Honnavara Accident, Mangalore: ಹೊಸ ವರ್ಷಾಚರಣೆಯ ಹೊಸ್ತಿಲಲ್ಲಿ ಹೊನ್ನಾವರದಲ್ಲಿ ರಸ್ತೆ ಅಪಘಾತ ; ಬೈಕ್ ಗೆ ಮಂಗಳೂರಿನ KSRTC ಬಸ್ ಡಿಕ್ಕಿ , ಮೂವರು ಯುವಕರ ಬಲಿ

31-12-24 05:47 pm       HK News Desk   ಕರ್ನಾಟಕ

ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ತಾಲೂಕಿನ ಶರಾವತಿ ಸೇತುವೆಯಲ್ಲಿ ಡಿ.31ರ ಮಂಗಳವಾರ ಮುಂಜಾನೆ ಸಂಭವಿಸಿದೆ.

ಹೊನ್ನಾವರ, ಡಿ.31: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ತಾಲೂಕಿನ ಶರಾವತಿ ಸೇತುವೆಯಲ್ಲಿ ಡಿ.31ರ ಮಂಗಳವಾರ ಮುಂಜಾನೆ ಸಂಭವಿಸಿದೆ.

ರಾಘವೇಂದ್ರ ಸೋಮಯ್ಯ ಗೌಡ, ಮಾವಿನಕುರ್ವಾ(34), ಗೌರೀಶ್ ನಾಯ್ಕ ಸಂಶಿ(25) ಹಾಗೂ ರಮೇಶ್ ನಾಯ್ಕ ಕರ್ವನಕುರ್ವ(22) ಮೃತ ಬೈಕ್ ಸವಾರರು.

2024ನೇ ವರ್ಷದ ಕೊನೆಯ ದಿನವಾದ ಡಿ.31ರ ಮುಂಜಾನೆ ಹೊನ್ನಾವರ ತಾಲೂಕಿನಲ್ಲಿ ಘನಘೋರ ದುರಂತವೊಂದು ಸಂಭವಿಸಿದೆ. ಬಡ ಮಧ್ಯಮ ವರ್ಗಕ್ಕೆ ಸೇರಿದ ಮೂವರು ಯುವಕರು ದುಡಿಮೆಯ ಮೂಲಕ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದವರು.
ಕೂಲಿ ಕೆಲಸದ ಮೂಲಕ ತಮ್ಮ ಜೀವನ ನಡೆಸುತ್ತಿದ್ದ ಮೂವರು ಡಿ.31ರ ಮಂಗಳವಾರ ಮುಂಜಾನೆ ಕಾಸರಕೋಡ ಭಾಗದಿಂದ ಹೊನ್ನಾವರ ಕಡೆ ಬರುವಾಗ ಹೊನ್ನಾವರ ಕಡೆಯಿಂದ ಮಂಗಳೂರಿನ ಕಡೆ ಚಲಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಗೌರೀಶ ನಾಯ್ಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಹೊನ್ನಾವರ ಪಿಎಸ್ಐ ಮಂಜುನಾಥ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Three killed in road accident at Honnavar after Mangalore bus rams bike. KSRTC bus was moving towards Mangalore during which it has rammed the bus which was on the bridge.