ಡಿ.ಜೆ ಹಳ್ಳಿ ಗಲಭೆ; ಸ್ಟೇಷನ್ ರಕ್ಷಣೆ ಮಾಡಿಕೊಳ್ಳದ ಪೊಲೀಸರು, ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ - ಡಿಕೆಶಿ

12-08-20 11:55 am       Headline Karnataka News Network   ಕರ್ನಾಟಕ

ನವೀನ್ ಕಟ್ಟಾ ಬಿಜೆಪಿ ಅಭಿಮಾನಿ. ಆತ ಬಿಜೆಪಿಗೆ ಮತ ಹಾಕಿದ್ದ ಬಗ್ಗೆಯೂ ಪೋಸ್ಟ್ ಮಾಡಿದ್ದಾನೆ. ನವೀನ್ ಪ್ರಚೋದನಕಾರಿ ಹೇಳಿಕೆ, ಪೋಸ್ಟ್ ಮಾಡುತ್ತಿದ್ದ. ನವೀನ್​ಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೂ ರಾಜಕೀಯ ಸಂಬಂಧ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಬೆಂಗಳೂರು, ಆಗಸ್ಟ್ 12: ನಿನ್ನೆಯ ಡಿಜಿ ಹಳ್ಳಿ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಕಾನೂನು ವಿರೋಧಿ ಕೃತ್ಯಕ್ಕೆ ನಮ್ಮ ಖಂಡನೆ ಇದೆ. ಯಾವುದೇ ಧರ್ಮ, ದೇವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳಿಗೆ ಖಂಡನೆ ಇದೆ. ನವೀನ್ ಕಟ್ಟಾ ಬಿಜೆಪಿ ಅಭಿಮಾನಿ. ಆತ ಬಿಜೆಪಿಗೆ ಮತ ಹಾಕಿದ್ದ ಬಗ್ಗೆಯೂ ಪೋಸ್ಟ್ ಮಾಡಿದ್ದಾನೆ. ನವೀನ್ ಪ್ರಚೋದನಕಾರಿ ಹೇಳಿಕೆ, ಪೋಸ್ಟ್ ಮಾಡುತ್ತಿದ್ದ. ನವೀನ್​ಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೂ ರಾಜಕೀಯ ಸಂಬಂಧ ಇಲ್ಲ. ನವೀನ್​ಗೆ ಬಿಜೆಪಿ ಜೊತೆ ನಿಕಟ ಸಂಪರ್ಕ ಇತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್, ರಾಮಲಿಂಗಾರೆಡ್ಡಿ, ಬಿ.ಕೆ. ಹರಿಪ್ರಸಾದ್, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ, ಸಲೀಂ ಅಹಮದ್, ನಾಸೀರ್ ಅಹಮದ್ ಭಾಗಿ ಈಶ್ವರ್ ಖಂಡ್ರೆ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಇಲ್ಲಿ ಮಾತನಾಡಿದ ಡಿಕೆಶಿ, ಪೊಲೀಸರು ದೂರು ಬಂದಾಗಲೇ ಕ್ರಮ ತೆಗೆದುಕೊಳ್ಳಬೇಕಿತ್ತು. ಘಟನೆಗೆ ಪೊಲೀಸರೇ ಕಾರಣ. ಅವರ ವಿಳಂಬವೇ ಕಾರಣ. ಪೊಲೀಸರು ಘಟನೆ ತಡೆಯಲು ವಿಫಲರಾಗಿದ್ದಾರೆ ಎಂದು ಆರೋಪ ಮಾಡಿದರು.

ಪೊಲೀಸರು ಶಾಸಕರು, ಶಾಸಕರ ಮನೆಗೂ ರಕ್ಷಣೆ ಕೊಡಲಿಲ್ಲ. ಪೊಲೀಸರು ಸುಮೋಟೋ ಅಡಿ ದೂರು ದಾಖಲಿಸಿ ಸಂಜೆಯೇ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಪೊಲೀಸರು ವಿಳಂಬ ಮಾಡಿದರು. ಆ ಭಾಗ ಸೂಕ್ಚ್ಮ ಪ್ರದೇಶ. ಫೇಸ್ ಬುಕ್ ಪೋಸ್ಟ್ ಬಂದಾಗ ಪೊಲೀಸರು ಯಾಕೆ ಸುಮ್ಮನಿದ್ದರು. ಪೊಲೀಸರಿಗೆ ಇದು ಗೊತ್ತಿದ್ದೂ ಸುಮ್ಮನಿದ್ದರು.  ಘಟನೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು. ಪೊಲೀಸ್ ಠಾಣೆಯನ್ನೇ ಪೊಲೀಸರು ರಕ್ಷಿಸಿಕೊಳ್ಳಲು ಆಗಲಿಲ್ಲ. ನಮ್ಮ ಶಾಸಕರಿಗೂ ರಕ್ಷಣೆ ಕೊಡಲಿಲ್ಲ. ಘಟನೆ ಹಿಂದೆ ಸಂಚು ಇದೆ. ಘಟನೆ ಬಗ್ಗೆ ಪರಿಶೀಲನೆಗೆ ನಮ್ಮ 6 ಜನ ನಾಯಕರ ತಂಡ ಹೋಗುತ್ತಿದೆ. ಜೊತೆಗೆ ನಾನು ಕೂಡ ಘಟನೆ ನಡೆದ ಸ್ಥಳಕ್ಕೆ ಹೋಗುತ್ತೇನೆ ಎಂದು ಹೇಳಿದರು.