾಟಕ
ಕಲಬುರಗಿ, ಡಿ.27: ಬೀದರ್‌ನಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಂಚಾಳ ತನ್ನ ಡೆತ್ ನೋಟ್ ನಲ್ಲಿ ಬಿಜೆಪಿ ನಾಯಕರ ಹತ್ಯೆ ಸಂಚನ್ನು ಬಯಲು ಮಾಡಿದ್ದಾನೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಕಾಂಗ್ರೆಸ್ ಮುಖಂಡ ರಾಜು ಕಪನೂರು ಮತ್ತು ಗ್ಯಾಂಗ್ ಬಿಜೆಪಿ ಶಾಸಕ ಸೇರಿ ನಾಲ್ವರು ಪ್ರಮುಖರ ಕೊಲೆಗೆ ಸಂಚು ನಡೆಸಿದ್ದಾಗಿ ಉಲ್ಲೇಖ ಮಾಡಿದ್ದಾನೆ.
ರಾಜು ಕಪನೂರ್ ಗ್ಯಾಂಗ್ ಕಿರುಕುಳ ಮತ್ತು ಬೆದರಿಕೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಸಚಿನ್ ಡೆತ್ ನೋಟಲ್ಲಿ ತಿಳಿಸಿದ್ದಾನೆ. ಇದಲ್ಲದೆ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್, ಕಲಬುರಗಿ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹಾಗೂ ಶ್ರೀರಾಮಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಕೊಲೆಗೆ ಸಂಚು ನಡೆದಿರೋದಾಗಿ ಹೇಳಿಕೊಂಡಿದ್ದಾನೆ.
ಸಚಿನ್ ಬರೆದ ಏಳು ಪುಟಗಳ ಡೆತ್ ನೋಟ್ ನಲ್ಲಿ ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಮಾಡಿದ್ದಾನೆ ಎನ್ನಲಾದ ಸಂಚನ್ನು ಉಲ್ಲೇಖವಾಗಿದೆ. ಸದ್ಯ ಈ ವಿಚಾರ ಮುನ್ನೆಲೆಗೆ ಬಂದಿದ್ದು ಕಾಂಗ್ರೆಸ್ ನಾಯಕ, ಬಿಜೆಪಿ ಪ್ರಮುಖರ ಕೊಲೆಗೆ ಸಂಚು ನಡೆಸಿದ್ದಾರೆ ಎನ್ನುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೊಲೆ ಸಂಚಿನ ಕುರಿತಾಗಿ ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದು ಬೀದರ್ ಜಿಲ್ಲೆಯಲ್ಲಿ ನಡೆದ ಘಟನೆ ಮನುಕುಲವೇ ಮರುಗುವ ಘಟನೆಯಾಗಿದ್ದು 26 ವರ್ಷದ ಯುವಕ ಸುದೀರ್ಘ ಏಳು ಪುಟಗಳ ಡೆತ್ ನೋಟ್ ಬರೆದು ರೈಲು ಹಳಿಗೆ ಕತ್ತನ್ನ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಬರಹದಲ್ಲಿ ಎಲ್ಲವು ಕಲಬುರಗಿ ಕಡೆ ಬೆರಳು ಮಾಡಿ ತೋರಿಸಿದೆ. ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಯಾರು ಕಾರಣ ಅಂತಾ ಬರೆದಿದ್ದಾರೆ. ಜೊತೆಗೆ ರಾಜು ಕಪನೂರ್ ಗ್ಯಾಂಗ್ ಕಲಬುರಗಿಯ ಪ್ರತಿಷ್ಟಿತರ ಕೊಲೆಗೆ ಸಂಚು ಮಾಡಿರುವ ಉಲ್ಲೇಖ ಮಾಡಿದ್ದಾರೆ.
ಶಾಸಕರು ಬಿಜೆಪಿ ನಾಯಕರು ನನ್ನನ್ನು ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ. ಯಾವ ಕಾರಣಕ್ಕೆ ಈ ಮುಖಂಡರ ಕೊಲೆಗೆ ಯತ್ನ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು. ಇದನ್ನ ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಆ ಯುವಕನನ್ನು ಈ ಗ್ಯಾಂಗ್, ಉಸ್ತುವಾರಿ ಸಚಿವ ಖರ್ಗೆಯವರಿಗೆ ಭೇಟಿ ಮಾಡಿಸಿದ್ದಾಗಿ ಬರೆದಿದ್ದಾನೆ. ಉಸ್ತುವಾರಿ ಸಚಿವರ ಕೃಪಾಕಟಾಕ್ಷ ಈ ಗ್ಯಾಂಗ್ ಮೇಲಿದೆ. ಇವರ ನಾಯಕರೇ ಹೊಡೀರಿ ಬಡೀರಿ ಅಂತ ಹೇಳಿದ ಮೇಲೆ ಇವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಉಸ್ತುವಾರಿ ಸಚಿವರು ಇದ್ದಾರೆ ಅಂತ ಆನೆ ನಡೆದಿದ್ದೇ ದಾರಿ ಅನ್ನೋ ಹಾಗೆ ಇವರ ದುಷ್ಕೃತ್ಯ ನಡೆದಿದೆ. ಕಲಬುರಗಿ ಉಸ್ತುವಾರಿ ಸಚಿವರು ಮತ್ತು ಅವರ ಗ್ಯಾಂಗ್ ಬಿಹಾರ್ ರೀತಿಯಲ್ಲಿ ಬೇದರಿಕೆ ಹಾಕ್ತಿದ್ದಾರೆ. ನೀವೆಲ್ಲಾ ತಿಹಾರ್ ಜೈಲಿನಲ್ಲಿರಬೇಕಾದವರು ವಿಧಾನಸೌಧದಲ್ಲಿ ಇದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Contractor dies by suicide in Bidar after harrasment by Congress leader Priyank Kharges aide, plot to murder four exposed in death note. According to PTI, Sachin Panchal, a resident of Tungadakatti in Bhalki Taluk, Bidar, had undertaken a contract in the Rural Development and Panchayat Raj Department.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm