Mandya Police Assult, Slap, Video: ತನ್ನ ಕಪಾಳಕ್ಕೆ ಹೊಡೆದ ಕಾನ್ಸ್ ಟೇಬಲ್ ಕೊರಳ ಪಟ್ಟಿ ಹಿಡಿದು ತಿರುಗಿ ಬಾರಿಸಿದ ಯುವಕ ; ಪೊಲೀಸ್ ಠಾಣೆಯಲ್ಲೇ ಘಟನೆ, ವಿಡಿಯೋ ವೈರಲ್ 

29-12-24 12:31 pm       HK News Desk   ಕರ್ನಾಟಕ

ಪೊಲೀಸ್ ಠಾಣೆಯಲ್ಲಿ ತನ್ನ ಕಪಾಳಕ್ಕೆ ಹೊಡೆದ ಕಾನ್ಸ್ ಟೇಬಲ್ ಕೊರಳ ಪಟ್ಟಿ ಹಿಡಿದು ಯುವಕನೊಬ್ಬ ತಿರುಗಿ ಕಪಾಳಕ್ಕೆ ಬಾರಿಸಿದ ಘಟನೆ ಮಂಡ್ಯ ಜಿಲ್ಲೆಯ  ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದಿದೆ. 

ಮಂಡ್ಯ, ಡಿ.29: ಪೊಲೀಸ್ ಠಾಣೆಯಲ್ಲಿ ತನ್ನ ಕಪಾಳಕ್ಕೆ ಹೊಡೆದ ಕಾನ್ಸ್ ಟೇಬಲ್ ಕೊರಳ ಪಟ್ಟಿ ಹಿಡಿದು ಯುವಕನೊಬ್ಬ ತಿರುಗಿ ಕಪಾಳಕ್ಕೆ ಬಾರಿಸಿದ ಘಟನೆ ಮಂಡ್ಯ ಜಿಲ್ಲೆಯ  ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದಿದೆ. 

ಪಾಂಡವಪುರ ಪಟ್ಟಣದ ಹಿರೋಡೆ ಬೀದಿಯ ಪಿ.ಎಸ್ ಜಗದೀಶ್ ಎಂಬವರ ಪುತ್ರ ಸಾಗರ್ (30) ಎಂಬಾತ ಪೊಲೀಸ್ ಕಾನ್ಸ್ ಟೇಬಲ್  ಹೊಡೆದ ವ್ಯಕ್ತಿಯಾಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.‌ ಕಾನ್ಸ್ ಟೇಬಲ್ ತನ್ನ ಮೇಲೆ ಕೈಮಾಡಿದ್ದಕ್ಕೆ ತಿರುಗಿ ಹಲ್ಲೆ ಮಾಡಿದ್ದು ಇದನ್ನು ಜೊತೆಗಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಈ ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೂಡಲೇ ಇತರೇ ಪೊಲೀಸರು ಹಿಡಿದುಕೊಂಡಿದ್ದು ಗಟ್ಟಿಮುಟ್ಟಾದ ಯುವಕ ಇಬ್ಬರು ಪೊಲೀಸರ ಕಾಲರ್ ಹಿಡಿದು ತಳ್ಳಿಕೊಂಡು ಹೋಗಿದ್ದಾನೆ. 

ಜಮೀನು ವಿಚಾರದಲ್ಲಿ ಲಕ್ಷ್ಮೀನಾರಾಯಣ ಎಂಬವರು ಸಾಗರ್ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ಮಾತುಕತೆಯಾಗುತ್ತಲೇ ಸಿಟ್ಟಿಗೆದ್ದ ಸಾಗರ್ ನನ್ನು ಪೊಲೀಸರು ಸಮಾಧಾನ ಪಡಿಸಿದ್ದು ಈ ವೇಳೆ ಪೊಲೀಸ್ ಕಾನ್ಸ್ ಟೇಬಲ್ ಅಭಿಷೇಕ್ ಸಾಗರ್ ಮೇಲೆ ಕೈಮಾಡಿದ್ದಾರೆ. ಪ್ರತಿಯಾಗಿ ಸಾಗರ್ ಹಲ್ಲೆ ನಡೆಸಿದ್ದಾನೆ. ಘಟನೆ ಸಂಬಂಧಿಸಿ ಅಭಿಷೇಕ್ ನೀಡಿದ ದೂರಿನಂತೆ ಪೊಲೀಸರು ಸಾಗರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Ex Municipal President Son assults Police Constables After He Slaps Him in Mandya, video viral. Sagar, son of former Municipal President Jagadish, allegedly slapped a police constable at Pandavapura Police Station in Karnataka’s Mandya during questioning over a land dispute. The altercation occurred after Sagar’s relative, Lakshmi Narayan, 60, filed a complaint accusing him of assault over a property disagreement.